ಖಾಸಗಿ ಬಸ್, ಕಂಟೈನರ್ ಮುಖಾಮುಖಿ- 6ಕ್ಕೂ ಹೆಚ್ಚು ಮಂದಿ ಸಜೀವ ದಹನ

Public TV
1 Min Read
kalaburgi bus accident

ಕಲಬುರಗಿ: ಖಾಸಗಿ ಬಸ್ ಹಾಗೂ ಕಂಟೈನರ್ ಮುಖಾಮುಖಿ ಡಿಕ್ಕಿಯಾಗಿ 6ಕ್ಕೂ ಹೆಚ್ಚು ಮಂದಿ ಮೃತಪಟ್ಟಿರುವ ಘಟನೆ ಕಲಬುರಗಿಯ ಕಮಲಾಪುರ ಹೊರವಲಯದಲ್ಲಿ ನಡೆದಿದೆ.

ಕಲಬುರಗಿಯ ಕಮಲಾಪುರ ಹೊರವಲಯದಲ್ಲಿ ಇಂದು ಬೆಳಗ್ಗೆ ಸುಮಾರು 6 ಗಂಟೆಗೆ ನಡೆದ ದುರ್ಘಟನೆಯಲ್ಲಿ ಖಾಸಗಿ ಬಸ್‍ಗೆ ಬೆಂಕಿ ತಗಲಿದ್ದು 6ಕ್ಕೂ ಹೆಚ್ಚು ಜನ ಸಾವನ್ನಪ್ಪಿದ್ದರೇ 22ಕ್ಕೂ ಹೆಚ್ಚು ಜನರಿಗೆ ಗಾಯಗಳಾಗಿವೆ. ಗೋವಾದಿಂದ ಹೈದ್ರಾಬಾದ್‍ಗೆ ಈ ಬಸ್ ಸಂಚರಿಸುತ್ತಿತ್ತು. ಈ ಬಸ್‍ನಲ್ಲಿ ಒಟ್ಟು 29 ಜನ ಪ್ರಯಾಣಿಕರು ಸಂಚರಿಸುತ್ತಿದ್ದರು. ಇದನ್ನೂ ಓದಿ: ಹೆಲಿಕಾಪ್ಟರ್‌ನಲ್ಲಿ ಸುತ್ತಿದ ರೈತರು, ಕುರಿಗಾಹಿಗಳು

kalaburgi bus accident 1

ಅಗ್ನಿಶಾಮಕದಳದ ಅಧಿಕಾರಿಗಳಿಂದ ಬೆಂಕಿ ನಂದಿಸುವ ಕಾರ್ಯ ನಡೆದಿದೆ. 22 ಜನ ಗಾಯಾಳುಗಳನ್ನು ಹೆಚ್ಚಿನ ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಇದನ್ನೂ ಓದಿ: ಟಿಪ್ಪು, ಮೊಘಲ್ ದೊರೆಗಳ ಬಗ್ಗೆ ಪುಟಗಟ್ಟಲೆ ಉಲ್ಲೇಖ, ನಮ್ಮ ರಾಜರ ಶೌರ್ಯದ ಮಾಹಿತಿ ಇರಲಿಲ್ಲ- ಶಿಕ್ಷಣ ಇಲಾಖೆಯ ವರದಿಯಲ್ಲಿ ಏನಿದೆ?

Share This Article
Leave a Comment

Leave a Reply

Your email address will not be published. Required fields are marked *