ಧಾರವಾಡ: ಕ್ರಿಶ್ಚಿಯನ್ ಧರ್ಮಕ್ಕೆ ಮತಾಂತರಕ್ಕೆ ಯತ್ನಿಸುತ್ತಿದ್ದವರನ್ನು ಗ್ರಾಮಸ್ಥರೇ ಕೂಡಿಹಾಕಿ, ಬಳಿಕ ಮೂವರನ್ನೂ ಪೊಲೀಸರಿಗೆ ಒಪ್ಪಿಸಿದ್ದಾರೆ.
ಜಿಲ್ಲೆಯ ನರೇಂದ್ರ ಗ್ರಾಮದ ಜನ ಮತಾಂತರ ಮಾಡುತ್ತಿದ್ದ ಮೂವರನ್ನು ಕೂಡಿ ಹಾಕಿದ್ದು, ಬಳಿಕ ಪೊಲೀಸರಿಗೆ ಒಪ್ಪಿಸಿದ್ದಾರೆ. ಶಾಂತವ್ವ, ಪ್ರಸಾದ್ ಹಾಗೂ ಅನ್ನಪೂರ್ಣ ಅವರಿಂದ ನರೇಂದ್ರ ಗ್ರಾಮದ ಮನೆಯೊಂದರಲ್ಲಿ ಪ್ರಾರ್ಥನೆ ನಡೆದಿತ್ತು. ಈ ವೇಳೆ ಗ್ರಾಮದ ರಾಮ ಸೇನೆ ಹಾಗೂ ಆರ್‍ಎಸ್‍ಎಸ್ ಕಾರ್ಯಕರ್ತರು ದಾಳಿ ಮಾಡಿ ಹಿಡಿದಿದ್ದಾರೆ. ಅಲ್ಲದೆ ಇವರ ಬಳಿ ಇದ್ದ ಹಣವನ್ನು ತೆಗೆದುಕೊಂಡು, ಗ್ರಾಮದಲ್ಲಿ ಮೆರವಣಿಗೆ ಮಾಡಿದ್ದಾರೆ.
Advertisement
Advertisement
ಈ ವೇಳೆ ಪ್ರಾರ್ಥನೆ ಮಾಡುತ್ತಿರುವುದಾಗಿ ಒಪ್ಪಿಕೊಂಡಿರುವ ಇವರು, ಪ್ರತಿ ವಾರ ಧಾರವಾಡದ ಶ್ರೀರಾಮನಗರದಲ್ಲಿ ಕೂಡ ಪ್ರಾರ್ಥನೆಗೆ ಹೋಗುತಿದ್ದರು ಎಂದು ಹೇಳಿದ್ದಾರೆ. ಗ್ರಾಮಸ್ಥರು ಇವರನ್ನು ಪೊಲೀಸರಿಗೆ ಒಪ್ಪಿಸಿದ್ದು, ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದ್ದಾರೆ. ಇದನ್ನೂ ಓದಿ: ಶಾರುಖ್ ಖಾನ್ ಪುತ್ರನ ಬಂಧನ- ರಮ್ಯಾಗೆ ಅನುಮಾನ
Advertisement
Advertisement
ಹಿಂದೂ ಧರ್ಮದ ಬಡವರನ್ನೇ ಟಾರ್ಗೆಟ್ ಮಾಡಿ ಮತಾಂತರ ಮಾಡುತಿದ್ದಾರೆ ಎಂದು ಆರೋಪಿಸಿದ ಬಿಜೆಪಿ ಕಾರ್ಯಕರ್ತರು, ಹೈದರಾಬಾದ್‍ನಿಂದ ಇವರಿಗೆ ಹಣ ಬರುತ್ತೆ ಎಂದು ಆರೋಪ ಮಾಡಿದ್ದಾರೆ. ಮತಾಂತರಕ್ಕೆ ಬಂದಿದ್ದ ಪ್ರಸಾದ್ ತನ್ನ ಮೇಲೆ ಹಲ್ಲೆ ಮಾಡಿದ್ದಾರೆ ಎಂದು ಆರೋಪಿಸಿದ್ದು, ನಾವು ಪ್ರಾರ್ಥನೆ ಮಾಡಲು ಮಾತ್ರ ಅಲ್ಲಿ ಕುಳಿತಿದ್ದೆವು ಎಂದಿದ್ದಾರೆ.