ನವದೆಹಲಿ: ಶ್ರದ್ಧಾ ವಾಕರ್ (Shraddha Walker) ಕೊಲೆ ಪ್ರಕರಣದ ತನಿಖೆಯನ್ನು ದೆಹಲಿ ಪೊಲೀಸರು ತೀವ್ರಗೊಳಿಸಿದ್ದಾರೆ. ಶ್ರದ್ಧಾ ತಲೆಯ ಶೋಧಕ್ಕಾಗಿ ಮೆಹ್ರೌಲಿ ಅರಣ್ಯ ಪ್ರದೇಶದಲ್ಲಿರುವ ಕೆರೆಯ ನೀರನ್ನೇ ಖಾಲಿ ಮಾಡುವ ಸಾಹಸಕ್ಕೆ ಪೊಲೀಸರು ಕೈ ಹಾಕಿದ್ದಾರೆ.
ಇಂದಿನಿಂದ ಕೆರೆಯ ನೀರನ್ನು ಖಾಲಿ ಮಾಡುವ ಪ್ರಕ್ರಿಯೆ ಆರಂಭವಾಗಿದೆ. ಶ್ರದ್ಧಾ ತಲೆಯನ್ನು ಕೆರೆಗೆ ಎಸೆದಿದ್ದಾಗಿ ಸೈಕೋ ಕಿಲ್ಲರ್ ಅಫ್ತಾಬ್ (Aftad) ವಿಚಾರಣೆ ವೇಳೆ ಪೊಲೀಸರ ಮುಂದೆ ಬಾಯ್ಬಿಟ್ಟಿದ್ದ. ಇದನ್ನೂ ಓದಿ: ಶ್ರದ್ಧಾ ಭೀಕರ ಹತ್ಯೆ ತೆರೆಯ ಮೇಲೆ ತರಲು ಪ್ಲ್ಯಾನ್ – ಸಿನಿಮಾ ನಿರ್ಮಾಣ ಘೋಷಿಸಿದ ನಿರ್ದೇಶಕ ಮನೀಶ್ ಸಿಂಗ್
Advertisement
Advertisement
ಅಫ್ತಾಬ್ ಹೇಳಿಕೆ ಆಧರಿಸಿ ಪೊಲೀಸರು ಈ ಕಾರ್ಯಾಚರಣೆ ನಡೆಸಿದ್ದಾರೆ. ದೆಹಲಿಯ ಮುನ್ಸಿಪಲ್ ಕಾರ್ಪೊರೇಷನ್ ಸಿಬ್ಬಂದಿಯೊಂದಿಗೆ ದೆಹಲಿ ಪೊಲೀಸ್ ಅಧಿಕಾರಿಗಳ ತಂಡವು ಇಂದು ಮೆಹ್ರೌಲಿ ಕೆರೆಯಿಂದ ನೀರನ್ನು ಖಾಲಿ ಮಾಡಲು ಪ್ರಾರಂಭಿಸಿತು.
Advertisement
Advertisement
ಶ್ರದ್ಧಾ ಮತ್ತು ಅಫ್ತಾಬ್ ಲಿವ್ ಇನ್ ರಿಲೇಷನ್‌ಶಿಪ್‌ನಲ್ಲಿದ್ದರು. ನಂತರ ಅಫ್ತಾಬ್, ಶ್ರದ್ಧಾಳನ್ನು ಹತ್ಯೆ ಮಾಡಿ ಮೃತದೇಹವನ್ನು 35 ತುಂಡುಗಳಾಗಿಸಿ ವಿವಿಧ ಸ್ಥಳಗಳಿಗೆ ಎಸೆದಿದ್ದ. ಈ ಪ್ರಕರಣ ದೇಶಾದ್ಯಂತ ಸಂಚಲನ ಮೂಡಿಸಿತ್ತು. ಪ್ರಕರಣ ಸಂಬಂಧ ದೆಹಲಿ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಇದನ್ನೂ ಓದಿ: ಪ್ರಬಲ ನಾಯಕನಿಲ್ಲದಿದ್ರೆ ಅಫ್ತಾಬ್‌ನಂಥ ಹಂತಕರು ಪ್ರತಿ ನಗರದಲ್ಲೂ ಹುಟ್ತಾರೆ – ಅಸ್ಸಾಂ ಸಿಎಂ