ಮಂಗಳೂರು: ಗಳಿಗನ ನಿಂದಿಸಿದ ಗೃಹ ಸಚಿವ ಆರಗ ಜ್ಞಾನೇಂದ್ರ (Araga Jnanendra) ವಿರುದ್ಧ ಇದೀಗ ಕರಾವಳಿ ಜನ ಸಿಡಿದೆದ್ದಿದ್ದಾರೆ. ಬಿಜೆಪಿ (BJP) ಯ ಧರ್ಮ ಪ್ರೇಮದ ಬಣ್ಣ ಕಳಚುತ್ತಿದೆ ಎಂದು ದೈವಾರಾಧಕರು ಆಕ್ರೋಶ ಹೊರಹಾಕುತ್ತಿದ್ದಾರೆ.
Advertisement
ಮಾರ್ಚ್ 15 ರಂದು ತೀರ್ಥಹಳ್ಳಿಯ ಸಾರ್ವಜನಿಕ ಕ್ರೀಡಾಂಗಣದಲ್ಲಿ ತುಳು ನಾಟಕ ರಂಗದಲ್ಲಿ ಹೊಸ ಇತಿಹಾಸ ಸೃಷ್ಟಿಸಿದ ವಿಜಯ ಕುಮಾರ್ ಕೊಡಿಯಾಲಬೈಲ್ (Vijaykumar Kodialbail) ರಚಿಸಿ ನಿರ್ದೇಶಿಸಿದ ‘ಶಿವದೂತೆ ಗುಳಿಗ’ ನಾಟಕ ಪ್ರದರ್ಶನ ಕಂಡಿದೆ. ಈ ನಾಟಕದ ಸಂಘಟಕರು ಮೊದಲೇ ಹತ್ತು ಸಾವಿರಕ್ಕೂ ಹೆಚ್ಚು ಜನ ಸೇರಲಿದ್ದಾರೆ ಎಂದು ತಿಳಿಸಿದ್ದು ಅದರಂತೆ ಜನ ಸೇರಿದ್ದರು. ಇದೇ ದಿನ ಇಲ್ಲಿ ಬಿಜೆಪಿಯ ವಿಜಯ ಸಂಕಲ್ಪ ಯಾತ್ರೆ, ಸಮಾವೇಶ ನಡೆದಿದ್ದು ಇದರಲ್ಲಿ ಭಾಗವಹಿಸಿದ ಸಿ.ಟಿ ರವಿ (CT Ravi) ಮತ್ತು ಈಶ್ವರಪ್ಪ (KS Eshwarappa) ತಮ್ಮ ಎಂದಿನ ಧಾತಿಯಲ್ಲಿ ಭಾಷಣ ಮಾಡಿ ಹೋಗಿದ್ದಾರೆ. ಇದನ್ನೂ ಓದಿ: ಟೋಲ್ ತಕರಾರು ಜನಸಾಮಾನ್ಯರದ್ದಲ್ಲ, ಅದು ಡಿಕೆಶಿ ರಾಜಕಾರಣ: ಬೊಮ್ಮಾಯಿ
Advertisement
Advertisement
ಮರುದಿನ ಬಿಜೆಪಿಯಿಂದ ನಡೆದ ರೈತ ಸಮಾವೇಶದಲ್ಲಿ ಭಾಗವಹಿಸಿದ ಆರಗ ಜ್ಞಾನೇಂದ್ರ, ಕಿಮ್ಮನೆ ರತ್ನಾಕರ್ ಸಂಘಟಿಸಿದ ನಾಟಕಕ್ಕೆ ಹತ್ತು ಸಾವಿರಕ್ಕೂ ಹೆಚ್ಚು ಜನರು ಸೇರಿರುವುದು ತಿಳಿಯುತ್ತಲೇ ಸ್ವಲ್ಪ ವಿಚಲಿತರಾಗಿದ್ದಾರೆ. ಮಾತ್ರವಲ್ಲ ಅಸಹನೆಯಿಂದ ಸಭೆಯಲ್ಲಿ ತುಳುನಾಡಿನ ಜನರ ಆರಾಧ್ಯ ದೈವ ಗುಳಿಗನ ಬಗ್ಗೆ ಅಪಹಾಸ್ಯ ಮಾಡಿ ಮಾತನಾಡಿದ್ದು ದೈವಾರಾಧಕರು ಮತ್ತು ನಾಟಕ ಪ್ರಿಯರು ಆಕ್ರೋಶಗೊಳ್ಳುವಂತೆ ಮಾಡಿದೆ.
Advertisement
ಆರಗ ಹೇಳಿದ್ದೇನು..?: ಯಾವುದೋ ಗುಳಿಗೆ ಕೊಡ್ತಾರಂತೆ, ಜಪಾಲ್ ಗುಳಿಗೆ ಕೊಟ್ರು ಕೊಡಬಹುದು. ಹೊಸ ಹೊಸ ನಾಟಕ ಶುರು ಮಾಡಿದ್ದಾರೆ ಎಂದು ನಿಂದಿಸಿರುವುದು ತೀರ್ಥಹಳ್ಳಿಯಲ್ಲಿ ನೆಲೆಸಿರುವ ದ.ಕ ಮೂಲದ ಜನರನ್ನು ಕೆರಳಿಸಿದೆ. ಗುಳಿಗ ದ.ಕ ಜಿಲ್ಲೆಯ ಜನರ ಆರಾಧ್ಯ ದೈವ. ಜನ ಶ್ರದ್ಧಾ ಭಕ್ತಿಯಿಂದ ನಡೆದುಕೊಳ್ಳುತ್ತಾರೆ. ಆ ದೈವದ ಬಗ್ಗೆ ವ್ಯಂಗ್ಯವಾಗಿ, ಅಸಹನೆಯಿಂದ, ಅಪಹಾಸ್ಯ ಮಾಡಿ ಗೃಹ ಸಚಿವರು ಮಾತನಾಡಿರುವುದು ಸರಿಯಲ್ಲ ಜನ ರೊಚ್ಚಿಗೆದ್ದಿದ್ದಾರೆ.