ಚಿತ್ರದುರ್ಗ: ಕಲುಷಿತ ನೀರು (Polluted Water) ಸೇವಿಸಿ ದುರಂತ ನಡೆದ ಕಾವಾಡಿಗರಹಟ್ಟಿಯಲ್ಲಿ (Kavadigarahatti) ಚಿತ್ರದುರ್ಗ (Chitradurga) ಜಿಲ್ಲಾಡಳಿತದಿಂದ ಮತ್ತೊಂದು ಎಡವಟ್ಟಾಗಿದೆ. ಸಮಾಜ ಕಲ್ಯಾಣ ಇಲಾಖೆ ತೆರೆದಿದ್ದ ಗಂಜಿಕೇಂದ್ರದಲ್ಲಿ ವಿತರಿಸಿದ್ದ ಆಹಾರದಲ್ಲಿ (Food) ಮಿಡತೆ ಹುಳ ಪತ್ತೆಯಾಗಿ ನಾಗರಿಕರಲ್ಲಿ ಆತಂಕ ಸೃಷ್ಟಿಸಿದೆ.
ಇಡೀ ಬಡಾವಣೆಯ ನಾಗರಿಕರು ಇದೇ ಆಹಾರವನ್ನು ಸೇವಿಸಿದ್ದು ಮತ್ತೆ ಅಸ್ವಸ್ಥತೆ ಆತಂಕ ಸೃಷ್ಟಿಯಾಗಿದೆ. ಹೀಗಾಗಿ ಆಕ್ರೋಶಗೊಂಡ ನಾಗರಿಕರು ಕಾವಾಡಿಗರಹಟ್ಟಿಯ ರಾಷ್ಟ್ರೀಯ ಹೆದ್ದಾರಿ 48ರಲ್ಲಿ ರಸ್ತೆ ತಡೆದು ಪ್ರತಿಭಟಿಸಿದರು. ಸ್ಥಳಕ್ಕೆ ಡಿಸಿ ದಿವ್ಯ ಪ್ರಭು ತಕ್ಷಣವೇ ಆಗಮಿಸುವಂತೆ ಆಗ್ರಹಿಸಿದ್ದು, ಈ ವೇಳೆ ಸ್ಥಳಕ್ಕೆ ಧಾವಿಸಿದ ತಹಶೀಲ್ದಾರ್ ನಾಗವೇಣಿಗೆ ಜನರು ತರಾಟೆ ತೆಗೆದುಕೊಂಡರು. ಮಾತಿನ ಚಕಮಕಿ ನಡೆಸಿದರು. ಇದನ್ನೂ ಓದಿ: ಎಸ್‌ಟಿಎಸ್‌ಗೆ ಕೈ ಗಾಳ, ಆಪರೇಷನ್ ಹಸ್ತಕ್ಕೆ ಕಾರಣ ಅಮಿತ್ ಶಾ! – ಇಲ್ಲಿದೆ ಇನ್‌ಸೈಡ್ ಸ್ಟೋರಿ
ಎಫ್‌ಎಸ್‌ಎಲ್ ಟೆಸ್ಟ್ ಕಳುಹಿಸಲು ಸಂಗ್ರಹಿಸಿದ ಆಹಾರದ ಪೊಟ್ಟಣವನ್ನು ಅಧಿಕಾರಿಗಳಿಂದ ಕಿತ್ತುಕೊಂಡು ಪ್ರತಿಭಟಿಸಿದರು. ಚಿತ್ರದುರ್ಗ ಜಿಲ್ಲಾಡಳಿತ ಮಾಡಿಸುವ ಲ್ಯಾಬ್ ಟೆಸ್ಟ್ ಬಗ್ಗೆ ನಂಬಿಕೆ ಇಲ್ಲವೆಂದು ಆಕ್ರೋಶ ಹೊರಹಾಕಿದರು. ಹಾಗೆಯೇ ಕಲುಷಿತ ನೀರು ಸೇವನೆ ದುರಂತದ ಲ್ಯಾಬ್ ಟೆಸ್ಟ್ ತಿರುಚಿದ್ದಾರೆಂದು ಆರೋಪಿಸಿದ ನಾಗರಿಕರು, ಈ ಪ್ರಕರಣವನ್ನು ಮರೆಮಾಚಲಿದ್ದಾರೆಂದು ಕಿಡಿಕಾರಿದರು. ರಾತ್ರಿಯಿಡೀ ನ್ಯಾಯಕ್ಕಾಗಿ ರಸ್ತೆಯಲ್ಲೇ ಪ್ರತಿಭಟಿಸಿದರು.
ಈ ವೇಳೆ ಸ್ಥಳಕ್ಕಾಗಮಿಸಿದ ಪೊಲೀಸರ ಮಧ್ಯಸ್ಥಿಕೆಯಲ್ಲಿ ಪರಿಸ್ಥಿತಿ ಹತೋಟಿಗೆ ಬಂದಿದೆ. ಈ ಪ್ರಕರಣ ಚಿತ್ರದುರ್ಗ ಕೋಟೆ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ಇದನ್ನೂ ಓದಿ: ಪಾಕಿಸ್ತಾನ ಮಾಧ್ಯಮಗಳು ಚಂದ್ರಯಾನ-3 ಲ್ಯಾಂಡಿಂಗ್ ಕಾರ್ಯಕ್ರಮ ಪ್ರಸಾರ ಮಾಡಲಿ: ಪಾಕ್ ಮಾಜಿ ಸಚಿವ
Web Stories