ಮಲೆನಾಡಿಗೂ ಕಾಲಿಟ್ಟ ಕುಕ್ಕರ್ ಪಾಲಿಟಿಕ್ಸ್- ಕಾಂಗ್ರೆಸ್ ಶಾಸಕರ ನಡೆಗೆ ತೀವ್ರ ಆಕ್ರೋಶ

Public TV
2 Min Read
CKM TD RAJEGOWDA

ಚಿಕ್ಕಮಗಳೂರು: ಅಭಿವೃದ್ಧಿ ಕಾರ್ಯದಿಂದ ಮತ ಕೇಳುವ ಬದಲು ಕುಕ್ಕರ್ (Cooker) ನೀಡಿ ಮತ ಕೇಳುತ್ತಿರುವ ಹಾಲಿ ಕಾಂಗ್ರೆಸ್ ಶಾಸಕರ ವಿರುದ್ಧ ಮತದಾರರು ಆಕ್ರೋಶ ವ್ಯಕ್ತಪಡಿಸಿದ ಘಟನೆ ಚಿಕ್ಕಮಗಳೂರು (Chikkamagaluru) ಜಿಲ್ಲೆಯಲ್ಲಿ ನಡೆದಿದೆ.

ಜಿಲ್ಲೆಯ ಶೃಂಗೇರಿ (Sringeri) ವಿಧಾನಸಭಾ ಕ್ಷೇತ್ರದಲ್ಲಿ ಈ ಘಟನೆ ನಡೆದಿದ್ದು, ಶೃಂಗೇರಿ ಶಾಸಕ ಹಾಗೂ ಜಿಲ್ಲೆಯ ಏಕೈಕ ಕಾಂಗ್ರೆಸ್ ಶಾಸಕ ಟಿ.ಡಿ.ರಾಜೇಗೌಡ (TD Rajegowda) ಕ್ಷೇತ್ರದಾದ್ಯಂತ ಕುಕ್ಕರ್ ರಾಜಕೀಯ ಆರಂಭಿಸಿದ್ದಾರೆ. ಕೇತ್ರದಾದ್ಯಂತ ಸುಮಾರು ಒಂದು ಲಕ್ಷಕ್ಕೂ ಅಧಿಕ ಕುಕ್ಕರ್ ವಿತರಣೆ ಮಾಡಿದ್ದು, ಜನಸಾಮಾನ್ಯರು ಈಗ ಕುಕ್ಕರ್ ನೀಡಿ ಮತ ಕೇಳುವುದಾದರೆ ಕಳೆದ ಐದು ವರ್ಷದಿಂದ ಮಾಡಿದ್ದೇನು ಎಂದು ಪ್ರಶ್ನಿಸಿದ್ದಾರೆ. ಇದನ್ನೂ ಓದಿ: ಮಾರ್ಚ್ 11ಕ್ಕೆ ಇಡಿ ಮುಂದೆ ಹಾಜರಾಗಲಿದ್ದಾರೆ KCR ಪುತ್ರಿ ಕವಿತಾ

CKM TD RAJEGOWDA 1

ಮಲೆನಾಡಿನ ಗಾಂಧಿ ಎಂದೇ ಹೆಸರಾಗಿದ್ದ ಗೋವಿಂದೇ ಗೌಡರ ಕ್ಷೇತ್ರದಲ್ಲಿ ಕಾಂಗ್ರೆಸ್ ಮುಖಂಡರು ಕುಕ್ಕರ್ ಆಮಿಷವೊಡ್ಡಿ ಮತ ನೀಡುವಂತೆ ಜನರಲ್ಲಿ ಮನವಿ ಮಾಡಿದ್ದರು. ಚುನಾವಣೆಯ (Election) ಹಿನ್ನೆಲೆ, ಕಾಂಗ್ರೆಸ್ ಮುಖಂಡ ಬೇಗಾರು ರಮೇಶ್ ನೇತೃತ್ವದಲ್ಲಿ (Begar Ramesh) ಟಿ.ಡಿ.ರಾಜೇಗೌಡರ ಭಾವಚಿತ್ರವುಳ್ಳ ಕುಕ್ಕರ್ ಅನ್ನು ಮನೆ-ಮನೆಗೆ ವಿತರಿಸಿ, ಅವರೊಂದಿಗೆ ಫೋಟೋ ಹೊಡೆಸಿಕೊಂಡಿದ್ದರು. ಹಾಲಿ ಶಾಸಕರ ಈ ನಡೆಗೆ ಸಾಮಾಜಿಕ ಜಾಲತಾಣದಲ್ಲಿ ತೀವ್ರ ಆಕ್ರೋಶ ವ್ಯಕ್ತವಾಗಿದೆ. ಇದನ್ನೂ ಓದಿ: ಮಗನಿಗೆ ಸಾಹಸಸಿಂಹ ವಿಷ್ಣುವರ್ಧನ್ ಹೆಸರಿಟ್ಟ ವಿಷ್ಣು ಅಭಿಮಾನಿ

