ಧಾರವಾಡ: ಕೊರೊನಾ ವೈರಸ್ ನಿಯಂತ್ರಣಕ್ಕಾಗಿ ಹಗಲಿರುಳು ಕರ್ತವ್ಯ ನಿರ್ವಹಿಸುತ್ತಿರುವ ಜೊತೆಗೆ ಪೊಲೀಸ್ ಇಲಾಖೆಯ ಸಿಬ್ಬಂದಿ ಕರ್ತವ್ಯದೊಂದಿಗೆ ಮಾನವೀಯತೆ ಮೆರೆದಿದ್ದಾರೆ.
ಧಾರವಾಡ ಗ್ರಾಮೀಣ ಪೊಲೀಸ್ ಠಾಣೆಯ ಪಿಎಸ್‍ಐ ಮಹೇಂದ್ರ ನಾಯಕ್ 2.50 ಲಕ್ಷ ಮೌಲ್ಯದ ದಿನಸಿಯನ್ನು ತಮ್ಮ ಸ್ವಂತ ಹಣದಲ್ಲಿ ಠಾಣಾ ವ್ಯಾಪ್ತಿಯ ಅಸಹಾಯಕರಿಗೆ ಹಂಚಿದ್ದಾರೆ. ಮೂಲತಃ ವಿಜಯಪುರ ತಾಲೂಕಿನ ಐನಾಪುರ ತಾಂಡಾದ ನಿವಾಸಿಯಾದ ಪಿಎಸ್‍ಐ, ಬಡತನದ ಹಿನ್ನೆಲೆಯಿಂದ ಬಂದಿದ್ದರು. ಹೀಗಾಗಿ ಲಾಕ್‍ಡೌನ್ ಸಮಯದಲ್ಲಿ ಹಸಿದವರಿಗೆ, ಅಸಹಾಯಕರಿಗೆ ನಿತ್ಯ ನೆರವಾಗುತ್ತಿದ್ದಾರೆ.
Advertisement
Advertisement
ತಮ್ಮ ಠಾಣೆಯ ಸುಮಾರು 35ಕ್ಕೂ ಹೆಚ್ಚು ಸಿಬ್ಬಂದಿ, ಬೀಟ್ ಪೊಲೀಸರ ಸಹಾಯದಿಂದ ಆಯಾ ಗ್ರಾಮಗಳಲ್ಲಿ ವಾಸಿಸುತ್ತಿರುವ ನಿರ್ಗತಿಕರು, ಬಡವರು, ಕೂಲಿಕಾರ್ಮಿಕರು ದಿನಸಿ ವಿತರಣೆ ಮಾಡುತ್ತಿದ್ದಾರೆ. ಅಲ್ಲದೇ ಮಕ್ಕಳಿಲ್ಲದ ವಯೋವೃದ್ಧರು, ಪಡಿತರ ಚೀಟಿ ಇಲ್ಲದೆ ಯಾವುದೇ ಸೌಲಭ್ಯ ಪಡೆಯದಿರುವ ಕುಟುಂಬಗಳನ್ನು ಗುರುತಿಸಿ, ತಮ್ಮ ಸಿಬ್ಬಂದಿ ಸಹಾಯದಿಂದ ತಮ್ಮದೆ ವಾಹನದಲ್ಲಿ ನೇರವಾಗಿ ದಿನಸಿಯನ್ನು ಮನೆಗೆ ತಲುಪಿಸಿದ್ದಾರೆ.
Advertisement
ಧಾರವಾಡ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ವರ್ತಿಕಾ ಕಟಿಯಾರ್ ಅವರು ಪಿಎಸ್‍ಐ ಮಹೇಂದ್ರ ನಾಯಕ್ ಅವರ ಕಾರ್ಯ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಹಳ್ಳಿಯ 300 ಕುಟುಂಬಗಳಿಗೆ ಒಟ್ಟು 3 ಕ್ವಿಂಟಲ್ ರವೆ, 3 ಕ್ವಿಂಟಲ್ ಬೆಲ್ಲ, 5 ಕ್ವಿಂಟಲ್ ಅಕ್ಕಿ, 250 ಲೀಟರ್ ಅಡುಗೆ ಎಣ್ಣೆ ಮತ್ತು ಸುಮಾರು 20 ಸಾವಿರ ಸಂತೂರ್ ಸಾಬೂನುಗಳನ್ನು ಹಂಚಿದ್ದಾರೆ.