ಗಾಂಧಿನಗರ: ಮಹಿಳೆಯೊಬ್ಬರು ಹಾಕಿಕೊಂಡಿದ್ದ ಇಯರ್‌ಫೋನ್ ಲಿಫ್ಟ್ ನಲ್ಲಿ ಸಿಕ್ಕಿಬಿದ್ದ ಪರಿಣಾಮ ಆಕೆಯ ದೇಹದಿಂದ ರುಂಡ ಬೇರಾದ ದುರಂತ ಗುಜರಾತ್‍ನ ವಡೋದರದಲ್ಲಿ ನಡೆದಿದೆ.
ವಡೋದರದ ಪ್ಲಾಸ್ಟಿಕ್ ಉತ್ಪನ್ನ ಮಾಡುವ ಫ್ಯಾಕ್ಟರಿಯಲ್ಲಿ ಮಂಗಳವಾರ ಬೆಳಗ್ಗೆ ಈ ಅವಘಡ ಸಂಭವಿಸಿದೆ. ಮಹಿಳೆಯೂ ಫ್ಯಾಕ್ಟರಿಯಲ್ಲಿ ಕೆಲಸ ಮಾಡುತ್ತಿದ್ದ ಉತ್ತರ ಪ್ರದೇಶದ ಸುಶೀಲ ವಿಶ್ವಕರ್ಮ ಎಂದು ಗುರುತಿಸಲಾಗಿದೆ.
Advertisement
Advertisement
ಬೆಳಗ್ಗೆ 8 ಗಂಟೆಗೆ ಫ್ಯಾಕ್ಟರಿಗೆ ಬಂದಿದ್ದ ಮಹಿಳೆ, ಮೂರನೇ ಮಹಡಿಗೆ ಹೋಗಲು ನೆಲ ಮಹಡಿಯಲ್ಲಿ ಲಿಫ್ಟ್ ಹತ್ತಿದ್ದಾಳೆ. ಆದರೆ ಲಿಫ್ಟ್ ಹತ್ತುವ ವೇಳೆ ಆಕೆ ಹಾಕಿಕೊಂಡಿದ್ದ ಇಯರ್‌ಫೋನ್ ಲಿಫ್ಟ್ ಬಾಗಿಲ ಸಂಧಿಯಲ್ಲಿ ಸಿಕ್ಕಿಬಿದ್ದಿದ್ದು, ಅದನ್ನು ತೆಗೆಯುವಷ್ಟರಲ್ಲಿ ಲಿಫ್ಟ್ ಹೊರಟ ಪರಿಣಾಮ ಮಹಿಳೆಯ ತಲೆ ತುಂಡಾಗಿ ಮೃತಪಟ್ಟಿದ್ದಾಳೆ.
Advertisement
Advertisement
ಫ್ಯಾಕ್ಟರಿಯಲ್ಲಿ ಹೆಚ್ಚಿನ ಸರಕುಗಳನ್ನು ಸಾಗಣೆ ಮಾಡಲು ನೆರವಾಗಲಿ ಎಂದು ಲಿಫ್ಟ್ ಗೆ ಮೇಲ್ಛಾವಣೆಯ ವ್ಯವಸ್ಥೆ ಮಾಡಿಸಿರಲಿಲ್ಲ. ಹೀಗಾಗಿ ಲಿಫ್ಟ್ ಮೇಲುಗಡೆ ಹೊರಟಾಗ ಇಯರ್‌ಫೋನ್ ತೆಗೆಯಲು ಹೋಗಿ ಮಹಿಳೆಯ ತಲೆ ಕಬ್ಬಿಣದ ಸರಳಿನ ಬಾಗಿಲಿಗೆ ಸಿಕ್ಕಿ ತುಂಡಾಗಿ ನೆಲ ಮಹಡಿಗೆ ಬಿದ್ದರೆ, ಆಕೆಯ ದೇಹ ಲಿಫ್ಟ್ ಮೂಲಕ ಸಾಗಿ ಮೂರನೇ ಮಹಡಿ ತಲುಪಿತ್ತು.
ಅಗ್ನಿಶಾಮಕ ದಳದ ಸಹಾಯ ಪಡೆದು ಮಹಿಳೆಯ ತಲೆ ಹಾಗೂ ದೇಹವನ್ನು ಹೊರತಗೆಯಲಾಯಿತು. ನಂತರ ಮರಣೋತ್ತರ ಪರೀಕ್ಷೆ ಮುಗಿದ ಬಳಿಕ ಮಹಿಳೆಯ ಶವವನ್ನು ಆಕೆಯ ಕುಟುಂಬಕ್ಕೆ ಪೊಲೀಸರು ಒಪ್ಪಿಸಿದ್ದಾರೆ.
ಈ ಸಂಬಂಧ ಬಾಪೋಡ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಈ ಘಟನೆ ಸಂಬಂಧ ಲಿಫ್ಟ್ ನಲ್ಲಿ ಏನಾದರೂ ಲೋಪದೋಷ ಇದೆಯೇ ಎನ್ನುವುದರ ಬಗ್ಗೆ ತನಿಖೆ ಕೈಗೊಂಡಿದ್ದಾರೆ.