ವಿವಾದಾತ್ಮಕವಾಗಿ ಗುರುತಿಸಿಕೊಂಡವರಿಗೆ ಬಿಗ್‌ಬಾಸ್‌ನಲ್ಲಿ (Bigg Boss) ಮಣೆ ಹಾಕಲಾಗುತ್ತದೆ ಅನ್ನೋದು ಬಿಗ್‌ಬಾಸ್ ಕಾರ್ಯಕ್ರಮದ ವಿರುದ್ಧ ಜನರ ಒಂದು ಅಸಮಾಧಾನ. ಅದರಂತೆ ಈ ಬಾರಿಯೂ ವಿವಾದವನ್ನ ಬೆನ್ನಿಗೆ ಕಟ್ಟಿಕೊಂಡ ಅನೇಕರು ಬಿಗ್ ಮನೆಯೊಳಗೆ ಎಂಟ್ರಿ ಪಡೆದಿರುವುದು ಚರ್ಚೆಗೆ ಕಾರಣವಾಗಿದೆ.

ಧ್ರುವಂತ್
ಮುದ್ದುಲಕ್ಷ್ಮಿ ಧಾರಾವಾಹಿ ನಟ ಧ್ರುವಂತ್ ನಟನಾಗಷ್ಟೇ ಅಲ್ಲ, ಲೈಂಗಿಕ ಕಿರುಕುಳ ಆರೋಪಿ ಕೂಡ. ವರ್ಷದ ಹಿಂದೆ ಧ್ರುವಂತ್ (Dhruvanth) ಮೇಲೆ ಆರ್‌ಆರ್‌ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು. ಇದೀಗ ಬಿಗ್‌ಬಾಸ್ ಮನೆಗೆ ಎಂಟ್ರಿ ಪಡೆದುಕೊಂಡಿದ್ದಾರೆ. ಇದನ್ನೂ ಓದಿ: ಒಂಟಿಯಾಗಿ ಬಿಗ್‌ಬಾಸ್ ಮನೆಗೆ ಕಾಲಿಟ್ಟ ನಿರೂಪಕಿ ಜಾನ್ಹವಿ, ಗೀತಾ ಧಾರಾವಾಹಿಯ ಧನುಷ್

ಸತೀಶ್
50 ಕೋಟಿ ರೂ. ನಾಯಿ ಖರೀದಿಸಿದ್ದೇನೆ ಎಂದು ಬಿಲ್ಡಪ್ ಕೊಟ್ಟಿದ್ದ ಬೆಂಗಳೂರಿನ ಉದ್ಯಮಿ ಸತೀಶ್ (Satish) ಕೂಡ ಬಿಗ್‌ಬಾಸ್ ಹೌಸ್‌ಗೆ ಆಶ್ಚರ್ಯಕರ ಎಂಟ್ರಿ ಪಡೆದುಕೊಂಡಿದ್ದಾರೆ. ಬಿಲ್ಡಪ್ ಕೊಟ್ಟಿದ್ದಕ್ಕೆ ಇಡಿ ಶಾಕ್ ಕೊಟ್ಟಿತ್ತು. ಸತೀಶ್ ಮೇಲೆ ಇಡಿ ರೇಡ್ ನಡೆದಿತ್ತು. ವುಲ್ಫ್ ಡಾಗ್ ನಾಯಿಗೆ 50 ಕೋಟಿ ಕೊಟ್ಟು ಖರೀದಿಸಿದ್ದೇನೆ ಎಂದು ಬಿಲ್ಡಪ್ ಶೋ ಕೊಟ್ಟಿದ್ದ ವ್ಯಕ್ತಿಯ ಸುಳ್ಳನ್ನ ಇಡಿ ಬಯಲುಮಾಡಿತ್ತು.

