ಬೆಂಗಳೂರು: ಇಂದಿನಿಂದ ಸಾಲು ಸಾಲು ಸರ್ಕಾರಿ ರಜೆಗಳು ಬಂದಿದ್ದು, ಜನರು ತಮ್ಮ ತಮ್ಮ ಊರುಗಳತ್ತ ಪ್ರಯಾಣ ಬೆಳೆಸುತ್ತಿದ್ದಾರೆ.
ಜನ ಸಂದಣಿ ಹೆಚ್ಚಿರುವ ಇದೇ ಸಂದರ್ಭದಲ್ಲಿ ಸಾರಿಗೆ ಸಂಸ್ಥೆ ಪ್ರಯಾಣ ದರವನ್ನು ಹೆಚ್ಚಿಸಿದೆ. ಕೆಎಸ್‍ಆರ್ ಟಿಸಿ, ಖಾಸಗಿ ಬಸ್ ಮತ್ತು ವಿಶೇಷ ಬಸ್ ಸೇವೆಯ ಪ್ರಯಾಣ ದರವನ್ನು ಹೆಚ್ಚಿಸಲಾಗಿದ್ದು. ರಾಜ್ಯದಲ್ಲಿ ಸಂಚರಿಸುವ ಬಸ್ ದರ 20% ರಷ್ಟು ಏರಿಕೆಯಾಗಿದೆ.
Advertisement
Advertisement
ಹೊರ ರಾಜ್ಯಕ್ಕೆ ಹೋಗುವ ಬಸ್ ನ ದರ 50% ರಷ್ಟು ಏರಿಕೆಯಾಗಿದೆ. ಇನ್ನೂ ಖಾಸಗಿ ಬಸ್ ದರ ಅಂತೂ ಮೂರು ಪಟ್ಟು ಅಧಿಕವಾಗಿದೆ. ಇದರಿಂದ ಪ್ರಯಾಣಿಕರು ಪರದಾಡುವಂತಾಗಿದೆ.
Advertisement
ಸಾರಿಗೆ ಸಂಸ್ಥೆಯ ಬದಲಾದ ಪ್ರಯಾಣ ದರ ಹೀಗಿದೆ.
Advertisement
ಪ್ರಯಾಣ ದರ (ರೂ.ಗಳಲ್ಲಿ)
ಸಾಮಾನ್ಯ ದಿನಗಳಲ್ಲಿ ವಿಶೇಷ ದಿನಗಳಲ್ಲಿ
1. ಬೆಂಗಳೂರು – ಬೆಳಗಾವಿ 919 1081
2. ಬೆಂಗಳೂರು – ಧರ್ಮಸ್ಥಳ 676 805
3. ಬೆಂಗಳೂರು – ತಿರುಪತಿ 683 1008
4. ಬೆಂಗಳೂರು – ಮುಂಬೈ 1365 1985
5. ಬೆಂಗಳೂರು – ಪಣಜಿ 998 1444
6. ಬೆಂಗಳೂರು – ಚೆನ್ನೈ 893 1316