ಶಿವಮೊಗ್ಗ: ಮುಂಬೈ ವಿರುದ್ಧ ನಡೆದ 2024ರ ಕೂಚ್ ಬೆಹಾರ್ ಟ್ರೋಫಿ ಅಂಡರ್ 19 ಟೂರ್ನಿಯ ಫೈನಲ್ ಪಂದ್ಯದಲ್ಲಿ ಕರ್ನಾಟಕದ ಪ್ರಖರ್ ಚತುರ್ವೇದಿ ಅಜೇಯ 404 ರನ್‍ಗಳನ್ನು ಗಳಿಸಿ ದಾಖಲೆ ಬರೆದಿದ್ದಾರೆ. ಇವರ ಅಬ್ಬರದ ಬ್ಯಾಟಿಂಗ್‍ನಿಂದ ಕರ್ನಾಟಕ ತಂಡ ಟ್ರೋಫಿ ಗೆದ್ದಿದೆ. ಪಂದ್ಯದಲ್ಲಿ ಅಜೇಯ 404 ರನ್ ಗಳಿಸಿದ ಕರ್ನಾಟಕದ ಯುವ ಆಟಗಾರ ಪ್ರಖರ್ ಚತುರ್ವೇದಿ, ಕೂಚ್ ಬೆಹಾರ್ ಟೂರ್ನಿಯ ಇತಿಹಾಸದಲ್ಲಿ ಅತಿ ಹೆಚ್ಚು ರನ್ ಗಳಿಸಿದ ಬ್ಯಾಟರ್ ಆಗಿ ಹೊರಹೊಮ್ಮಿದ್ದಾರೆ. ಈ ಮೂಲಕ ಟೀಂ ಇಂಡಿಯಾ ಆಟಗಾರ ಯುವರಾಜ್ ಸಿಂಗ್ ಅವರ ದಾಖಲೆ ಮುರಿದಿದ್ದಾರೆ.
ಶಿವಮೊಗ್ಗದಲ್ಲಿ ನಡೆದ ಕೂಚ್ ಬೆಹಾರ್ ಟೂರ್ನಿಯ ಫೈನಲ್ ಪಂದ್ಯದಲ್ಲಿ ಟಾಸ್ ಸೋತು ಮೊದಲ ಬ್ಯಾಟ್ ಮಾಡಿದ ಮುಂಬೈ, ಆಯುಷ್ ಮ್ಹಾತ್ರೆ (145ರನ್), ಆಯುಷ್ ಸಚಿನ್ ವರ್ತಕ್ (77 ರನ್) ಹಾಗೂ ನೂತನ್ (44 ರನ್) ಅವರ ಬ್ಯಾಟಿಂಗ್ ನೆರವಿನಿಂದ 380 ರನ್ ಗಳಿಸಿತು. ಕರ್ನಾಟಕ ಪರ ಹಾರ್ದಿಕ್ ರಾಜ್ 4 ವಿಕೆಟ್ ಹಾಗೂ ರಾಹುಲ್ ದ್ರಾವಿಡ್ ಪುತ್ರ ಸಮಿತ್ ದ್ರಾವಿಡ್ 2 ವಿಕೆಟ್ ಪಡೆದರು. ಇದನ್ನೂ ಓದಿ: ಯಶಸ್ಸಿನ ಶ್ರೇಯಸ್ಸು ಮಹಿ ಅಣ್ಣನಿಗೆ, CSKಗೆ ಸಲ್ಲಬೇಕು – ಚೆನ್ನೈಗೆ ಕ್ರೆಡಿಟ್ ಕೊಟ್ಟ ಶಿವಂ ದುಬೆ
Advertisement
Advertisement
ತಮ್ಮ ಪ್ರಥಮ ಇನಿಂಗ್ಸ್ ಆರಂಭಿಸಿದ ಕರ್ನಾಟಕ, ಪ್ರಖರ್ ಚತುರ್ವೇದಿ (404 ರನ್) ದಾಖಲೆ ರನ್‍ಗಳಿಂದ 8 ವಿಕೆಟ್ ನಷ್ಟಕ್ಕೆ 890 ರನ್ ಗಳಿಸಿ 510 ರನ್‍ಗಳ ಮುನ್ನಡೆ ಸಾಧಿಸಿತು.
Advertisement
Advertisement
ಕರ್ನಾಟಕದ ಪರ ಆರಂಭಿಕ ಆಟಗಾರ ಕಾರ್ತಿಕ್ ಎಸ್.ಯು ಅರ್ಧಶತಕ (50 ರನ್) ಗಳಿಸಿ ಮೊದಲ ವಿಕೆಟ್‍ಗೆ ಪ್ರಖರ್ ಜೊತೆಗೆ 109 ರನ್‍ಗಳ ಜೊತೆಯಾಟವಾಡಿದ್ದರು. ನಂತರ ಎರಡನೇ ವಿಕೆಟ್‍ಗೆ ಜೊತೆಗೂಡಿದ ಹರ್ಷಿಲ್ ಧರ್ಮನಿ (169 ರನ್) ಮತ್ತು ಪ್ರಖರ್ ಚತುರ್ವೇದಿ 299 ರನ್ ಜೊತೆಯಾಟವಾಡಿ ತಂಡದ ಮೊತ್ತವನ್ನು 399 ಏರಿಸಿದರು. ಕಾರ್ತಿಕೇಯ (72 ರನ್), ಹಾರ್ದಿಕ್ ರಾಜ್ (51 ರನ್) ಹಾಗೂ ಸಮರ್ಥ್ (55 ರನ್) ಬಾರಿಸಿ ಗಮನ ಸೆಳೆದರು. ಬ್ಯಾಟಿಂಗ್‍ನಲ್ಲೂ ಮಿಂಚಿದ ಸಮಿತ್ ದ್ರಾವಿಡ್ 46 ಎಸೆತಗಳಲ್ಲಿ 22 ರನ್ ಗಳಿಸಿದರು.
1999ರಲ್ಲಿ ನಡೆದಿದ್ದ ಕೂಚ್ ಬೆಹಾರ್ ಟೂರ್ನಿಯ ಫೈನಲ್ ಪಂದ್ಯದಲ್ಲಿ ಬಿಹಾರ್ ವಿರುದ್ಧದ ಫೈನಲ್ ಪಂದ್ಯದಲ್ಲಿ ಪಂಜಾಬ್ ಪರ ಯುವರಾಜ್ ಸಿಂಗ್ 358 ರನ್ ಗಳಿಸಿದ್ದರು. ಈಗ ಆ ದಾಖಲೆಯನ್ನು ಪ್ರಖರ್ ಚತುರ್ವೇದಿ ಮುರಿದಿದ್ದಾರೆ. ಇದನ್ನೂ ಓದಿ: ಮೈದಾನಕ್ಕೆ ನುಗ್ಗಿ ವಿರಾಟ್ ಪಾದ ಮುಟ್ಟಿ, ಅಪ್ಪಿಕೊಂಡ – ಭದ್ರತೆ ಉಲ್ಲಂಘಿಸಿದ ಕೊಹ್ಲಿ ಅಪ್ಪಟ ಅಭಿಮಾನಿಗೆ ಸಂಕಷ್ಟ