ಬೆಂಗಳೂರು: ರಾಜ್ಯ ಸರ್ಕಾರ ಕೊನೆಗೂ ಕೊರೋನಾ ಲಾಕ್‍ಡೌನ್ ಸಡಿಲಿಕೆ ಮಾಡಿದೆ. ಪಾದರಾಯನಪುರ ಗಲಭೆ ಬಳಿಕ ಮೇ ಮೂರವರೆಗೂ ಯಾವುದೇ ಸಡಿಲಿಕೆ ಇಲ್ಲ ಎಂದಿದ್ದ ಯಡಿಯೂರಪ್ಪ ನೇತೃತ್ವದ ಸರ್ಕಾರ ಇವತ್ತು ಯೂಟರ್ನ್ ತೆಗೆದುಕೊಂಡಿದೆ.
ಕೇಂದ್ರ ಸರ್ಕಾರದ ಮಾರ್ಗಸೂಚಿಗಳ ಅನ್ವಯ ಇಂದು ಮಧ್ಯರಾತ್ರಿಯಿಂದ ಜಾರಿಗೆ ಬರುವಂತೆ ಭಾಗಷಃ ಲಾಕ್‍ಡೌನ್ ಸಡಿಲಿಕೆ ಮಾಡಿ ತೀರ್ಮಾನ ತೆಗೆದುಕೊಂಡಿದೆ. ಹಾಟ್ ಸ್ಪಾಟ್, ನಾನ್ ಹಾಟ್‍ಸ್ಪಾಟ್ ಮತ್ತು ಹಸಿರು ವಲಯದ ಸೂತ್ರಗಳನ್ನು ಪಕ್ಕಕ್ಕೆ ಇಟ್ಟ ರಾಜ್ಯ ಸರ್ಕಾರ, ಕೊರೋನಾ ಸೋಂಕು ಹೆಚ್ಚಿರುವ ಕಂಟೈನ್‍ಮೆಂಟ್ ಜೋನ್‍ಗಳನ್ನು ಹೊರತುಪಡಿಸಿ ಉಳಿದ ಕಡೆ ಲಾಕ್‍ಡೌನ್ ಸಡಿಲ ಮಾಡುತ್ತಿದೆ.
Advertisement
Advertisement
ಸಡಿಲಿಕೆ ನೀಡಿದರೂ ಷರತ್ತುಗಳು ಅನ್ವಯ ಆಗುತ್ತವೆ. ಕ್ವಾರಂಟೇನ್‍ನಲ್ಲಿರುವವರು ಹೊರ ಬರುವಂತೆ ಇಲ್ಲ. ಬೆಂಗಳೂರಿನಲ್ಲಿ ತಂಬಾಕು, ಗುಟ್ಕಾ, ಸಿಗರೇಟು ಮಾರಾಟ ನಿಷೇಧಿಸಿ ಬಿಬಿಎಂಪಿ ಸಹ ಆದೇಶ ಹೊರಡಿಸಿದೆ.
Advertisement
ನಾಳೆಯಿಂದ ಏನಿರುತ್ತೆ..?
