ತಿರುವನಂತಪುರಂ: ಈ ಹಿಂದೆ ನಿರ್ಗತಿಕರೊಬ್ಬರಿಗೆ ಪೊಲೀಸ್ ಪೇದೆಯೊಬ್ಬರು ಊಟ ತಿನ್ನಿಸುತ್ತಿರುವ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗಿತ್ತು. ಅಲ್ಲದೆ ಆ ಪೇದೆಗೆ ಸಾಕಷ್ಟು ಮೆಚ್ಚುಗೆ ಕೂಡ ವ್ಯಕ್ತವಾಗಿತ್ತು. ಇದೀಗ ಅಂಥದ್ದೇ ಮತ್ತೊಂದು ಘಟನೆ ಕೇರಳದಲ್ಲಿ ನಡೆದಿದೆ.
Advertisement
ಟ್ರಾಫಿಕ್ ಪೊಲೀಸ್ ಆಫೀಸರ್ ಶೈಜು ಎಂಬವರು ನಿರ್ಗತಿಕನಿಗೆ ಸ್ನಾನ ಮಾಡಿಸಿದ್ದಾರೆ. ಇದರ ವೀಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗುತ್ತಿದೆ. ಅಲ್ಲದೆ ಪೊಲೀಸ್ ಆಫೀಸರ್ ಅವರ ಮಾನವೀಯ ಕಾರ್ಯಕ್ಕೆ ಜನ ಶಹಬ್ಬಾಸ್ ಎಂದಿದ್ದಾರೆ. ಇದನ್ನೂ ಓದಿ: ಹುಬ್ಬಳ್ಳಿ ಗಲಭೆ – ಪುಂಡರ ವಿರುದ್ಧ ಗೂಂಡಾ ಕಾಯ್ದೆ ಪ್ರಯೋಗಕ್ಕೆ ಪ್ಲ್ಯಾನ್
Advertisement
Advertisement
ಪೂವಾರ್ ಮೂಲದ ಶೈಜು ಕರ್ತವ್ಯದಲ್ಲಿದ್ದಾಗಲೇ ಈ ಘನ ಕಾರ್ಯ ಮಾಡಿ ಇದೀಗ ಸುದ್ದಿಯಾಗಿದ್ದಾರೆ. ಶೈಜು ಅವರು ಡ್ಯೂಟಿಯಲ್ಲಿದ್ದ ಸಂದರ್ಭದಲ್ಲಿ ವೃದ್ಧನೊಬ್ಬ ಬಂದು ಸೋಪ್ ತೆಗೆದುಕೊಳ್ಳಲು ಹಣ ನೀಡುವಂತೆ ಕೇಳಿದ್ದಾನೆ. ಈ ವೇಳೆ ವೃದ್ಧನಿಗೆ ಹಣ ನೀಡುವ ಬದಲು ಹತ್ತಿರದಲ್ಲೇ ಇದ್ದ ಟ್ಯಾಪ್ ನಲ್ಲಿ ಆತನ ಸ್ನಾನಕ್ಕೆ ಕೂಡ ಸಹಾಯ ಮಾಡಿದ್ದಾರೆ.
Advertisement
ತಾವೇ ಸ್ವತಃ ಸೋಪ್ ಖರೀದಿಸಿ ತೆಗೆದುಕೊಂಡು ಬಂದು ವೃದ್ಧನಿಗೆ ಸ್ನಾನ ಮಾಡಿಸಿದ್ದಾರೆ. ಇಷ್ಟು ಮಾತ್ರವಲ್ಲದೇ ಸ್ನಾನ ಆದ ಬಳಿಕ ವೃದ್ಧನಿಗೆ ಹೊಸ ಬಟ್ಟೆ ಕೊಡಿಸಿದ್ದಾರೆ. ಪೊಲೀಸ್ ಆಫೀಸರ್ ಅವರ ಈ ಮಹಾನ್ ಕಾರ್ಯ ಗುರುತಿಸಿದ ನೆಯ್ಯಟ್ಟಿಂಕರ ಯೂತ್ ಕಮಿಟಿಯವರು ಸನ್ಮಾನ ಮಾಡಿದ್ದಾರೆ.