ಚಂದ್ರಪ್ರಭ
ಹಾಸ್ಯನಟ ಚಂದ್ರಪ್ರಭ (Chandra Prabha) ಜನಪ್ರಿಯತೆ ಗಳಿಸಿದ್ದು ಗಿಚ್ಚಿಗಿಲಿಗಿಲಿ ಕಾರ್ಯಕ್ರಮದ ಮೂಲಕವೇ ಆಗಿದ್ದರೂ ಇವರ ಮೇಲೆ ಆಕ್ಸಿಡೆಂಟ್ ಮಾಡಿರೋ ಆರೋಪವಿದೆ. ಚಿಕ್ಕಮಗಳೂರಿನಲ್ಲಿ ಕಾರನ್ನು ಓಡಿಸುವಾಗ ಬೈಕ್‌ಗೆ ಕಾರು ಗುದ್ದಿದ್ದಲ್ಲವೇ ಹಿಟ್ & ರನ್ ಮಾಡಿರುವ ಆರೋಪ ಹೊತ್ತಿದ್ದವರು. ಬಳಿಕ ಸ್ಟೇಷನ್‌ಗೂ ತೆರಳಿದ್ದ ಚಂದ್ರಪ್ರಭ ಬೇಲ್ ಪಡೆದುಕೊಂಡಿದ್ರು. ತಮ್ಮ ಹಾಸ್ಯಪ್ರಜ್ಞೆ ಹಾಗೂ ಅಭಿನಯದ ಜೊತೆಗೆ ಕ್ರೈಂಸ್ಟೋರಿಯಲ್ಲೂ ಹೆಡ್‌ಲೈನ್‌ನಲ್ಲಿ ಬಂದವ್ರು ಹಾಸ್ಯನಟ ಚಂದ್ರಪ್ರಭ. ಇದನ್ನೂ ಓದಿ: ಬಿಗ್‌ಬಾಸ್‌ನಲ್ಲಿ ʻಮಾತಿನ ಮಲ್ಲಿ ಮಲ್ಲಮ್ಮನ’ ಪವಾಡ!

ಅಶ್ವಿನಿ ಗೌಡ
ನಟಿ ಅಶ್ವಿನಿ ಗೌಡ (Ashwini Gowda) ಅನೇಕ ಸಿನಿಮಾಗಳಲ್ಲಿ ಪ್ರತಿಭೆ ತೋರಿಸಿರುವ ನಟಿ. ಅನೇಕ ಧಾರಾವಾಹಿಗಳನ್ನ ಅಭಿನಯದ ಮೂಲಕ ಕನ್ನಡಿಗರ ಮನಸ್ಸು ಗೆದ್ದ ನಟಿ. ಜೊತೆಗೆ ರಾಜಕೀಯವಾಗಿಯೂ ಸಮಾಜದಲ್ಲಿ ಗುರುತಿಸಿಕೊಂಡ ಕನ್ನಡಪರ ಹೋರಾಟಗಾರ್ತಿ ಅಶ್ವಿನಿ ಗೌಡ. ಕೌಟುಂಬಿಕವಾಗಿ ಹಾಗೂ ಸಾಮಾಜಿಕವಾಗಿ ಇವರ ಮೇಲೆ ಅನೇಕ ಆರೋಪಗಳಿವೆ. ಅನೇಕ ಕೇಸ್‌ಗಳ ವಿಚಾರವಾಗಿ ಅಶ್ವಿನಿ ಗೌಡ ಕೋರ್ಟು, ಕಛೇರಿ, ಪೊಲೀಸ್ ಸ್ಟೇಷನ್ ಮೆಟ್ಟಿಲೇರಿದ್ದಾರೆ.
ಹೀಗೆ ವಿವಾದದಿಂದ ಗುರುತಿಸಿಕೊಂಡು ದೊಡ್ಮನೆಗೆ ಹೋದವರು ತಮ್ಮ ಮೇಲಿನ ಆರೋಪದಿಂದ ಇತರರಿಂದ ಸಪರೇಷನ್ ಭಯವನ್ನೂ ಅನುಭವಿಸಿಸಬಹುದು ಅಥವಾ ಸಿಂಪತಿಯನ್ನೂ ಗಿಟ್ಟಿಸಿಕೊಳ್ಳುವ ಚಾನ್ಸ್ ಇರುತ್ತೆ. ಇಷ್ಟೇ ಅಲ್ಲ ಮೈಗೆ ಅಂಟಿಕೊಂಡಿರುವ ವಿವಾದ ಶಮನ ಮಾಡಿಕೊಳ್ಳುವ ಅಥವಾ ವಿವಾದ ಹೆಚ್ಚಿಸಿಕೊಳ್ಳುವ ಅವಕಾಶವೂ ಅವರ ವರ್ತನೆಯಲ್ಲಿ ಸಾಧ್ಯವಾಗುವ ಸಂಭವ ಇರುತ್ತೆ.