* ತುರ್ತು ಸಂದರ್ಭಗಳಲ್ಲಿ ಖಾಸಗಿ ವಾಹನಗಳ ಸಂಚಾರ
* ಮನೆ – ಕಚೇರಿ ನಡುವೆ ಸಂಚಾರಕ್ಕೆ ಪಾಸ್ ಕಡ್ಡಾಯ
* ಎಲ್ಲಾ ರೀತಿಯ ಕೃಷಿ, ತೋಟಗಾರಿಕಾ ಚಟುವಟಿಕೆ
* ಎಪಿಎಂಸಿ, ಬೀಜ, ಗೊಬ್ಬರ, ಕ್ರಿಮಿನಾಶಕಗಳ ಅಂಗಡಿ
* ಮೀನುಗಾರಿಕೆ, ಹೈನೋದ್ಯಮ, ಕುಕ್ಕಟೋದ್ಯಮ
* ಬ್ಯಾಂಕ್ ಚಟುವಟಿಕೆ, ಎಟಿಎಂ, ಷೇರುಪೇಟೆ
Advertisement
* ಎಲ್ಲಾ ರೀತಿಯ ಪಿಂಚಣಿ ವಿತರಿಸಲು ಅವಕಾಶ
* ಅಂಗನವಾಡಿಗಳಿಗೆ ಷರತ್ತುಬದ್ಧ ಅನುಮತಿ (ಮಕ್ಕಳು, ಗರ್ಭಿಣಿಯರ ಮನೆಗಳಿಗೆ ಪೌಷ್ಠಿಕಾಂಶ ಆಹಾರ ತಲುಪಿಸುವ ಕ್ರಮ)
* ಆನ್‍ಲೈನ್ ತರಗತಿ, ಕೋರಿಯರ್ ಸೇವೆ
* ಎಲೆಕ್ಟ್ರಿಷಿಯನ್, ಮೋಟಾರ್ ಮೆಕಾನಿಕ್, ಪ್ಲಂಬರ್, ಕಾರ್ಪೆಂಟರ್ ಸೇವೆ
* ನರೇಗಾ ಯೋಜನೆಯಡಿ ನೀರಾವರಿ ಕಾಮಗಾರಿ
* ತುರ್ತು ಮತ್ತು ಅಗತ್ಯ ವಸ್ತುಗಳ ತಯಾರಿಕಾ ಘಟಕ
* ಗ್ರಾಮೀಣ ಪ್ರದೇಶಗಳಲ್ಲಿ ಆಹಾರ ಸಂಸ್ಕರಣೆ ಘಟಕ
* ಗ್ರಾಮೀಣ ಪ್ರದೇಶಗಳಲ್ಲಿ ರಸ್ತೆ, ಕಟ್ಟಡ ನಿರ್ಮಾಣ, ನೀರಾವರಿ ಕಾಮಗಾರಿ
* ಕೈಗಾರಿಕಾ ಪ್ರದೇಶಗಳಲ್ಲಿ ಸ್ಥಳೀಯ ಕಾರ್ಮಿಕ ಬಳಸಿಕೊಂಡು ನಿರ್ಮಾಣ
* ಮೆಟ್ರೋ ರೈಲು ಕಾಮಗಾರಿ (ಸ್ಥಳೀಯ ಕಾರ್ಮಿಕರನ್ನು ಮಾತ್ರ ಬಳಸಿಕೊಳ್ಳಬೇಕು)
* ಸೀಮೆಂಟ್, ಸ್ಟೀಲ್, ಜಲ್ಲಿ, ಟೈಲ್ಸ್, ಇಟ್ಟಿಗೆ ಸಾಗಿಸಲು ಅವಕಾಶ (ಇಬ್ಬರು ಚಾಲಕರು, ಓರ್ವ ಕ್ಲೀನರ್)
* ಹೈವೇ ಪಕ್ಕದ ಡಾಬಾ, ಟ್ರಕ್ ರಿಪೇರಿ ಶಾಪ್‍ಗಳು (20 ಕಿಲೋಮೀಟರ್ ಅಂತರ)
* ಪಾರ್ಸೆಲ್ ಮತ್ತು ಸರಕು ಸಾಗಣೆ ರೈಲು, ಕಾರ್ಗೋ ವಿಮಾನ
* ಇ-ಕಾಮರ್ಸ್ ಸೇವೆ (ಅಗತ್ಯ ವಸ್ತುಗಳ ಪೂರೈಕೆಗಷ್ಟೇ ಅವಕಾಶ)
* ತುರ್ತು ಮತ್ತು ಅಗತ್ಯ ಸೇವೆ ಒದಗಿಸುವ ಸರ್ಕಾರಿ ಕಚೇರಿಗಳು
* ಸಚಿವರು, ಉನ್ನತಧಿಕಾರಿಗಳು ಕಚೇರಿಗೆ ಹಾಜರಾಗುವುದು ಕಡ್ಡಾಯ
* ಶೇ.33ರಷ್ಟು ಕೆಳ ಹಂತದ ಅಧಿಕಾರಿಗಳಿಂದ ಕಚೇರಿ ನಡೆಸಬೇಕು
* ಶೇ.33ರಷ್ಟು ನೌಕರರೊಂದಿಗೆ ಐಟಿ-ಬಿಟಿ ಕಚೇರಿಗಳು ಓಪನ್
ಯಾವುದಕ್ಕೆ ಇಲ್ಲ ರಿಲೀಫ್..?
