ಬೆಂಗಳೂರು: ಅಪ್ರಾಪ್ತರನ್ನು ಬಳಸಿಕೊಂಡು ಬೈಕ್‍ಗಳನ್ನು ಕಳ್ಳತನ ಮಾಡಿಸುತ್ತಿದ್ದ ಕಾನ್‍ಸ್ಟೇಬಲ್‍ನನ್ನು ಅದೇ ಇಲಾಖೆಯ ಪೊಲೀಸರೇ ಬಂಧಿಸಿರುವ ಘಟನೆ ನಗರದ ಮಾಗಡಿ ರಸ್ತೆಯಲ್ಲಿ ನಡೆದಿದೆ.
ಪೊಲೀಸ್ ಕಾನ್‍ಸ್ಟೇಬಲ್ ಹೊನ್ನಪ್ಪ ರವಿ ಬಂಧಿತ ಆರೋಪಿ. ಈತ ಅಪ್ರಾಪ್ತರನ್ನು ಬಳಸಿಕೊಂಡು ಬೆಂಗಳೂರು, ಬೆಂಗಳೂರು ಹೊರವಲಯ, ಹಾವೇರಿಯ ರಾಣಿಬೆನ್ನೂರು ಸೇರಿದಂತೆ ಅನೇಕ ಕಡೆ ಬೈಕ್‍ಗಳನ್ನು ಕಳ್ಳತನ ಮಾಡಿಸುತ್ತಿದ್ದ. ಈವರೆಗೂ ಹೊನ್ನಪ್ಪ ರವಿ ಮಾರಾಟ ಮಾಡಿದ್ದ 53 ಬೈಕ್‍ಗಳನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ಹೊನ್ನಪ್ಪ, ರಾಜಸ್ಥಾನದ ರಮೇಶ್, ಇಬ್ಬರು ಅಪ್ರಾಪ್ತರು ಸೇರಿದಂತೆ ನಾಲ್ವರನ್ನು ಬಂಧಿಸಿದ್ದಾರೆ. ಇದನ್ನೂ ಓದಿ: ಮೀಟರ್ ಬಡ್ಡಿ ದಂಧೆಗೆ ಮಹಿಳೆ ಬಲಿ – ಸೆಲ್ಫಿ ವೀಡಿಯೋ ಮಾಡಿ ಆತ್ಮಹತ್ಯೆ
2016ರ ಬ್ಯಾಚ್‍ನ ಸಿವಿಲ್ ಕಾನ್‍ಸ್ಟೇಬಲ್ ಆಗಿರುವ ಹೊನ್ನಪ್ಪ ರವಿ ವಿದ್ಯಾರಣ್ಯಪುರ ಪೊಲೀಸ್ ಠಾಣೆಯಲ್ಲಿ ಆಗಿ ಕಾರ್ಯನಿರ್ವಹಿಸುತ್ತಿದ್ದ. ಸದ್ಯ ಒಒಡಿ ಮೇಲೆ ಐಪಿಎಸ್ ಅಧಿಕಾರಿಯೊಬ್ಬರ ಪರ್ಸನಲ್ ಕಾರು ಡ್ರೈವರ್ ಆಗಿರುವ ಹೊನ್ನಪ್ಪ ಮಾರಾಟ ಮಾಡಿದ ಬೈಕ್‍ನಿಂದ ಬಂದ ಹಣದಲ್ಲಿ ಐದರಿಂದ ಆರು ಸಾವಿರ ಹಣವನ್ನು ಹುಡುಗರಿಗೆ ನೀಡುತ್ತಿದ್ದ. ಇದನ್ನೂ ಓದಿ: ಫುಡ್ ಡೆಲಿವರಿ ಬಾಯ್ ಮೇಲೆ ಮಹಿಳಾ ಸಿಬ್ಬಂದಿ ದರ್ಪ
ಸದ್ಯ ಕಾನ್‍ಸ್ಟೇಬಲ್‍ನನ್ನು ಬಾಡಿ ವಾರೆಂಟ್ ಮೇಲೆ ವಶಕ್ಕೆ ಪಡೆದಿರುವ ಮಾಗಡಿ ರೋಡ್ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ. ಅಪರಾಧಗಳನ್ನು ನಿಯಂತ್ರಿಸಬೇಕಾದ ಆರಕ್ಷಕನೇ ಕಳ್ಳನಾಗಿರುವುದು ವಿಪರ್ಯಾಸ.