ಚಾಮರಾಜನಗರ: ಒಮ್ಮೆ ಕೊರೊನಾ ಪಾಸಿಟಿವ್ ಮತ್ತೊಂದರಲ್ಲಿ ನೆಗೆಟಿವ್ ಜಿಲ್ಲೆಯ ಆರೋಗ್ಯ ಇಲಾಖೆ ಎಡವಟ್ಟು. ಈ ಎಡವಟ್ಟಿನ ಫಲಿತಾಂಶದಿಂದ ಯುವಕನೋರ್ವ ಪ್ರತಿಷ್ಠಿತ ಕಂಪನಿಯೊಂದರ ಉದ್ಯೋಗ ಸಂದರ್ಶನಕ್ಕೆ ಹಾಜರಾಗಲು ಸಾಧ್ಯವಾಗದೆ ಉದ್ಯೋಗದಿಂದ ವಂಚಿತನಾಗಿರುವ ಘಟನೆ ಚಾಮರಾಜನಗರ ಜಿಲ್ಲೆ ಗುಂಡ್ಲುಪೇಟೆಯಲ್ಲಿ ನಡೆದಿದೆ.
Advertisement
ಗುಂಡ್ಲುಪೇಟೆ ತಾಲೂಕು ಅಂಕಹಳ್ಳಿ ಗ್ರಾಮದ ಸುಮಂತ್ ಎಂಬ ಯುವಕ ಉದ್ಯೋಗ ಬಯಸಿ ಪ್ರತಿಷ್ಠಿತ ಕಂಪನಿಯೊಂದಕ್ಕೆ ಅರ್ಜಿ ಸಲ್ಲಿಸಿದ್ದ. ಸಂದರ್ಶನಕ್ಕೆ ಕೋವಿಡ್ ನೆಗೆಟಿವ್ ರಿಪೋರ್ಟ್ ಕಡ್ಡಾಯ ಹಿನ್ನಲೆಯಲ್ಲಿ ಈತ ಗುಂಡ್ಲುಪೇಟೆ ಸಾರ್ವಜನಿಕ ಆಸ್ಪತ್ರೆಯಲ್ಲಿ ಕೋವಿಡ್ ಟೆಸ್ಟ್ ಮಾಡಿಸಿದ್ದ ಸೋಮವಾರ ಬೆಳಗ್ಗೆ ಈತನ ಮೊಬೈಲ್‍ಗೆ ಪಾಸಿಟಿವ್ ವರದಿ ಬಂದಿತ್ತು. ಇದನ್ನೂ ಓದಿ: ರಾಜ್ಯದಲ್ಲಿ 20 ಸಾವಿರ ದಾಟಿದ ಕೊರೊನಾ ಪ್ರಕರಣ – 10 ಮಂದಿ ಸಾವು
Advertisement
Advertisement
ಗಾಬರಿಗೊಂಡು ತಮ್ಮ ಗ್ರಾಮದ ಸಮೀಪದಲ್ಲೇ ಇರುವ ಬೊಮ್ಮಲಾಪುರ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಗಂಟಲು ದ್ರವ ಕೊಟ್ಟು ಬಳಿಕ ಗುಂಡ್ಲುಪೇಟೆ ಕೋವಿಡ್ ಆಸ್ಪತ್ರೆಗೆ ದಾಖಲಾಗಿದ್ದ. ಆದರೆ ಬೊಮ್ಮಲಾಪುರದಲ್ಲಿ ಕೊಟ್ಟಿದ್ದ ಸ್ವ್ಯಾಬ್ ಪರೀಕ್ಷೆ ವರದಿ ನೆಗೆಟಿವ್ ಎಂದು ಬಂದಿದೆ. ಈಗಾಗಲೇ ಗುಂಡ್ಲುಪೇಟೆ ಕೋವಿಡ್ ಸೆಂಟರ್‌ಗೆ ದಾಖಲಾಗಿರುವ ಯುವಕ ಆರೋಗ್ಯ ಇಲಾಖೆಯ ಎಡವಟ್ಟಿನಿಂದ ಸಂದರ್ಶನಕ್ಕೆ ಹಾಜರಾಗಲು ಸಾಧ್ಯವಾಗದೆ ಉದ್ಯೋಗದಿಂದ ವಂಚಿತನಾಗಿ ಪರಿತಪಿಸುವಂತಾಗಿದೆ. ಇದನ್ನೂ ಓದಿ: ಮ್ಯಾಚ್‍ಬಾಕ್ಸ್ ನಲ್ಲಿ ಮಡಚಿಡುವ ಸೀರೆ ನೇಯ್ದ ನೇಕಾರ
Advertisement