-ಆರೋಪಿ ಇರೋ ಜೈಲಿನಲ್ಲಿ ಕೋವಿಡ್ ಆತಂಕ
-ಆರೋಪಿ ಜೊತೆ ಸೆಲ್ನಲ್ಲಿದ್ದ ಇಬ್ಬರಿಗೂ ಟೆಸ್ಟ್
ನವದೆಹಲಿ: ಅತ್ಯಾಚಾರಕ್ಕೊಳಗಾದ ಸಂತ್ರಸ್ತೆಗೆ ಕೊರೊನಾ ಸೋಂಕು ತಗುಲಿದ್ದು, ಆರೋಪಿಗಳಿರೋ ತಿಹಾರ್ ಜೈಲಿನಲ್ಲಿ ಕೋವಿಡ್-19 ಢವ ಢವ ಶುರುವಾಗಿದೆ.
Advertisement
ಕೆಲವು ದಿನಗಳ ಹಿಂದೆ ಆರೋಪಿಯನ್ನು ಆತ್ಯಾಚಾರ ಪ್ರಕರಣದಲ್ಲಿ ತಿಹಾರ್ ಜೈಲಿಗೆ ಶಿಫ್ಟ್ ಮಾಡಲಾಗಿತ್ತು. ಆರೋಪಿಯನ್ನು ಜೈಲ್ ನಂಬರ್ 2ರಲ್ಲಿ ಇರಿಸಲಾಗಿತ್ತು. ಮೇ 9ರಂದು ಆರೋಪಿ ಅತ್ಯಾಚಾರ ಎಸಗಿದ್ದ ಸಂತ್ರಸ್ತೆಗೆ ಕೊರೊನಾ ಸೋಂಕು ತಗುಲಿರುವ ವಿಚಾರ ಬೆಳಕಿಗೆ ಬಂದಿದೆ. ವಿಚಾರ ತಿಳಿಯುತ್ತಿದ್ದಂತೆ ಎಚ್ಚೆತ್ತ ಜೈಲಿನಾಧಿಕಾರಿಗಳು ಆರೋಪಿ ಸೇರಿದಂತೆ ಇಬ್ಬರನ್ನು ಕೋವಿಡ್ 19 ಪರೀಕ್ಷೆಗೆ ಒಳಪಡಿಸಿದ್ದಾರೆ.
Advertisement
Advertisement
ಕೋವಿಡ್-19 ಪರೀಕ್ಷೆಗೊಳಗಾದ ಮೂವರನ್ನು ಪ್ರತ್ಯೇಕ ಸೆಲ್ ನಲ್ಲಿರಿಸಿ ಕ್ವಾರಂಟೈನ್ ಮಾಡಲಾಗಿದೆ. ಕೋವಿಡ್-19 ಆತಂಕದ ಹಿನ್ನೆಲೆ ಜೈಲಿಗೆ ಆಗಮಿಸೋರಿಗೆ ಥರ್ಮಲ್ ಸ್ಕ್ರೀನಿಂಗ್ ಮಾಡಲಾಗ್ತಿದೆ. ಸದ್ಯ ಮೂವರ ವರದಿಗಾಗಿ ಜೈಲಿನ ಅಧಿಕಾರಿಗಳು ಕಾಯುತ್ತಿದ್ದಾರೆ.