ಬೆಂಗಳೂರು: ದಲಿತ ಹೆಣ್ಣುಮಕ್ಕಳನ್ನ (Dalit Woman) ಮುಸ್ಲಿಂಗೆ (Muslim) ಮತಾಂತರ (Conversion) ಮಾಡುವ ಕೆಲಸ ಆಗುತ್ತಿದೆ. ಇತ್ತೀಚಿಗೆ ಬಾಲಕಿಯೊಬ್ಬಳನ್ನು ಮತಾಂತರ ಮಾಡಿ ಮುಮ್ತಾಜ್ ಎಂಬ ಹೆಸರಿಟ್ಟಿದ್ದಾರೆ ಎಂದು ಬಿಜೆಪಿ ಶಾಸಕ ಮುನಿರತ್ನ (Munirathna) ಆರೋಪಿಸಿದ್ದಾರೆ.
ವೈಯ್ಯಾಲಿಕಾವಲ್‌ನಲ್ಲಿರುವ ತಮ್ಮ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಹೋಲಿ ಆಟವಾಡಿ ಮನೆಗೆ ಬರುವಾಗ ಬಾಲಕಿಯನ್ನು ಕರೆದುಕೊಂಡು ಹೋಗಿ ಅತ್ಯಾಚಾರ ಮಾಡಿದ್ದಾರೆ. ಮುಸ್ಲಿಂ ಯುವಕನಿಂದ ಕೃತ್ಯ ನಡೆದಿದೆ. ಮೋಹನ್ ನಗರದಲ್ಲಿ ಘಟನೆ ನಡೆದಿದೆ. ಆ ವಿಡಿಯೋ ನಂದಿನಿ ಲೇಔಟ್ ಪೊಲೀಸರಿಗೆ ಕಳುಹಿಸಿದ ಬಳಿಕ ಆರೋಪಿಯನ್ನು ಅರೆಸ್ಟ್ ಮಾಡಿದ್ದಾಗಿ ಹೇಳಿದ್ದಾರೆ ಎಂದರು. ಇದನ್ನೂ ಓದಿ: ಮತದಾನ ವೇಳೆ ಗುಂಡಿನ ದಾಳಿ, ಇವಿಎಂ ಧ್ವಂಸ – ಮಣಿಪುರದ 11 ಮತಗಟ್ಟೆಗಳಲ್ಲಿ ಮರು ಮತದಾನ
Advertisement
Advertisement
ಈ ಪ್ರಕರಣವನ್ನು ವಾಪಸ್ ಪಡೆಯದೆ ಹೋದರೆ ಜೈಲಿನಿಂದ ಕೊಲೆ ಮಾಡುವುದಾಗಿ ಬೆದರಿಕೆಯೊಡ್ಡಿದ್ದಾರೆ. ಬಾಲಕಿ ಎಂಟನೇ ತರಗತಿ ಫಸ್ಟ್ ಕ್ಲಾಸ್ ಬಂದಿದೆ. ಆಕೆಯನ್ನು ಆಟೋದಲ್ಲಿ ಕರೆದುಕೊಂಡು ಹೋಗಿ ರೇಪ್ ಮಾಡಲಾಗಿದೆ. ರೇಪ್ ಮಾಡಿದವನಿಗೆ ಮೂರು ಮದುವೆ ಆಗಿದೆ. ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ 9 ತಿಂಗಳಲ್ಲಿ ನಮ್ಮ ಕ್ಷೇತ್ರದಲ್ಲಿ ವೀಲ್ಹಿಂಗ್, ರೇಪ್, ದಬ್ಬಾಳಿಕೆ ನಡೆಯುತ್ತಿದೆ. 50 ರೂ. ಪಡೆಯೋ ಜಾಗಕ್ಕೆ 500 ರೂ. ಪಡೆಯಲಾಗಿದೆ. ಮೂರು ವಾರ್ಡ್‌ನಲ್ಲಿ ದಿನನಿತ್ಯ ಒಂದಲ್ಲ ಒಂದು ಘಟನೆಗಳು ನಡೆಯುತ್ತಿದೆ ಎಂದು ಕಾಂಗ್ರೆಸ್ ವಿರುದ್ಧ ಗಂಭೀರ ಆರೋಪ ಮಾಡಿದರು. ಇದನ್ನೂ ಓದಿ: ಮಂಡ್ಯದಿಂದ ಸುಮಲತಾ ದೂರ; ಹೆಚ್‌ಡಿಕೆ ಪರ ಪ್ರಚಾರಕ್ಕಿಳಿಯದ ಸಂಸದೆ – ಬರ್ತಾರೆ ನೋಡೋಣ ಎಂದ ಮಾಜಿ ಸಿಎಂ
