Connect with us

Districts

ಕರಾವಳಿ ಉತ್ಸವದ ಅಂಗವಾಗಿ ಕಾರವಾರದಲ್ಲಿ ಅಡುಗೆ ಸ್ಪರ್ಧೆ

Published

on

ಕಾರವಾರ: ಕರಾವಳಿ ಉತ್ಸವದ ಅಂಗವಾಗಿ ಕಾರವಾರದಲ್ಲಿ ಕರಾವಳಿ ಅಡುಗೆ ಸ್ಪರ್ಧೆ ಏರ್ಪಡಿಸಲಾಗಿತ್ತು.

ಕರಾವಳಿ ಉತ್ಸವದ ಅಂಗವಾಗಿ ಕಾರವಾರದ ಮಾಲಾದೇವಿ ಕ್ರೀಡಾಂಗಣದಲ್ಲಿ ಕರಾವಳಿ ಉತ್ಸವದ ಅಡುಗೆ ಸ್ಪರ್ಧೆ ಭರ್ಜರಿಯಾಗಿ ನಡೆಯಿತು. ಸ್ಪರ್ಧಿಗಳಿಗಾಗಿ ಕಠಿಣ ಟಾಸ್ಕ್ ನೀಡಲಾಗಿತ್ತು. 22 ಮಾಂಸಹಾರ, 17 ಸಸ್ಯಹಾರ ಸ್ಪರ್ಧಿಗಳು ಅಡುಗೆ ತಯಾರಿಸಲು ಸಜ್ಜಾಗಿದ್ದರು. ಸಸ್ಯಹಾರ ವಿಭಾಗದಲ್ಲಿ ಬದನೆ, ಮಶರೂಂ, ಹೀರೆಕಾಯಿ, ಬೆಂಡೆಕಾಯಿಗಳನ್ನು ಮಾತ್ರ ತೆಗೆದುಕೊಂಡು ಕೊಟ್ಟ ಕನಿಷ್ಟ ಸಮಯದಲ್ಲಿ ಶುದ್ಧವಾಗಿ ವಿವಿಧ ಖಾದ್ಯ ತಯಾರಿಸಬೇಕಿತ್ತು.

ಮಾಂಸಹಾರದಲ್ಲಿ ಇಶ್ವಣ್, ಪ್ರೌನ್ಸ್, ಬಾಂಗಡೆ ಮೀನುಗಳನ್ನು ಉಪಯೋಗಿಸಿ ವಿವಿಧ ಖಾದ್ಯ ತಯಾರಿಸಬೇಕಿತ್ತು. ಹೀಗಾಗಿ ತುಂಬಾನೇ ಕಷ್ಟಕರವಾದ ಖಾದ್ಯ ತಯಾರಿಕೆಯನ್ನು ಸ್ಪರ್ಧಿಗಳು ಅದ್ಭುತವಾಗಿ ಮಾಡಿದರು. ಇದ್ದಲ್ಲದೆ ಗೆದ್ದ ಸ್ಪರ್ಧಿಗಳಿಗೂ ಕೂಡ ನಗದು ಹಣ ಬಹುಮಾನವನ್ನು ಸಹ ನೀಡಲಾಗುತಿದ್ದು, ವಿಶಿಷ್ಟ ಖಾದ್ಯಗಳು ತಯಾರಾಗಿದ್ದವು. ಜಿಲ್ಲಾಧಿಕಾರಿಗಳು ಕೂಡ ಖುದ್ದು ಪದಾರ್ಥಗಳ ಸವಿಯುಂಡು ಖುಷಿಪಟ್ಟರು.

ಒಟ್ಟು 30 ಸ್ಪರ್ಧಿಗಳು ಅಡುಗೆ ಸ್ಪರ್ಧೆಗಳಲ್ಲಿ ಭಾಗವಹಿಸಿದ್ದು, ಸಸ್ಯಹಾರದಲ್ಲಿ ಬದನೆಕಾಯಿ ಶಾಹಿ, ಹೀರೆಕಾಯಿ ಬರ್ಫಿ ಮತ್ತು ಜಾಮ್, ಹೀರೆಕಾಯಿ ಚಕ್ಕುಲಿ, ಹೀರೆಕಾಯಿ ಗೋಬಿ, ತೊಕ್ಕು, ಅಣಬೆಯಿಂದ ತಯಾರಿಸಿದ ವಿವಿಧ ಪ್ರೈಡ್ ರೈಸ್, ಹೀರೇಕಾಯಿಯಿಂದ ತಯಾರಿಸಿದ ಹಲ್ವಾ, ಗ್ರೇವಿ, ಫ್ಲವರ್ ಹಲ್ವ ಹೀಗೆ ಹತ್ತು ಹಲವು ಖಾದ್ಯಗಳು ಗಮನ ಸೆಳೆದವು. ಮಾಂಸಹಾರ ವಿಭಾಗದಲ್ಲಿ ಸಿಗಡಿ ರವಾ ಫ್ರಯ್, ಗಡಿಗೆ ಬಿರಿಯಾನಿ, ಇಸೋಣ್ ಮಂಚೂರಿ, ಶಟ್ಲಿ ಬಿರಿಯಾನಿ, ಫ್ರಾನ್ಸ್ ಬಿರಿಯಾನಿ, ಬಾಂಗಡೆ ಗ್ರೀನ್ ಮಸಾಲ, ಶಟ್ಲಿ ಉಪ್ಪಿನಕಾಯಿ, ಪಾನಿ ಪೂರಿಗಳು ಎಲ್ಲರನ್ನು ಆಕರ್ಷಿಸಿತು.

ಅಡುಗೆ ತಯಾರಿಕೆಯಲ್ಲಿ ಕೇವಲ ಜಿಲ್ಲೆಯಿಂದಲ್ಲದೇ ಹೊರಜಿಲ್ಲೆಯ ಸ್ಪರ್ಧಿಗಳು ಭಾಗವಹಿಸಿದ್ದು ವಿಶೇಷವಾಗಿತ್ತು. ಶುದ್ಧತೆ, ಕಲಾತ್ಮಕತೆ, ರುಚಿ ಹೀಗೆ ಕೆಲವು ಮಾನದಂಡಗಳಲ್ಲಿ ಸಸ್ಯಹಾರ ಹಾಗೂ ಮಾಂಸಹಾರ ವಿಭಾಗಗಳಿಗೆ ಪ್ರತ್ತೇಕವಾಗಿ ವಿಜೇತರನ್ನು ಆಯ್ಕೆ ಮಾಡಲಾಗಿತ್ತು. ಸ್ಪರ್ಧೆಯ ಕಾರಣ ವಿವಿಧ ಕರಾವಳಿ ಅಡುಗೆ ಖಾದ್ಯಗಳನ್ನು ನೋಡುಗರು ತಿಂದು ಸವಿದಿದ್ದು ವಿಶೇಷವಾಗಿತ್ತು.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

Click to comment

Leave a Reply

Your email address will not be published. Required fields are marked *