ಬೆಂಗಳೂರು: ಇಲ್ಲಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಶುಕ್ರವಾರ ನಡೆದ ಆಸ್ಟ್ರೇಲಿಯಾ ಮತ್ತು ಪಾಕಿಸ್ತಾನ (Australia And Pakistan) ನಡುವಿನ ಪಂದ್ಯದಲ್ಲಿ ಪಾಕ್ ಅಭಿಮಾನಿಯೊಬ್ಬ (Pakistani Fan) ಪೊಲೀಸ್ ಅಧಿಕಾರಿಯೊಂದಿಗೆ ವಾಗ್ವಾದಕ್ಕಿಳಿದಿದ್ದು, ಇದೀಗ ಜಾಲತಾಣದಲ್ಲಿ ವೀಡಿಯೋ ವೈರಲ್ ಆಗಿದೆ.
It’s shocking and upsetting to see that people are being stopped from cheering “Pakistan Zindabad” at the game.
This totally goes against what the sport is about!#CWC23 #PAKvsAUS #AUSvsPAK pic.twitter.com/iVnyFlNB09
— Momin Saqib (@mominsaqib) October 20, 2023
ಆಸ್ಟ್ರೇಲಿಯಾ – ಪಾಕಿಸ್ತಾನ (PAK vs AUS) ಪಂದ್ಯ ನಡೆಯುತ್ತಿದ್ದ ವೇಳೆ ಪಾಕಿಸ್ತಾನದ ಕ್ರಿಕೆಟ್ ಅಭಿಮಾನಿಯೊಬ್ಬ ʻಪಾಕಿಸ್ತಾನ್ ಜಿಂದಾಬಾದ್ʼ ಘೋಷಣೆ ಕೂಗಿದ್ದಾನೆ. ಈ ವೇಳೆ ಭದ್ರತೆಗೆ ನಿಯೋಜಿಸಿದ್ದ ಪೊಲೀಸ್ ಅಧಿಕಾರಿಯೊಬ್ಬರು (Bengaluru Police) ʻಪಾಕಿಸ್ತಾನ್ ಜಿಂದಾಬಾದ್ʼ ಕೂಗುವಂತಿಲ್ಲ ಎಂದು ತಡೆಯೊಡ್ಡಿದ ನಂತರ ಕೆಲಕಾಲ ವಾಗ್ದಾದ ನಡೆದಿದೆ. ಇದನ್ನೂ ಓದಿ: ಸಿಎಂಗೆ ಕ್ರಿಕೆಟ್ ಕ್ರೇಜ್ – ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಆಸ್ಟ್ರೇಲಿಯಾ vs ಪಾಕಿಸ್ತಾನ ಮ್ಯಾಚ್ ವೀಕ್ಷಿಸಿದ ಸಿದ್ದರಾಮಯ್ಯ
ಎಕ್ಸ್ ಖಾತೆಯಲ್ಲಿ ಹರಿದಾಡುತ್ತಿರುವ 45 ಸೆಕೆಂಡುಗಳ ವೀಡಿಯೋದಲ್ಲಿ, ಪಾಕ್ ಅಭಿಮಾನಿ ಜಿಂದಾಬಾದ್ ಘೋಷಣೆ ಕೂಗಲು ಪೊಲೀಸ್ ಅಧಿಕಾರಿ ತಡೆಯೊಡ್ಡಿದ್ದಾರೆ. ಆಗ ಪಾಕ್ ಅಭಿಮಾನಿ, ನಾನು ಪಾಕಿಸ್ತಾನದವನು, ಪಾಕಿಸ್ತಾನ್ ಜಿಂದಾಬಾದ್ (Pakistan zindabad) ಅನ್ನದೇ ಇನ್ನೇನು ಹೇಳಬೇಕು? ಭಾರತ್ ಮಾತಾಕಿ ಜೈ ಅನ್ನುವಾಗ ಪಾಕಿಸ್ತಾನ್ ಜಿಂದಾಬಾದ್ ಎಂದು ಯಾಕೆ ಹೇಳಬಾರದು? ಎಂದು ಅಧಿಕಾರಿಯನ್ನ ಪ್ರಶ್ನಿಸಿದ್ದಾರೆ. ಇದನ್ನೂ ಓದಿ: World Cup 2023: ಒಂದೇ ಓವರ್‌ನಲ್ಲಿ 24 ರನ್ ಚಚ್ಚಿಸಿಕೊಂಡು ಕೆಟ್ಟ ದಾಖಲೆ ಬರೆದ ಹ್ಯಾರಿಸ್ ರೌಫ್
ಬಳಿಕ ಅಧಿಕಾರಿಯ ನಡೆಯನ್ನ ವೀಡಿಯೋ ಮಾಡಿಕೊಂಡಿದ್ದಾನೆ. ಪೊಲೀಸ್ ಅಧಿಕಾರಿ ಯಾವುದೇ ಪ್ರತಿಕ್ರಿಯೆ ನೀಡದೇ ಮುಂದೆ ಸಾಗುತ್ತಿದ್ದಂತೆ ಪಾಕಿಸ್ತಾನ್ ಜಿಂದಾಬಾದ್ ಘೋಷಣೆ ಕೂಗಲು ಶುರು ಮಾಡಿದ್ದಾನೆ. ಇದನ್ನೂ ಓದಿ: World Cup 2023: ಸ್ಪಿನ್ ದಾಳಿಗೆ ಮಕಾಡೆ ಮಲಗಿದ ಪಾಕ್ – ಆಸೀಸ್‌ಗೆ 62 ರನ್ ಭರ್ಜರಿ ಜಯ, ಪಾಕ್‌ಗೆ ಹೀನಾಯ ಸೋಲು
ವೀಡಿಯೋ ಎಕ್ಸ್‌ನಲ್ಲಿ ಹರಿದಾಡುತ್ತಿದ್ದಂತೆ, ನೆಟ್ಟಿಗರು ಅಧಿಕಾರಿಯನ್ನ ತರಾಟೆಗೆ ತೆಗೆದುಕೊಂಡಿದ್ದಾರೆ. ಒಬ್ಬ ಪಾಕಿಸ್ತಾನಿ ತನ್ನ ದೇಶಕ್ಕಾಗಿ ಹುರಿದುಂಬಿಸಲು ಅವಕಾಶ ನೀಡದಿರುವುದು ನಾಚಿಕೆಗೇಡಿನ ಸಂಗತಿ. ಪಾಕಿಸ್ತಾನದ ಒಬ್ಬ ಅಭಿಮಾನಿ ತನ್ನ ದೇಶದ ಪರ ಘೋಷಣೆ ಕೂಗಲು ಬಿಡುತ್ತಿಲ್ಲವೆನ್ನೋದು ಖಂಡನೀಯ. ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿ ಇದನ್ನು ಗಮನಿಸಬೇಕು ಎಂದು ಒತ್ತಾಯಿಸಿದ್ದಾರೆ. ಅಲ್ಲದೇ ಪಾಕಿಸ್ತಾನದ ಕ್ರಿಕೆಟ್ ಅಭಿಮಾನಿಗಳು ಸಿಡಿದೇಳುವಂತೆ ಪ್ರಚೋದಿಸಿದ್ದಾರೆ.
Web Stories