ಸಿಡ್ನಿ: ನಿರಾಶ್ರಿತ ವೃದ್ಧರೊಬ್ಬರ ಕಳೆದು ಹೋಗಿದ್ದ ಇಲಿಯನ್ನು ಪೊಲೀಸರು ಹುಡುಕಿ ಕೊಟ್ಟಿರುವ ಅಪರೂಪದ ಘಟನೆ ಆಸ್ಟ್ರೇಲಿಯಾದಲ್ಲಿ ನಡೆದಿದ್ದು, ಸದ್ಯ ಪೊಲೀಸರು ಇಲಿಯನ್ನು ವೃದ್ಧರಿಗೆ ಒಪ್ಪಿಸುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗಿದೆ.
ಹೌದು. ಇದೇನಪ್ಪ ಕಳೆದು ಹೋಗಿರುವ ವಸ್ತು ಅಥವಾ ಮನುಷ್ಯರನ್ನು ಪೊಲೀಸರು ಪತ್ತೆ ಹಚ್ಚಿರುವ ಬಗ್ಗೆ ಕೇಳಿದ್ದೇವೆ, ನೋಡಿದ್ದೇವೆ. ಆದರೆ ಇಲಿಯನ್ನು ಪೊಲೀಸರು ಹುಡುಕಿ ಕೊಟ್ಟಿರೋದು ವಿಚಿತ್ರ ಅನಿಸಬಹುದು. ಆದ್ರೆ ಇದು ಸತ್ಯ. ಆಸ್ಟ್ರೇಲಿಯಾದಲ್ಲಿ ನಿರಾಶ್ರಿತ ವೃದ್ಧ ತನ್ನ ಜೊತೆಗೆ ಯಾರೂ ಇಲ್ಲವೆಂದು ಒಂದು ಇಲಿಯನ್ನು ಸಾಕಿದ್ದರು. ಅದಕ್ಕೆ ಲೂಸಿ ಎಂದು ನಾಮಕರಣ ಕೂಡ ಮಾಡಿ, ಪ್ರೀತಿಯಿಂದ ಸಾಕುತ್ತಿದ್ದರು. ಆದ್ರೆ ಆ ಇಲಿಯನ್ನು ಮಾಲೀಕ ಸಾರ್ವಜನಿಕ ಶೌಚಾಲಯಕ್ಕೆ ಹೋಗುವಾಗ ಹೊರಗೆ ಇಟ್ಟು ಹೋಗಿದ್ದರಂತೆ. ಆಗ ಅದನ್ನು ಯಾರೋ ಬೀದಿಲಿ ಬಿಟ್ಟು ಹೋಗಿದ್ದಾರೆಂದು ಭಾವಿಸಿ ಮಹಿಳೆಯೊಬ್ಬರು ಎತ್ತಿಕೊಂಡು ಹೋಗಿದ್ದಾರೆ.
Advertisement
Advertisement
ಶೌಚಾಲಯದಿಂದ ಹೊರಕ್ಕೆ ಬಂದ ಬಳಿಕ ಪ್ರೀತಿಯ ಇಲಿ ಕಾಣದೇ ಈ ವೃದ್ಧ ಕಂಗಾಲಾಗಿದ್ದು, ಕಳೆದು ಹೋಗಿರುವ ಇಲಿಯನ್ನು ಹುಡುಕಿಕೊಡಿ ಎಂದು ಪೊಲೀಸರಿಗೆ ದೂರು ನೀಡಿದ್ದರು.
Advertisement
ವೃದ್ಧರ ಅಳಲನ್ನು ನೋಡಲಾಗದೇ ನ್ಯೂ ಸೌಥ್ ವೇಲ್ಸ್ ಪೊಲೀಸರ ತಮ್ಮ ಅಧಿಕೃತ ಫೇಸ್‍ಬುಕ್ ಖಾತೆಯಲ್ಲಿ ಇಲಿ ಕಾಣೆಯಾಗಿದೆ ಎಂದು ಪ್ರಕಟಿಸಿದ್ದರು. ಕೊನೆಗೂ ಪೊಲೀಸರು ಇಲಿಯನ್ನು ಪತ್ತೆ ಹಚ್ಚಿ, ನಂತರ ವೃದ್ಧರಿಗೆ ಇಲಿಯನ್ನು ಒಪ್ಪಿಸಿ, ಆ ದೃಶ್ಯದ ವಿಡಿಯೋವನ್ನು ಫೇಸ್‍ಬುಕ್ ಖಾತೆಯಲ್ಲಿ ಪೊಲೀಸರು ಹಂಚಿಕೊಂಡಿದ್ದಾರೆ.
Advertisement
ಈ ವಿಡಿಯೋ ಸದ್ಯ ನೆಟ್ಟಿಗರ ಮನ ಗೆದ್ದಿದ್ದು, 1 ಲಕ್ಷಕ್ಕಿಂತಲೂ ಹೆಚ್ಚು ಬಾರಿ ವಿಡಿಯೋ ವೀಕ್ಷಣೆಯಾಗಿದೆ. ಹಾಗೆಯೇ 10 ಸಾವಿರಕ್ಕೂ ಹೆಚ್ಚು ಕಮೆಂಟ್ಸ್ ಹಾಗೂ 8 ಸಾವಿರಕ್ಕೂ ಹೆಚ್ಚು ಮಂದಿ ಶೇರ್ ಮಾಡಿದ್ದಾರೆ. ಈ ಮೂಲಕ ಪೊಲೀಸರ ಈ ಪ್ರಾಮಾಣಿಕ ಕಾರ್ಯಕ್ಕೆ ಎಲ್ಲರೂ ಮೆಚ್ಚುಗೆ ಸೂಚಿಸಿದ್ದಾರೆ.
https://www.facebook.com/nswpoliceforce/videos/2381018858800298/