ಅಬುಧಾಬಿ: ದುಬೈನಲ್ಲಿ ನಡೆಯಲಿರುವ 28ನೇ ಕಾನ್ಫರೆನ್ಸ್ ಆಫ್ ದಿ ಪಾರ್ಟೀಸ್ (COP28) ಶೃಂಗಸಭೆಯಲ್ಲಿ ಭಾಗವಹಿಸಲು ಪ್ರಧಾನಿ ನರೇಂದ್ರ ಮೋದಿ ಅವರು ಯುಎಇಗೆ (PM Modi UAE Visit) ತೆರಳಿದ್ದು, ದುಬೈನಲ್ಲಿ ಅದ್ಧೂರಿ ಸ್ವಾಗತ ದೊರೆತಿದೆ.
#WATCH | Dubai, UAE: Members of the Indian diaspora sing ‘Saare Jahan Se Achha’, raise slogans of ‘Bharat Mata Ki Jai’ and ‘Vande Mataram’ ahead of PM Modi’s visit to Dubai for 28th Conference of the Parties (COP28) at the UN Climate Change Conference (UNCC) pic.twitter.com/YdwoLPfq8N
— ANI (@ANI) November 30, 2023
Advertisement
ಮೋದಿ ಅವರು ದುಬೈ ತಲುಪುತ್ತಲೇ ಯುಎಇನಿಂದ ಸಾಂಪ್ರದಾಯಿಕವಾಗಿ ಸ್ವಾಗತ ದೊರೆಯಿತು. ಇದಾದ ಬಳಿಕ ಅನಿವಾಸಿ ಭಾರತೀಯರು ನರೇಂದ್ರ ಮೋದಿ ಅವರನ್ನು ಸಾಂಸ್ಕೃತಿಕವಾಗಿ ಸ್ವಾಗತಿಸಿದರು. ಮಹಿಳೆಯರು ಸಾರೇ ಜಹಾಂಸೆ ಅಚ್ಚಾ ಹಿಂದೂಸ್ತಾನ್ ಹಮಾರಾ ಗೀತೆ ಹಾಡುವ ಜೊತೆಗೆ ಭಾರತ್ ಮಾತಾ ಕೀ ಜೈ, ವಂದೇ ಮಾತರಂ ಎಂಬ ಉದ್ಘೋಷಗಳನ್ನು ಮೊಳಗಿಸಿದರು. ಇದನ್ನೂ ಓದಿ: 41 ಕಾರ್ಮಿಕರ ಆರೋಗ್ಯ ಸ್ಥಿರವಾಗಿದ್ದು, ಮನೆಗೆ ತೆರಳಬಹುದು: ಏಮ್ಸ್
Advertisement
Advertisement
ನರೇಂದ್ರ ಮೋದಿ ಅವರನ್ನು ಕಂಡು ಅನಿವಾಸಿ ಭಾರತೀಯರು ಪುಳಕಿತರಾದರು. ನಾನು ದುಬೈನಲ್ಲಿ 20 ವರ್ಷಗಳಿಂದ ನೆಲೆಸಿದ್ದೇನೆ. ನನ್ನ ಸಂಬಂಧಿಕರೇ ಇಲ್ಲಿಗೆ ಬರುತ್ತಿದ್ದಾರೆ ಎಂದು ಭಾಸವಾಗಿದೆ, ನಮಗೆ ಅಷ್ಟು ಸಂತೋಷವಾಗಿದೆ ಎಂದು ಮಹಿಳೆಯೊಬ್ಬರು ಹೇಳಿಕೊಂಡರು. ಇನ್ನೂ ಕೆಲವರು ತ್ರಿವರ್ಣ ಧ್ವಜ ಬೀಸುವ ಮೂಲಕ ಮೋದಿ ಅವರನ್ನು ಸ್ವಾಗತಿಸಿದರು. ಅನಿವಾಸಿ ಭಾರತೀಯರ ಸ್ವಾಗತಕ್ಕೆ ಮೋದಿ ಅವರೂ ಮನ ಸೋತರು. ಇದನ್ನೂ ಓದಿ: ಮಧ್ಯಪ್ರದೇಶದಲ್ಲಿ ಬಿಜೆಪಿ, ತೆಲಂಗಾಣದಲ್ಲಿ ಕಾಂಗ್ರೆಸ್‌ಗೆ ಭರ್ಜರಿ ಗೆಲುವು – ಇದು ಟುಡೇಸ್ ಚಾಣಕ್ಯ ಭವಿಷ್ಯ
Advertisement
ಕಾನ್ಫರೆನ್ಸ್ ಆಫ್ ದಿ ಪಾರ್ಟೀಸ್ (COP28) ಶೃಂಗಸಭೆಯಲ್ಲಿ ಪ್ರಮುಖವಾಗಿ ಹವಾಮಾನ ಬದಲಾವಣೆ ಕುರಿತು ಚರ್ಚಿಸಲಾಗುತ್ತದೆ. ಅದರಲ್ಲೂ, ಹವಾಮಾನ ಬದಲಾವಣೆಯ ಕ್ರಿಯಾಯೋಜನೆ ರೂಪಿಸಲು ಇದು ಪ್ರಮುಖವಾಗಿದೆ ಎಂದು ತಿಳಿದುಬಂದಿದೆ. ಅಭುದಾಬಿಯ ಶೇಖ್ ಮೊಹಮ್ಮದ್ ಬಿನ್ ಅಲ್ ನಹ್ಯಾನ್ ಅವರ ಆಹ್ವಾನದ ಮೇರೆಗೆ ಮೋದಿ ಅವರು ಅಬುಧಾಬಿಗೆ ತೆರಳಿದ್ದಾರೆ. ಸುಮಾರು 200 ದೇಶಗಳ ನಾಯಕರು ಸಭೆಯಲ್ಲಿ ಪಾಲ್ಗೊಳ್ಳಲಿದ್ದಾರೆ. 200 ರಾಷ್ಟ್ರಗಳು ಪ್ರತಿನಿಧಿಸಿರುವ ಐತಿಹಾಸಿಕ ಸಭೆಯಲ್ಲಿ ಮಹತ್ವದ ಒಪ್ಪಂದಗಳು ಏರ್ಪಡಲಿವೆ. ಇದೇ ವೇಳೆ ಪ್ರಧಾನಿಯು ದ್ವಿಪಕ್ಷೀಯ ಮಾತುಕತೆಯನ್ನೂ ನಡೆಸಲಿದ್ದಾರೆ ಎಂದು ತಿಳಿದುಬಂದಿದೆ.