ಬೆಂಗಳೂರು: ಅಸಲಿ ಚಿನ್ನವನ್ನು (Gold) ನಕಲಿ ಎಂದು ಕಸದ ರಾಶಿಗೆ ಬಿಸಾಕಿದ್ದ ಕಳ್ಳರನ್ನು ಬಂಧಿಸುವಲ್ಲಿ ಬೆಂಗಳೂರು (Bengaluru) ಪೊಲೀಸರು (Police) ಯಶಸ್ವಿಯಾಗಿದ್ದಾರೆ.
ಇಲ್ಲಿನ ಕುವೆಂಪುನಗರದ ಮನೆಯೊಂದಕ್ಕೆ ನುಗ್ಗಿದ್ದ ನಾಲ್ವರು ಕಳ್ಳರ ಗ್ಯಾಂಗ್, ಮನೆಯಲ್ಲಿದ್ದ ಸಿಸಿಟಿವಿಗಳನ್ನು ತಿರುಚಿ 19 ಲಕ್ಷ ರೂ. ಮೌಲ್ಯದ ಚಿನ್ನವನ್ನು ಕಳವು ಮಾಡಿದ್ದರು. ನಂತರ ಅದನ್ನು ಜ್ಯೂವೆಲ್ಲರಿ ಶಾಪ್‌ವೊಂದಕ್ಕೆ ಮಾರಾಟ ಮಾಡಲು ಹೋಗಿದ್ದಾರೆ. ಇದನ್ನೂ ಓದಿ: ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯನ ಸಹೋದರನ ಮೇಲೆ ಗುಂಡಿನ ದಾಳಿ
Advertisement
Advertisement
ಚಿನ್ನವನ್ನು ನೋಡಿದ ಶಾಪ್‌ನ ಮಾಲೀಕನಿಗೆ ಇದು ಕಳವು ವಸ್ತು ಅನ್ನೋದು ಗೊತ್ತಾಗಿದೆ. ತಕ್ಷಣ ಬುದ್ದಿವಂತಿಕೆಯಿಂದ ಮಾಲೀಕ, ಇದು ನಕಲಿ ಚಿನ್ನ ಎಂದಿದ್ದಾನೆ. ಇದರಿಂದ ಬೇಸರಗೊಂಡ ಕಳ್ಳರ ಗ್ಯಾಂಗ್, ವಾಪಸು ಬರುವಾಗ ಕಂಡ ಕಸದ ರಾಶಿಗೆ ಚಿನ್ನವನ್ನು ಎಸೆದು ಹೋಗಿದ್ದಾರೆ.
Advertisement
Advertisement
ಕಳ್ಳರು ವಾಪಸ್ ಹೋದ ನಂತರ ಮಾಲೀಕ, ರಾಮಮೂರ್ತಿನಗರ ಪೊಲೀಸರಿಗೆ ಮಾಹಿತಿ ನೀಡಿದ್ದಾನೆ. ತಕ್ಷಣ ಅಲರ್ಟ್ ಆದ ಪೊಲೀಸರು, ಕಸದಲ್ಲಿ ಬಿಸಾಕಿದ್ದ 19 ಲಕ್ಷ ರೂ. ಮೌಲ್ಯದ ಚಿನ್ನವನ್ನು ಹುಡುಕಿ ವಾಪಸ್ ತಂದಿದ್ದಾರೆ. ಈ ಸಂಬಂಧ ತನಿಖೆ ಮುಂದುವರಿಸಿ ವೆಂಕಟೇಶ್, ಹರೀಶ್, ರಾಜೇಶ್ ಅಲಿಯಾಸ್ ಕ್ರ್ಯಾಕ್ ಹಾಗೂ ರಾಜ್ ಕಿರಣ್ ಎಂಬವರನ್ನು ಬಂಧಿಸಿದ್ದಾರೆ. ಇದನ್ನೂ ಓದಿ: 6 ತಿಂಗಳ ಬಳಿಕ ಸಿಕ್ಕಿಬಿದ್ದ ಗಂಡನ ಕೊಂದ ಹೆಂಡತಿ, ಪ್ರಿಯಕರ!
Live Tv
[brid partner=56869869 player=32851 video=960834 autoplay=true]
Join our Whatsapp group by clicking the below link
https://chat.whatsapp.com/E6YVEDajTzH06LOh77r25k