ಗದಗ: ಇಡೀ ಏಷ್ಯಾದಲ್ಲಿಯೇ ಸಹಕಾರಿ ಕ್ಷೇತ್ರಕ್ಕೆ ಮುನ್ನುಡಿ ಬರೆದ ಜಿಲ್ಲೆ ಗದಗ್ ಆಗಿದ್ದು, ಆದ್ರೆ ಇದೇ ಜಿಲ್ಲೆಯಲ್ಲಿ ಸಹಕಾರಿ ನೌಕರರ ಗೋಳು ಕೇಳೋರು ಯಾರು ಇಲ್ಲದಂತಾಗಿದೆ. ಕನಿಷ್ಠ ವೇತನವೂ ಸಿಗ್ತಿಲ್ಲ, ಮೂಲಭೂತ ಸೌಲಭ್ಯಗಳೂ ಸಿಗ್ತಿಲ್ಲ, ಹೀಗಾಗಿ ಅವರೆಲ್ಲ ಸೇರಿ ಸರ್ಕಾರದ ವಿರುದ್ಧ ಗುಡುಗಿದ್ದಾರೆ.
Advertisement
ಹೌದು. ಗದಗ ಜಿಲ್ಲೆಯ ಗ್ರಾಮೀಣ ಹಾಗೂ ಪಟ್ಟಣದ ವಿವಿಧ ಸಹಕಾರಿ ಸಂಸ್ಥೆಗಳಲ್ಲಿ ಕೆಲಸ ಮಾಡೋ ಸಿಬ್ಬಂದಿಗೆ ಹಲವು ವರ್ಷಗಳಿಂದ ಕನಿಷ್ಠ ವೇತನವೂ ಸಿಗ್ತಿಲ್ಲ. 30 ವರ್ಷಗಳ ಹಿಂದೆ ಕೇವಲ 50 ರೂಪಾಯಿಯಿಂದ ಆರಂಭವಾದ ವೇತನ ಇದೀಗ ಕನಿಷ್ಟ 3 ಸಾವಿರದಿಂದ ಗರಿಷ್ಟ 6 ಸಾವಿರಕ್ಕೆ ತಲುಪಿದೆ. ಇದ್ರಿಂದ ಒಂದು ಕುಟುಂಬ ನಿರ್ವಹಣೆಯೂ ಅಸಾಧ್ಯ. ಹೀಗಾಗಿ ಸಿಬ್ಬಂದಿ ತೀವ್ರ ಆರ್ಥಿಕ ಸಂಕಷ್ಟಕ್ಕೀಡಾಗಿದ್ದಾರೆ.
Advertisement
Advertisement
ಏಷ್ಯಾ ಖಂಡದಲ್ಲೇ ಮೊಟ್ಟ ಮೊದಲ ಬಾರಿಗೆ 1905ರಲ್ಲಿ ಗದಗ ಜಿಲ್ಲೆಯ ಕಣಗಿನಹಾಳ ಗ್ರಾಮದಲ್ಲಿ ಸಹಕಾರಿ ಬ್ಯಾಂಕ್ ಸ್ಥಾಪನೆಯಾಯಿತು. ಕಣಗಿನಹಾಳ ಸಿದ್ದನಗೌಡ ಪಾಟೀಲ್ ಇದರ ಸಂಸ್ಥಾಪಕರಾಗಿದ್ದರು. ಇದೀಗ ಈ ಸಹಕಾರಿ ಸಂಸ್ಥೆಯಲ್ಲಿ ಸುಮಾರು 800 ಸಿಬ್ಬಂದಿ ಕಾರ್ಯ ನಿರ್ವಹಿಸ್ತಿದ್ದಾರೆ. ಇದು ಕೇವಲ ಗದಗ ಜಿಲ್ಲೆಯ ಸಮಸ್ಯೆ ಮಾತ್ರವಲ್ಲ. ಇಡೀ ರಾಜ್ಯದ ಸಹಕಾರಿ ನೌಕರರ ಸಮಸ್ಯೆಯಾಗಿದೆ. ಇನ್ನು 30 ವರ್ಷ ಸೇವೆ ಸಲ್ಲಿಸಿದ್ರು ಸರ್ಕಾರ ಪರಿಗಣಿಸಿಲ್ಲ. ಹೀಗಾಗಿ ತಮ್ಮ ಹಕ್ಕು ಹಾಗೂ ಬೇಡಿಕೆ ಈಡೇರಿಕೆಗಾಗಿ ಸರ್ಕಾರದ ವಿರುದ್ಧ ಸಹಕಾರಿ ಸಂಘದ ನೌಕರ ಭೀಮಪ್ಪ ಹೋರಾಟದ ಎಚ್ಚರಿಕೆ ನೀಡಿದ್ದಾರೆ.
Advertisement
ಸಿ.ಎಂ ಕುಮಾರಸ್ವಾಮಿ ತಮ್ಮ ಖುರ್ಚಿ ಉಳಿಸಿಕೊಳ್ಳಲು, ಸಹಕಾರಿ ನೌಕರರನ್ನ ಸಾಯುವಂತೆ ಮಾಡ್ತಿದ್ದಾರೆ. ಸರ್ಕಾರ ಬಹುತೇಕ ಇಲಾಖೆ ಸಿಬ್ಬಂದಿಗೆ ವೇತನ ಹಾಗೂ ಹಲವಾರು ಸೌಲಭ್ಯಗಳನ್ನು ನೀಡಿದೆ. ಆದ್ರೆ ನಮಗೇಕೆ ಮಲತಾಯಿ ಧೋರಣೆ ಮಾಡ್ತಿದ್ದಾರೆ ಅನ್ನೋದು ಸಹಕಾರಿ ಇಲಾಖೆ ನೌಕರರ ಪ್ರಶ್ನೆ.
ಹಲವು ವರ್ಷಗಳಿಂದ ಸೇವೆ ಸಲ್ಲಿಸಿದ್ರು, ಸರ್ಕಾರ ಸಹಕಾರಿ ಸಿಬ್ಬಂದಿಗೆ ಸೌಲಭ್ಯ ನೀಡದಿರುವುದು ದುರಂತವೇ ಸರಿ, ಇನ್ನಾದ್ರೂ ಸರ್ಕಾರ ಸಹಕಾರಿ ಸಂಸ್ಥೆಯಲ್ಲಿ ಕೆಲಸ ಮಾಡ್ತಿರೋ ನೌಕರರ ಬವಣೆಗೆ ಸ್ಪಂದಿಸಲಿ ಅನ್ನೋದೇ ನಮ್ಮ ಆಶಯ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv