ಅಕ್ರಮ ಮದ್ಯ ನಾಶದ ವೇಳೆ ಬಾಟಲಿ ದೋಚಿ ಓಡಿದ್ರು!

Public TV
1 Min Read
andhra pradesh illigal liquor

ಅಮರಾವತಿ: ಅಕ್ರಮ ಮದ್ಯವನ್ನು ನಾಶಪಡಿಸುವಾಗ ಪೊಲೀಸರನ್ನು ಲೆಕ್ಕಿಸದೇ ಜನರು ಬಾಟಲಿಗಳನ್ನು ಹಿಡಿದು ಪರಾರಿಯಾದ ಘಟನೆ ಆಂಧ್ರಪ್ರದೇಶ (Andhra Pradesh) ಅಮರಾವತಿ (Amaravati) ಬಳಿಯ ಗುಂಟೂರು ಗ್ರಾಮದಲ್ಲಿ ನಡೆದಿದೆ.

ಪೊಲೀಸರು ವಶಪಡಿಸಿಕೊಂಡ ಮದ್ಯವನ್ನು ನಾಶ ಮಾಡುತ್ತಿರುವ ವೇಳೆ ಮದ್ಯಪ್ರಿಯರು ಬಾಟಲಿ ಹಿಡಿದು ಓಡುವ ದೃಶ್ಯ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಇದನ್ನೂ ಓದಿ: ಶೀಘ್ರದಲ್ಲೇ ಬರಲಿದೆ ಸ್ಯಾಟಲೈಟ್ ಆಧಾರಿತ ಟೋಲ್ ವ್ಯವಸ್ಥೆ; ಮೊದಲ 20 ಕಿಮೀವರೆಗೆ ಫ್ರೀ

ವಿವಿಧ ಪ್ರಕರಣಗಳಲ್ಲಿ ಅಕ್ರಮ ಮದ್ಯವನ್ನು ಪೊಲೀಸರು ವಶಪಡಿಸಿಕೊಂಡಿದ್ದರು. ಸುಮಾರು 50 ಲಕ್ಷ ರೂ. ಮೌಲ್ಯದ 24,031 ಮದ್ಯದ ಬಾಟಲಿಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದು ಎಸ್‌ಪಿ ಸತೀಶ್ ಕುಮಾರ್ ನೇತೃತ್ವದಲ್ಲಿ ನಲ್ಲಚೆರುವು ಡಂಪಿಂಗ್ ಯಾರ್ಡ್ ನಲ್ಲಿ ವಿಲೇವಾರಿ ಮಾಡುವ ಸಂದರ್ಭದಲ್ಲಿ ಜನ ಮದ್ಯ ಬಾಟಲಿಗಾಗಿ ಮುಗಿಬಿದ್ದರು. ಇದನ್ನೂ ಓದಿ: ಮುಡಾ ಕೇಸ್‌ ತನಿಖೆಗೆ ಲೋಕಾಯುಕ್ತ ಎಂಟ್ರಿ – 18 ಅಧಿಕಾರಿಗಳಿಗೆ ನೋಟಿಸ್

ಸಾಮಾನ್ಯವಾಗಿ ಮದ್ಯದ ಬಾಟಲಿಗಳನ್ನು ರೋಡ್ ರೋಲರ್ ಮೂಲಕ ನಾಶ ಮಾಡಲಾಗುತ್ತೆ, ಆದರೆ ಸೋಮವಾರ ಪೊಕ್ಲೈನ್ ಯಂತ್ರದ ಮೂಲಕ ನಾಶ ಮಾಡಲು ಮುಂದಾಗಿದ್ದರಿಂದ ಸ್ವಲ್ಪ ವಿಳಂಬವಾಗಿತ್ತು. ಇದರ ಪ್ರಯೋಜನ ಪಡೆದ ಜನರು ಮದ್ಯದ ಬಾಟಲಿಗಳ ಲೂಟಿಗೆ ಮುಂದಾದರು. ಇದನ್ನೂ ಓದಿ: ಟಾಟಾ ಕಾರುಗಳ ಬೆಲೆ ಭಾರೀ ಕಡಿತ

ಜೋಡಿಸಿಟ್ಟಿದ್ದ ಬಾಟಲಿಗಳತ್ತ ನುಗ್ಗಿದ ಜನರು ಪೊಲೀಸರ ಎದುರೇ ಕೈಗೆ ಸಿಕ್ಕಷ್ಟು ಬಾಟಲಿಗಳನ್ನ ಹಿಡಿದು ಓಡಿಹೋದರು. ಅಲ್ಲೆ ಇದ್ದ ಪೊಲೀಸರು ಜನರನ್ನು ತಡೆಯಲು ಸಾದ್ಯವಾಗಲಿಲ್ಲ.

ನಾಶಕ್ಕೆ ಮುಂದಾಗಿದ್ದ ಬಾಟಲಿಗಳನ್ನು ಹೊತ್ತೊಯ್ದವರ ವಿರುದ್ಧ ಪೊಲೀಸರು ಕ್ರಮಕ್ಕೆ ಮುಂದಾಗಿದ್ದಾರೆ ಎಂದು ವರದಿಯಾಗಿದೆ. ಘಟನೆಯಲ್ಲಿ ಭಾಗಿಯಾಗಿರುವವರ ಪತ್ತೆಗಾಗಿ ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ. ಇದನ್ನೂ ಓದಿ: ರಾಹುಲ್ ಗಾಂಧಿಯನ್ನು ಕೋರ್ಟ್‌ಗೆಳೆಯುತ್ತೇವೆ; ಸಿಖ್ ಸಮುದಾಯದ ಬಗ್ಗೆ ಹೇಳಿಕೆಗೆ ಎಚ್ಚರಿಕೆ ನೀಡಿದ ಬಿಜೆಪಿ ಮುಖಂಡ

Share This Article