ಗಾಂಧಿನಗರ: ಮಹಿಳಾ ಪೊಲೀಸ್ ಪೇದೆಯೊಬ್ಬರು ಪೊಲೀಸ್ ಠಾಣೆಯೊಳಗೆ ಟಿಕ್‍ಟಾಕ್ ವಿಡಿಯೋ ಡ್ಯಾನ್ಸ್ ಮಾಡಿದ್ದಾರೆ. ಈ ಹಿನ್ನೆಲೆಯಲ್ಲಿ ಅಧಿಕಾರಿಗಳು ಅವರನ್ನು ಕೆಲಸದಿಂದ ಅಮಾನತು ಮಾಡಿರುವ ಘಟನೆ ಗುಜರಾತಿನ ಮೆಹ್ಸಾನಾ ಜಿಲ್ಲೆಯಲ್ಲಿ ನಡೆದಿದೆ.
ಅರ್ಪಿತಾ ಚೌಧರಿ ಅಮಾನತಾದ ಮಹಿಳಾ ಪೊಲೀಸ್ ಪೇದೆ. ಮೆಹ್ಸಾನಾ ಜಿಲ್ಲೆಯ ಲಂಗ್ನಾಜ್ ಪೊಲೀಸ್ ಠಾಣೆಯಲ್ಲಿ ಲಾಪಕ್ ಮುಂದೆ ನಿಂತು ಅರ್ಪಿತಾ ಚೌಧರಿ ಬಾಲಿವುಡ್ ಹಾಡಿಗೆ ಸೊಂಟ ಬಳುಕಿಸಿದ್ದಾರೆ. ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತಿತ್ತು. ಅಧಿಕಾರಿಗಳ ಗಮನಕ್ಕೆ ಬಂದ ತಕ್ಷಣ ಅವರನ್ನು ಕೆಲಸದಿಂದ ಅಮಾನತು ಮಾಡಿದ್ದಾರೆ.
Advertisement
Advertisement
ಅರ್ಪಿತಾ ಚೌಧರಿ ನಿಯಮಗಳನ್ನು ಉಲ್ಲಂಘಿಸಿದ್ದಾರೆ. ಕರ್ತವ್ಯದಲ್ಲಿದ್ದಾಗ ಅವರು ಸಮವಸ್ತ್ರ ಧರಿಸದೆ ಲಂಗ್ನಾಜ್ ಗ್ರಾಮ ಪೊಲೀಸ್ ಠಾಣೆಯೊಳಗೆ ಡ್ಯಾನ್ಸ್ ಮಾಡಿದ್ದು, ಟಿಕ್‍ಟಾಕ್ ವಿಡಿಯೋವನ್ನು ರೆಕಾರ್ಡ್ ಮಾಡಿದ್ದಾರೆ. ಪೊಲೀಸ್ ಸಿಬ್ಬಂದಿಯಾದವರು ಶಿಸ್ತನ್ನು ಅನುಸರಿಸಬೇಕು. ಆದರೆ ಅರ್ಪಿತಾ ಅವರು ಶಿಸ್ತನ್ನು ಪಾಲಿಸಲಿಲ್ಲ. ಹೀಗಾಗಿ ಅವರನ್ನು ಅಮಾನತುಗೊಳಿಸಲಾಗಿದೆ ಎಂದು ಉಪ ಅಧೀಕ್ಷಕ ಪೊಲೀಸ್ ಮಂಜಿತಾ ವಂಜಾರಾ ತಿಳಿಸಿದ್ದಾರೆ.
Advertisement
ಅರ್ಪಿತಾ ಚೌಧರಿ ಜುಲೈ 20 ರಂದು ಈ ವಿಡಿಯೋವನ್ನು ರೆಕಾರ್ಡ್ ಮಾಡಿದ್ದರು. ನಂತರ ಅದನ್ನು ವಾಟ್ಸಪ್‍ನಲ್ಲಿ ಅಪ್ಲೋಡ್ ಮಾಡಿದ್ದು, ವೈರಲ್ ಆಗಿದೆ. ಚೌಧರಿ 2016ರಲ್ಲಿ ಪೊಲೀಸರ ಲೋಕ ರಕ್ಷಕ ದಳಕ್ಕೆ ನೇಮಕಗೊಂಡಿದ್ದರು. ನಂತರ 2018ರಲ್ಲಿ ಮೆಹ್ಸಾನಾ ಜಿಲ್ಲೆಗೆ ವರ್ಗಾಯಿಸಲಾಗಿತ್ತು ಎಂದು ಅಧಿಕಾರಿ ತಿಳಿಸಿದ್ದಾರೆ.
Advertisement
I am hearing that Gujarat police has suspended this cop for a TikTok video. pic.twitter.com/WeOWjXXTHB
— Himanshu Shekhar (@HimaanshuS) July 24, 2019