ಬೆಂಗಳೂರು: ಸ್ಯಾಂಡಲ್‍ವುಡ್ ಅಂಗಳದಲ್ಲಿ `ಬಾಸ್’ ಕಾಂಟ್ರವರ್ಸಿಗೆ ಇನ್ನೂ ಬ್ರೇಕ್ ಬಿದ್ದಿಲ್ಲ. ಆಗಲೇ ಮತ್ತೊಂದು ಕಾಂಟ್ರವರ್ಸಿ ಶುರುವಾಗುವ ಎಲ್ಲಾ ಲಕ್ಷಣಗಳು ಕಾಣುತ್ತಿವೆ.
ಈಗಾಗಲೇ ಸೋಷಿಯಲ್ ಮೀಡಿಯಾದಲ್ಲಿ ನಿರ್ದೇಶಕ ಪ್ರೇಮ್ ಗೆ ಕಾಂಟ್ರವರ್ಸಿ ಮಾಡೋಕೆ ರೆಡಿನಾ ಅನ್ನೋ ಪ್ರಶ್ನೆಗಳನ್ನು ಕೇಳುತ್ತಿದ್ದಾರೆ. ಅಷ್ಟಕ್ಕೂ ಪ್ರೇಮ್ ಕಾಂಟ್ರವರ್ಸಿಗೆ ಗುರಿಯಾಗೋಕೆ ಕಾರಣ `ದಿ ವಿಲನ್’ ಚಿತ್ರದ ಹಾಡು.
Advertisement
`ನಿನ್ನೆ ಮೊನ್ನೆ ಬಂದೋರೆಲ್ಲ ನಾನೇ ನಂಬರ್ ಒನ್ ಅಂತಾರೋ’ ಎಂದು ಸಾಗುವ ಹಾಡು `ದಿ ವಿಲನ್’ ಚಿತ್ರದಲ್ಲಿದೆ. ಈ ಹಾಡಿನಲ್ಲಿ ಯಂಗ್ ಅಂಡ್ ಎನರ್ಜಿಟಿಕ್ ಸ್ಟಾರ್ ಶಿವರಾಜ್ ಕುಮಾರ್ ಸಖತ್ ಸ್ಟೆಪ್ ಹಾಕಿದ್ದಾರೆ.
Advertisement
Advertisement
Advertisement
ಇತ್ತೀಚೆಗೆ ಈ ಹಾಡನ್ನು ಕ್ಯಾಪ್ಚರ್ ಮಾಡಿಕೊಂಡಿರುವ ಪ್ರೇಮ್, ಈ ಹಾಡಿನ ಸಾಲನ್ನ ಬರೆದು ಒಂದೆರಡು ಫೋಟೋ ಹಾಕಿ ಫೇಸ್‍ಬುಕ್‍ನಲ್ಲಿ ಅಪ್‍ಲೋಡ್ ಮಾಡಿದ್ದಾರೆ. ಅಷ್ಟಕ್ಕೂ ಈ ಸಾಲುಗಳು ಚಿತ್ರಕ್ಕೆ ಎಷ್ಟು ಆ್ಯಪ್ಟ್ ಆಗುತ್ತದೋ ಇಲ್ಲವೂ ಗೊತ್ತಿಲ್ಲ. ಆದರೆ ವಿವಾದಕ್ಕೆ ಸಿಲುಕುವ ಮುನ್ಸೂಚನೆ ಸಿಕ್ಕಿದೆ.
ಸ್ಯಾಂಡಲ್‍ವುಡ್‍ನ ಬಹು ನಿರೀಕ್ಷಿತ `ದಿ ವಿಲನ್’ ಸಿನಿಮಾವು ಪ್ರೇಮ್ ನಿರ್ದೇಶನದಲ್ಲಿ ಮೂಡಿಬರುತ್ತಿದ್ದು, ಇದೊಂದು ಮಲ್ಟಿ ಸ್ಟಾರ್ ಗಳ ಚಿತ್ರವಾಗಿದೆ. ಇದರಲ್ಲಿ ವಿಶೇಷತೆ ಎಂದರೆ ಕಿಚ್ಚ ಮತ್ತು ಶಿವಣ್ಣ ಒಟ್ಟಾಗಿ ಆಭಿನಯಿಸುತ್ತಿರುವುದು. ಈ ಸಿನಿಮಾದಲ್ಲಿ ಬಹುಭಾಷಾ ನಟಿ ಆಮಿ ಜಾಕ್ಸನ್ ನಾಯಕಿಯಾಗಿ ಕಾಣಿಸಿಕೊಳ್ಳಲಿದ್ದಾರೆ. ಅರ್ಜುನ್ ಜನ್ಯ ಅವರ ಸಂಗೀತದಲ್ಲಿ ಈ ಚಿತ್ರ ಮೂಡಿಬರುತ್ತಿದೆ.