CKM TD RAJEGOWDA 1

ಚಿಕ್ಕಮಗಳೂರಿನಲ್ಲಿ ಮೂರು ತಾಲೂಕು ಸೇರಿ ಶೃಂಗೇರಿ ವಿಧಾನಸಭಾ ಕ್ಷೇತ್ರವಾಗಿದೆ. ಮೂರೂ ತಾಲೂಕಿನಲ್ಲೂ ಕಳೆದ ಎರಡು ಮೂರು ವರ್ಷಗಳಿಂದ ಭಾರೀ ಮಳೆಗೆ ಜನ ಮನೆ-ಮಠ ಕಳೆದುಕೊಂಡಿದ್ದಾರೆ. ಹಲವರಿಗೆ ಇನ್ನೂ ಸೂಕ್ತ ರೀತಿಯಲ್ಲಿ ಪರಿಹಾರ ಬರಲಿಲ್ಲ. ಮಳೆಯಿಂದ ನಾಶಗೊಂಡಿದ್ದ ಮೂಲಭೂತ ಸೌಕರ್ಯಗಳು ಇಂದಿಗೂ ದುರಸ್ಥಿಗೊಂಡಿಲ್ಲ. ಈಗ ಚುನಾವಣೆ ಬಂತು ಎಂದು ಅಭಿವೃದ್ಧಿ ಕೆಲಸ ಬಿಟ್ಟು ಕುಕ್ಕರ್ ಕೊಟ್ಟು ಮತ ಕೇಳುತ್ತಿದ್ದಾರೆ ಎಂದು ಮತದಾರರು ಶಾಸಕರ ವಿರುದ್ಧ ಅಸಮಾಧಾನ ಹೊರಹಾಕಿದರು. ಇದನ್ನೂ ಓದಿ: ನೂರಾರು ಮತದಾರರಿಗೆ ಬಿಜೆಪಿಯಿಂದ ಬಾಡೂಟ, ಗಿಫ್ಟ್ – ಕಂಠಪೂರ್ತಿ ಕುಡಿದು ಎಲ್ಲೆಂದರಲ್ಲಿ ಮಲಗಿದ ಜನ

CKM TD RAJEGOWDA 1 1

ಕುಕ್ಕರ್ ಬೇಡ. ನಮ್ಮ ಮನೆಯಲ್ಲಿಯೇ ಇದೆ. ಕ್ಷೇತ್ರದ ಸಮಸ್ಯೆಗಳ ಬಗ್ಗೆ ಕಾಳಜಿ ವಹಿಸಿ ಅವುಗಳನ್ನು ಬಗೆಹರಿಸುವ ಮೂಲಕ ಕ್ಷೇತ್ರದ ಸರ್ವತೋಮುಖ ಅಭಿವೃದ್ಧಿಗೆ ಶ್ರಮಿಸಿ ಎಂದು ಶಾಸಕರಿಗೆ ಜನರು ಸಲಹೆ ನೀಡಿದರು. ಇದನ್ನೂ ಓದಿ: ನಿನ್ನ ಮನೆ ಹಾಳಾಗಲಿ, ನಿನ್ನ ವಂಶ ನಾಶವಾಗಲಿ: ವೆಂಕಟೇಶ್‌ ವಿರುದ್ಧ ಶಾಸಕ ಕೆ. ಮಹದೇವ್ ಕಿಡಿ

Share This Article
Leave a Comment

Leave a Reply

Your email address will not be published. Required fields are marked *