> ಬಸ್, ರೈಲು, ನಮ್ಮ ಮೆಟ್ರೋ, ವಿಮಾನ ಸಂಚಾರ
> ಅಂತರ್ ಜಿಲ್ಲೆ, ಅಂತರ್ ರಾಜ್ಯಗಳ ನಡುವಣ ಸಂಚಾರ
> ಶೈಕ್ಷಣಿಕ ಸಂಸ್ಥೆಗಳು, ತರಬೇತಿ ಕೇಂದ್ರಗಳು
> ಕೈಗಾರಿಕೆ, ವಾಣಿಜ್ಯ ಚಟುವಟಿಕೆ (ಅಗತ್ಯ ಸೇವೆ ಹೊರತುಪಡಿಸಿ)
> ಆತಿಥ್ಯ ಸೇವೆಗಳು (ಅಗತ್ಯ ಸೇವೆ ಹೊರತುಪಡಿಸಿ)
> ಓಲಾ, ಉಬರ್ ಕ್ಯಾಬ್, ಟ್ಯಾಕ್ಸಿ, ಆಟೋ ರಿಕ್ಷಾ
> ಥಿಯೇಟರ್, ಶಾಪಿಂಗ್ ಮಾಲ್, ಜಿಮ್, ಈಜುಕೊಳ
> ಹೋಟೆಲ್, ರೆಸ್ಟೋರೆಂಟ್, ಬಾರ್, ವೈನ್ ಶಾಪ್
> ಎಲ್ಲಾ ರೀತಿಯ ಸಭೆ ಸಮಾರಂಭಗಳು
> ಅಂತ್ಯಕ್ರಿಯೆಯಲ್ಲಿ 20ಕ್ಕೂ ಹೆಚ್ಚು ಮಂದಿ ಪಾಲ್ಗೊಳ್ಳುವಂತಿಲ್ಲ
ಕಡ್ಡಾಯವಾಗಿ ಏನು ಪಾಲಿಸಬೇಕು?
> ಕಚೇರಿ ಮತ್ತು ಸಾರ್ವಜನಿಕ ಸ್ಥಳಗಳಲ್ಲಿ ಮಾಸ್ಕ್ ಧರಿಸುವುದು
> ಸಾರ್ವಜನಿಕ ಸ್ಥಳಗಳಲ್ಲಿ ಉಗುಳುವುದು ನಿಷೇಧ, ಸಾಮಾಜಿಕ ಅಂತರ
> ಸಾರ್ವಜನಿಕ ಸ್ಥಳಗಳಲ್ಲಿ 5ಕ್ಕಿಂತ ಹೆಚ್ಚು ಮಂದಿ ನಿಲ್ಲುವಂತಿಲ್ಲ
> ಕಚೇರಿಗಳಲ್ಲಿ ಥರ್ಮಲ್ ಸ್ಕ್ರೀನಿಂಗ್, ಹ್ಯಾಂಡ್ ಸ್ಯಾನಿಟೈಸರ್
> 65 ವರ್ಷ ಮೇಲ್ಪಟ್ಟವರು, ಚಿಕ್ಕ ಮಕ್ಕಳ ತಾಯಂದಿರಿಗೆ ಮನೆಯಿಂದಲೇ ಕೆಲಸ
> ಆರೋಗ್ಯ ಸೇತು ಆ್ಯಪ್ ಬಳಕೆ ಕಡ್ಡಾಯ, ದೊಡ್ಡ ಸಭೆ ಮಾಡುವಂತಿಲ್ಲ
> ಡಿಸಿ ಅನುಮತಿ ಪಡೆದು ಮದುವೆ, ಇತ್ಯಾದಿ ಸಮಾರಂಭ