Advertisement
ಯುವತಿ ಕೇಸ್ ವಾಪಸ್ ಪಡೆಯೋದಕ್ಕೆ ಪ್ರಯತ್ನ ಮಾಡುತ್ತಿದ್ದಾರೆ. ನಂದಿನಿ ಲೇಔಟ್ ಇನ್ಸ್ಪೆಕ್ಟರ್ ವರ್ಗಾವಣೆಗೆ ಹಲವು ಬಾರಿ ಪತ್ರ ಬರೆದರೂ ಪ್ರಯೋಜನ ಆಗಿಲ್ಲ. ಏ.4ರಂದು ಘಟನೆ ನಡೆದಿದೆ. 11 ಗಂಟೆ 34 ನಿಮಿಷಕ್ಕೆ ಡಿಸಿಪಿಗೆ ವೀಡಿಯೋ ಕಳುಹಿಸಿಕೊಟ್ಟೆ. ನಾನು ವೀಡಿಯೋ ಕಳುಹಿಸಿದ ಮೂರ್ನಾಲ್ಕು ದಿನದ ಹಿಂದೆ ಘಟನೆ ನಡೆದಿದೆ. ವೀಡಿಯೋ ಕಳುಹಿಸಿದ ಬಳಿಕ ಎಫ್‌ಐಆರ್ ಮಾಡಿ ಅರೆಸ್ಟ್ ಮಾಡಿದ್ದಾರೆ. ಕೇಸ್ ವಾಪಸ್ ಪಡೆಯುವಂತೆ ಒತ್ತಾಯ ಮಾಡಲಾಗುತ್ತಿದೆ. ಆರೋಪಿಗಳನ್ನು ಕಾಂಗ್ರೆಸ್‌ನವರು ರಕ್ಷಣೆ ಮಾಡುತ್ತಿದ್ದಾರೆ. ಆರೋಪಿಗಳು ಕಾಂಗ್ರೆಸ್ ಕಾರ್ಯಕರ್ತರಾಗಿದ್ದರು ಎಂದು ಆರೋಪ ಮಾಡಿದರು. ಇದನ್ನೂ ಓದಿ: ಇಂದು ಹುಬ್ಬಳ್ಳಿಗೆ ಜೆಪಿ ನಡ್ಡಾ – ನೇಹಾ ಕುಟುಂಬಸ್ಥರ ಭೇಟಿ ಸಾಧ್ಯತೆ
Advertisement
ಲೆಕ್ಕ ಇಲ್ಲದಷ್ಟು ಮಂದಿ ಮುಸ್ಲಿಂಗೆ ಮತಾಂತರ ಆಗುತ್ತಿದ್ದಾರೆ. ನಮ್ಮ ಕ್ಷೇತ್ರದಲ್ಲಿ ಹೆಚ್ಚು ಮತಾಂತರ ಮಾಡಲಾಗಿದೆ. ಇದೇ ರೀತಿ ಇನ್ನೊಂದು ಕೇಸ್ ಇದೆ. ಆ ಕುಟುಂಬ ಹೊರಗಡೆ ಬರೋದಕ್ಕೆ ಭಯ ಪಡುತ್ತಿದ್ದಾರೆ. ರಂಜಾನ್ ಹಬ್ಬದ ದಿನ ಘಟನೆ ನಡೆದಿದೆ. ಅದನ್ನು ಬೆಳಕಿಗೆ ತರುತ್ತೇವೆ. ಹುಬ್ಬಳಿಯಲ್ಲಿ ಆಗಿರೋ ನೇಹಾ ಮರ್ಡರ್‌ನಿಂದ ಜನರು ಭಯಪಡುತ್ತಿದ್ದಾರೆ. ಕಾನೂನು ಸುವ್ಯವಸ್ಥೆ ಕಾಪಾಡುವಂತೆ ಹೋಗಿ ಮತ್ತೆ ಡಿಸಿಎಂ ಕಾಲು ಹಿಡಿದುಕೊಳ್ಳುತ್ತೇನೆ ಎಂದರು. ಇದನ್ನೂ ಓದಿ: ರಾಜ್ಯದ 28 ಕ್ಷೇತ್ರಗಳಲ್ಲೂ ಗೆಲ್ಲುತ್ತೇವೆ – ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ವಿಶ್ವಾಸ