ತಿರುವನಂತಪುರಂ: RSS ಮತ್ತು BJP ನಾಯಕರ ಮಾಹಿತಿಯನ್ನು SDPIಗೆ ಸೋರಿಕೆ ಮಾಡಿದ ಆರೋಪದಡಿ ಕೇರಳದ ಪೊಲೀಸ್ ಅಧಿಕಾರಿಯನ್ನು ವಜಾ ಮಾಡಲಾಗಿದೆ.
ಸಿವಿಲ್ ಪೊಲೀಸ್ ಅಧಿಕಾರಿ(CPO) ಅನಸ್ ಪಿಕೆ ‘ಕರಿಮನ್ನೂರು ಪೊಲೀಸ್ ಠಾಣೆ’ಯಲ್ಲಿ ಕೆಲಸ ನಿರ್ವಹಿಸುತ್ತಿದ್ದರು. ಅನಸ್ ಅವರು, SDPI(ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ)ಗೆ ರಾಜ್ಯದ RSS ಮತ್ತು BJP ನಾಯಕರ ಮಾಹಿತಿಯನ್ನು ಕೊಟ್ಟಿದ್ದಾರೆ. ವಿಷಯ ತಿಳಿದ ಅಧಿಕಾರಿಗಳು ಇದು ಗಂಭೀರ ಅಪರಾಧವೆಂದು ಪರಿಗಣಿಸಿ ಅನಸ್ ಅವರನ್ನು ಕೆಲಸದಿಂದ ವಜಾಗೊಳಿಸಿದ್ದಾರೆ. ಇದನ್ನೂ ಓದಿ: ಪೊಲೀಸರಿಗೆ ಕಾಯಬೇಡಿ, ನೀವೇ ಉತ್ತರ ಕೊಡಿ – RSS ಮುಖಂಡ ಅರವಿಂದ್ ದೇಶಪಾಂಡೆ
Advertisement
Advertisement
ಕಳೆದ ತಿಂಗಳು ಅನಸ್ ಅವರಿಗೆ ನೋಟಿಸ್ ಕಳುಹಿಸಿದ್ದು, ಈ ಕುರಿತು ಮಾಹಿತಿ ನೀಡುವಂತೆ ಕೇಳಲಾಗಿದೆ. ಈ ವೇಳೆ ಪೊಲೀಸರು ತನಿಖೆ ಮಾಡಿದ್ದು, ಅನಸ್ ಅಪರಾಧ ಎಸಗಿರುವುದು ದೃಢವಾಗಿದೆ. ಪರಿಣಾಮ ಇಡುಕ್ಕಿ ಎಸ್‍ಪಿ ಆರ್ ಕರುಪ್ಪಸ್ವಾಮಿ, ಅನಸ್ ಅವರನ್ನು ವಜಾಗೊಳಿಸುವ ಸೂಚನೆಯನ್ನು ಹಸ್ತಾಂತರಿಸಿದ್ದಾರೆ.
Advertisement
ಉಪ ಎಸ್‍ಪಿ ಲಾಲ್ ಈ ಕುರಿತು ಮಾತನಾಡಿದ್ದು, ಅನಸ್ ಪ್ರಕರಣ ಕುರಿತು ತನಿಖೆ ಮಾಡಲಾಗಿದೆ. ತನಿಖೆ ವೇಳೆ ಆತ ಆರ್‍ಎಸ್‍ಎಸ್ ಮತ್ತು ಬಿಜೆಪಿ ನಾಯಕರ ಮಾಹಿತಿಯನ್ನು ಎಸ್‍ಡಿಪಿಐ ಕಾರ್ಯಕರ್ತರಿಗೆ ಕೊಟ್ಟಿರುವುದು ಸತ್ಯ ಎಂಬುದು ತಿಳಿದುಬಂದಿದೆ. ಇದನ್ನು ಗಂಭೀರ ಅಪರಾಧವೆಂದು ಪರಿಗಣಿಸಲಾಗಿದೆ. ಹೀಗಾಗಿ ಅವರು ಅಮಾನತು ಮಾಡಲಾಗಿದೆ ಎಂದು ತಿಳಿಸಿದ್ದಾರೆ.
Advertisement
ಡಿ.3 ರಂದು, ಎಸ್‍ಡಿಪಿಐ ಕಾರ್ಯಕರ್ತರು ಕೆಎಸ್‍ಆರ್‍ಟಿಸಿ ಕಂಡಕ್ಟರ್ ಮಧುಸೂದನನ್ ಅವರ ಮೇಲೆ ಅಮಾನುಷವಾಗಿ ಹಲ್ಲೆ ನಡೆಸಿದಾಗ ಈ ಕೃತ್ಯ ಬೆಳಕಿಗೆ ಬಂದಿದೆ. ಎಸ್‍ಡಿಪಿಐ ಕಾರ್ಯಕರ್ತರು ಧರ್ಮದ ಆಧಾರದ ಮೇಲೆ ಆತನ ವಿರುದ್ಧ ದಾಳಿ ಮಾಡಿರುವುದಾಗಿ ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಂಡಿದ್ದರು. ಕಂಡಕ್ಟರ್ ತನ್ನ ಮಕ್ಕಳ ಜೊತೆ ಬೈಕ್ ನಲ್ಲಿ ಹೋಗುತ್ತಿರುವಾಗ ಈ ಘಟನೆ ನಡೆದಿದೆ. ಇದನ್ನೂ ಓದಿ: ನಾಳೆ ಬಿಡುಗಡೆ ಆಗಲಿರುವ ಗಂಗೂಬಾಯಿ ಕಾಠಿಯಾವಾಡಿ ಟೈಟಲ್ ಬದಲಾಗತ್ತಾ? ಕೋರ್ಟ್ ಕೊಟ್ಟ ಸಲಹೆ ಏನು?
ಈ ಹಿನ್ನೆಲೆ ಪೊಲೀಸರು ನಾಲ್ಕು SDPI ಕಾರ್ಯಕರ್ತರನ್ನು ಅರೆಸ್ಟ್ ಮಾಡಿದ್ದಾರೆ. ಅರೆಸ್ಟ್ ಮಾಡಿದ್ದ ಆರೋಪಿ ಶಾನವಾಸ್ ಫೋನ್ ಪರಿಶೀಲಿಸಲಾಗಿದೆ. ಈ ವೇಳೆ ಸಿಪಿಒ ಅನಸ್ ಆರ್‍ಎಸ್‍ಎಸ್ ಮತ್ತು ಬಿಜೆಪಿ ನಾಯಕರ ಮಾಹಿತಿ ನೀಡಿರುವುದು ತಿಳಿದುಬಂದಿದೆ. ಈ ಫೋನ್ ನಲ್ಲಿ RSS ನಾಯಕರ ಸಂಪೂರ್ಣ ಮಾಹಿತಿ ಇರುವುದು ಪತ್ತೆಯಾಗಿದೆ. ಅಲ್ಲದೆ ಆರೋಪಿ ಶಾನವಾಸ್ ಮತ್ತು ಪೊಲೀಸ್ ಅಧಿಕಾರಿ ಅನಸ್ ಇಬ್ಬರು 11 ವರ್ಷಗಳ ಸ್ನೇಹಿತರು ಎಂಬುದು ತನಿಖೆ ವೇಳೆ ತಿಳಿದುಬಂದಿದೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.