ಬೆಳಗಾವಿ: ಮುಸ್ಲಿಮರು ಮತ್ತು ಕಾಂಗ್ರೆಸ್ಸಿನವರು ಗಣೇಶೋತ್ಸವ ಮಂಡಳಿಗಳಲ್ಲಿನ ಸಾವರ್ಕರ್ ಫೋಟೋ ಮುಟ್ಟಿದ್ರೇ ಕೈ ಕತ್ತರಿ ಬಿಸಾಕುತ್ತೇವೆ ಎಂದು ಶ್ರೀರಾಮಸೇನೆ ಸಂಸ್ಥಾಪಕ ಪ್ರಮೋದ್ ಮುತಾಲಿಕ್ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.
ನಗರದ ಕಾಮತ್ ಗಲ್ಲಿಯ ಗಣಪತಿ ಮಂಡಳಿಗೆ ಸಾವರ್ಕರ್ ಫೋಟೋ ನೀಡಿ ಅಭಿಯಾನಕ್ಕೆ ಚಾಲನೆ ನೀಡಿದ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಮುತಾಲಿಕ್, ರಾಜ್ಯದ ಹತ್ತು ಸಾವಿರ ಗಣಪತಿ ಮಹಾಮಂಡಳಿಗಳಿಗೆ ಬ್ಯಾನರ್, ಫೋಟೋ ನೀಡುತ್ತೇವೆ. ಗಣಪತಿ ಪ್ರತಿಷ್ಠಾಪನೆ ಮಾಡುವವರೆಗೂ ಅಭಿಯಾನವನ್ನು ಮಾಡುತ್ತೇವೆ. ಎಲ್ಲ ಸಾರ್ವಜನಿಕ ಗಣಪತಿ ಮಂಟಪದಲ್ಲಿ ಬ್ಯಾನರ್ ಹಾಕುತ್ತೇವೆ. ಪ್ರತಿಯೊಂದು ಗಣೇಶ ಮಂಡಳಿ, ಓಣಿಯಲ್ಲಿ ಸಾರ್ವಕರ್ ಅಭಿಯಾನ ಮಾಡ್ತೀವಿ. ಸಾರ್ವಕರ್ ಮುಸ್ಲಿಮರ ವಿರೋಧಿಯಲ್ಲ. ಬ್ರಿಟಿಷರ ವಿರುದ್ಧ ಹೋರಾಡಿದ ಅಪ್ಪಟ ಕ್ರಾಂತಿಕಾರಿ. ಹೀಗಾಗಿ ಅವರನ್ನ ಮುಟ್ಟಿದ್ರೆ ಕೈ ಕತ್ತರಿ ಬಿಸಾಕುತ್ತೇವೆ ಎಂದು ಹೇಳಿದ್ದಾರೆ.
ಕಾಂಗ್ರೆಸ್ ಇದನ್ನು ಎಚ್ಚರಿಕೆ ಅಂತಾ ತಿಳಿದುಕೊಂಡು ಹೆಜ್ಜೆ ಇಡಬೇಕು. ಯಾರು ಸಾವರ್ಕರ್ ಅವರನ್ನ ಅವಮಾನ ಮಾಡುವ ಕೆಲಸ ಮಾಡಬಾರದು. ಮಾಡಿದ್ರೆ ಬಿಡಲ್ಲ ಎಂದು ಎಚ್ಚರಿಕೆ ನೀಡಿದ್ದಾರೆ. ಇದನ್ನೂ ಓದಿ: ಲಕ್ಷ ಲಕ್ಷ ಹಣ ಪ್ರಿಯತಮೆ ಅಕೌಂಟಿಗೆ ಟ್ರಾನ್ಸ್‌ಫರ್ ಮಾಡಿದ ಬಿಬಿಎಂಪಿ ಅಧಿಕಾರಿ!
ಕಾಂಗ್ರೆಸ್ ನಲ್ಲಿ ಇಂದಿರಾಗಾಂಧಿ, ನೆಹರು, ಗಾಂಧೀಜಿ ಅವರನ್ನ ಬಿಟ್ಟರೆ ಬೇರೆಯವರು ಹೋರಾಟಗಾರರಲ್ಲ ಅಂತಾ ತಿಳಿದುಕೊಂಡಿದ್ದಾರೆ. ಇಂದಿರಾಗಾಂಧಿ ಪ್ರಧಾನಿ ಇದ್ದಾಗ ಸಾವರ್ಕರ್ ಅವರ ಪೋಸ್ಟಲ್ ಸ್ಟ್ಯಾಂಪ್ ಬಿಡುಗಡೆ ಮಾಡಿದ್ದಾರೆ. ಸಾವರ್ಕರ್ ಸಮನಾಗಿ ಗಾಂಧೀಜಿನೂ ಇಲ್ಲ, ನೆಹರೂ ಇಲ್ಲ. ಅಂತಹ ಶ್ರೇಷ್ಠ ವ್ಯಕ್ತಿಯನ್ನ ಅವಮಾನ ಮಾಡೊದನ್ನ ನಿಲ್ಲಿಸಬೇಕು ಎಂದರು.