ಬ್ಯೂನಸ್ ಐರಿಸ್: ಅಪೌಷ್ಟಿಕತೆ ಎಂದು ನಿರ್ಲಕ್ಷ್ಯ ಮಾಡಿದ ಮಗುವನ್ನು ಅರ್ಜೆಂಟಿನಾದ ಪೊಲೀಸ್ ಅಧಿಕಾರಿಯೊಬ್ಬರು ಸ್ತನ್ಯಪಾನ ಮಾಡಿಸಿ ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.
ಸೆಲೆಸ್ಟ್ ಅಯಲಾ ಮಗುವಿಗೆ ಸ್ತನ್ಯಪಾನ ಮಾಡಿಸಿದ ಪೊಲೀಸ್ ಅಧಿಕಾರಿ. ಸೆಲೆಸ್ಟ್, ಸೋರ್ ಮರಿಯಾ ಲುಡೋವಿಕಾ ಮಕ್ಕಳ ಆಸ್ಪತ್ರೆಯಲ್ಲಿ ಗಾರ್ಡ್ ಕೆಲಸ ಮಾಡುತ್ತಿದ್ದರು. ಈ ವೇಳೆ ಅಪೌಷ್ಠಿಕತೆಯಿಂದ ಬಳಲುತ್ತಿದ್ದ ಮಗು ನಿರಂತವಾಗಿ ಅಳಲು ಶುರು ಮಾಡಿತ್ತು.
Advertisement
ಆ ಮಗು ಹಸುವಿನಿಂದ ಅಳುತ್ತಿದ್ದು, ಸೆಲೆಸ್ಟ್ ಆ ಮಗುವಿನ ಅಳಲು ಕೇಳಲಾಗದೇ ಮಗುವಿಗೆ ಸ್ತನ್ಯಪಾನ ಮಾಡಿಸಬಹುದಾ ಎಂದು ಆಸ್ಪತ್ರೆಯ ಸಿಬ್ಬಂದಿಯನ್ನು ಕೇಳಿಕೊಂಡಿದ್ದಾರೆ. ಆಸ್ಪತ್ರೆ ಸಿಬ್ಬಂದಿ ಅನುಮತಿ ನೀಡಿದ ಕೂಡಲೇ ಸೆಲೆಸ್ಟ್ ಸ್ತನ್ಯಪಾನ ಮಾಡಿಸಲು ಶುರು ಮಾಡಿದ ತಕ್ಷಣ ಮಗು ಶಾಂತವಾಗಿದೆ.
Advertisement
Advertisement
ಮಗುವಿಗೆ ಸ್ತನ್ಯಪಾನ ಮಾಡಿಸಿ ಮಾಧ್ಯಮಗಳೊಂದಿಗೆ ಮಾತನಾಡಿದ ಸೆಲೆಸ್ಟ್, “ನಾನು ಆ ಮಗುವನ್ನು ಗಮನಿಸಿದೆ. ಅದು ಹಸಿವಿನಿಂದ ಅಳುತ್ತಿತ್ತು. ಅಲ್ಲದೇ ಮಗು ತನ್ನ ಕೈಯನ್ನು ಬಾಯಿಯೊಳಗೆ ಇಡುತ್ತಿತ್ತು. ನಾನು ಮಗುವನ್ನು ಅಪ್ಪಿಕೊಂಡು ಸ್ತನ್ಯಪಾನ ಮಾಡಿಸಬಹುದಾ ಎಂದು ಆಸ್ಪತ್ರೆ ಸಿಬ್ಬಂದಿಗೆ ಕೇಳಿಕೊಂಡೆ ಎಂದು ತಿಳಿಸಿದರು.
Advertisement
ಇದು ತುಂಬಾ ದುಃಖದ ಕ್ಷಣವಾಗಿತ್ತು. ಆ ಮಗುವನ್ನು ಆ ಸ್ಥಿತಿಯಲ್ಲಿ ನೋಡಿ ನನ್ನ ಹೃದಯ ಮಿಡಿಯುತಿತ್ತು. ಮಕ್ಕಳಿಗೆ ಸಂಬಂಧಿಸಿದಂತೆ ಸಮಾಜ ಸ್ವಲ್ಪ ಸೂಕ್ಷ್ಮವಾಗಿರಬೇಕು. ಆದರೆ ಇದು ಇಲ್ಲಿ ನಡೆಯುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.
ಸದ್ಯ ಸೆಲೆಸ್ಟ್ ಮಗುವಿಗೆ ಸ್ತನ್ಯಪಾನ ಮಾಡಿಸುತ್ತಿರುವ ಫೋಟೋವನ್ನು ಅವರ ಸಹೋದ್ಯೋಗಿಗಳು ಸಾಮಾಜಿಕ ಜಾಲತಾಣದಲ್ಲಿ ಹಾಕಿ ಅದಕ್ಕೆ, “ನಿಮಗೆ ಗೊತ್ತಿಲ್ಲದ ಮಗುವಿಗೆ ತಾಯಿಯ ರೀತಿಯಲ್ಲಿ ನೀವು ಪ್ರೀತಿ ತೋರಿಸಿ ಸ್ತನ್ಯಪಾನ ಮಾಡಿದ ಕ್ಷಣವನ್ನು ನಾವು ಎಲ್ಲರಿಗೂ ತೋರಿಸಲು ಇಷ್ಟಪಡುತ್ತೇನೆ. ಆ ಮಗು ಅಪೌಷ್ಠಿಕತೆಯಿಂದ ಕೂಡಿದೆ ಎಂದು ಆಸ್ಪತ್ರೆ ಸಿಬ್ಬಂದಿ ಹೇಳಿದರೂ ನೀವು ತಲೆ ಕೆಡಿಸಿಕೊಂಡಿಲ್ಲ. ಒಳ್ಳೆಯ ಕೆಲಸ ಮಾಡಿದ್ದೀರಿ” ಎಂದು ಪೋಸ್ಟ್ ನಲ್ಲಿ ಬರೆಯಲಾಗಿದೆ.
ಈ ಮಗು ತನ್ನ ತಾಯಿಯ ಆರನೇ ಮಗುವಾಗಿದ್ದು, ಸದ್ಯ ಈ ಮಗುವನ್ನು ನೋಡಿಕೊಳ್ಳಲು ತಾಯಿ ಕಷ್ಟಪಡುತ್ತಿದ್ದಾರೆ ಹಾಗೂ ಹತಾಶರಾಗಿದ್ದಾರೆ ಎಂದು ವರದಿಯಾಗಿದೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv