ಹಾಸನ: ನಮ್ಮ ಪಕ್ಷದಲ್ಲೂ ಷಡ್ಯಂತ್ರಗಳು ನಡೆಯುತ್ತವೆ ಎನ್ನುವುದನ್ನು ನಾವು ತಳ್ಳಿ ಹಾಕುವಂತಿಲ್ಲ ಎಂದು ಸಹಕಾರ ಸಚಿವ ಕೆ.ಎನ್.ರಾಜಣ್ಣ (KN Rajanna) ಹೇಳಿದ್ದಾರೆ.
ಮುಡಾ (MUDA) ದಾಖಲೆ ಕೊಟ್ಟಿದ್ದೇ ಕಾಂಗ್ರೆಸ್‌ನವರು (Congress) ಎಂಬ ಯತ್ನಾಳ್ ಹೇಳಿಕೆ ಕುರಿತು ಹಾಸನ (Hassan) ತಾಲೂಕಿನ ಗೊರೂರಿನಲ್ಲಿ ಮಾತನಾಡಿದ ಅವರು, ನಮ್ಮ ಪಕ್ಷದವರು ಕೊಟ್ಟಿದ್ದಾರೋ, ಅವರ ಪಕ್ಷದವರು ಕೊಟ್ಟಿದ್ದಾರೋ ನಮಗೂ ಗೊತ್ತಿಲ್ಲ. ಅವರಿಗೂ ಗೊತ್ತಿಲ್ಲ. ಕೊಡುವಂತದ್ದು, ತೆಗೆದುಕೊಳ್ಳುವಂತದ್ದು ಏನೂ ಇರಲ್ಲ. ಅವರು ಪಕ್ಷದಲ್ಲಿ ಷಡ್ಯಂತ್ರ ನಡೆಯಲ್ಲ ಅಂತ ಹೇಳಲು ಆಗಲ್ಲ. ರಾಜಕಾರಣದಲ್ಲಿ ಇವೆಲ್ಲಾ ಇರುತ್ತದೆ. ಅಧಿಕಾರ ಪಡೆಯಲು ಎಲ್ಲಾ ಪಾರ್ಟಿಯವರು ಪ್ರಯತ್ನ ಮಾಡುತ್ತಾರೆ. ಎಲ್ಲಾ ರಾಜಕೀಯ ಮುಖಂಡರು ಅಧಿಕಾರಕ್ಕೆ ಬರಬೇಕೆಂದು ಪ್ರಯತ್ನ ಮಾಡುತ್ತಾರೆ. ಅದರಲ್ಲಿ ತಪ್ಪೇನಿಲ್ಲ ಎಂದರು. ಇದನ್ನೂ ಓದಿ: ಕುಂಟು ನೆಪ ಹೇಳಿ ಕರ್ನಾಟಕ ಐಪಿಎಸ್ ಕೇಡರ್‌ನಲ್ಲಿ ವಿಲೀನ: ಚಂದ್ರಶೇಖರ್ ಅಮಾನತಿಗೆ ಜೆಡಿಎಸ್ ದೂರು
Advertisement
Advertisement
ಸಿಬಿಐ ಮುಕ್ತ ತನಿಖೆ ಅಧಿಕಾರ ಮೊಟಕುಗೊಳಿಸಿರುವ ವಿಚಾರದ ಕುರಿತು ಮಾತನಾಡಿದ ಅವರು, ಇದು ನಿರಂತರವಾಗಿ ನಡೆಯುವಂತಹದ್ದು. ಹಿಂದೆ 1977ರಲ್ಲಿ ದೇವರಾಜ ಅರಸು ವಾಪಸ್ ತೆಗೆದಿದ್ದಾರೆ. ಬೇರೆಬೇರೆ ಮುಖ್ಯಮಂತ್ರಿಗಳು ಇದ್ದಾಗ ಈ ರೀತಿ ಪ್ರಕ್ರಿಯೆ ನಡೆದಿದೆ, ಹೊಸದಲ್ಲ. ಮುಂದೆ ಅಗತ್ಯತೆ ಬಿದ್ದರೆ ಮುಕ್ತ ತನಿಖೆ ಮಾಡಲು ಅವಕಾಶ ಕೊಡಬಹುದು. ಕರ್ನಾಟಕ ಸರ್ಕಾರ ಮಾಡಿದೆ ಅಂತ ಅಲ್ಲ. ಬಿಜೆಪಿ ಅಧಿಕಾರದಲ್ಲಿರುವ ಎಷ್ಟು ಕಡೆ ವಾಪಸ್ ತೆಗೆದುಕೊಂಡಿಲ್ಲ. ಇಲ್ಲಿ ಮಾಡಿದರೆ ಮಾತ್ರ ದೊಡ್ಡದು ಅಂತ ಮೋದಿಯವರು ಹರಿಯಾಣ ಎಲೆಕ್ಷನ್‌ನಲ್ಲಿ ಮಾತನಾಡುತ್ತಾರೆ. ಮಹಾನ್ ತಪ್ಪು ಮಾಡಿದ್ದಾರೆ ಅಂತ ಬಿಂಬಿಸುವುದು ಸರಿಯಲ್ಲ ಎಂದು ಕಿಡಿಕಾರಿದರು. ಇದನ್ನೂ ಓದಿ: Kolara | ತಾಂತ್ರಿಕ ದೋಷದಿಂದ ತುರ್ತು ಭೂಸ್ಪರ್ಶ ಮಾಡಿದ್ದ ವಾಯುಪಡೆ ಹೆಲಿಕಾಪ್ಟರ್ ಸುರಕ್ಷಿತವಾಗಿ ಟೇಕಾಫ್
Advertisement
ಸಿದ್ದರಾಮಯ್ಯ ರಾಜೀನಾಮೆ ಕೊಡಬೇಕೆಂಬ ಬಿಜೆಪಿ ನಾಯಕರ ಹೇಳಿಕೆ ಕುರಿತು ಪ್ರತಿಕ್ರಿಯಿಸಿ, ಯಾರು ಬಿಜೆಪಿಯವರು ಹೇಳುತ್ತಾರೆ. ಅವರು ಆ ಜಾಗದಲ್ಲಿ ಎಷ್ಟು ದಿನ ಇರುತ್ತಾರೆ ಎಂದು ಪ್ರಶ್ನಿಸಿದರು. ಜಾತಿಗಣತಿ ಜಾರಿ ಬಗ್ಗೆ ಸಿಎಂ ಹೇಳಿಕೆ ವಿಚಾರ ಕುರಿತು ಪ್ರತಿಕ್ರಿಯಿಸಿದ ಅವರು, ಸಿಎಂ ಅವರು ಹೇಳಿದ ಮೇಲೆ ನಾವು ಭಿನ್ನಾಭಿಪ್ರಾಯ ಹೇಳುವುದಿಲ್ಲ. ಅವರು ಹೇಳಿದ್ದಾರೆ ನಾವು ಒಪ್ಪಿದ್ದೇವೆ. 2013ರಲ್ಲಿ ಆಗಿದ್ದು ಈಗ ವರದಿ ಕೊಟ್ಟಿದ್ದಾರೆ. ಕ್ಯಾಬಿನೆಟ್ ಮುಂದೆ ಬಂದು ಅದನ್ನು ಒಪ್ಪಬಹುದು ಅಂತ ನಾನು ಅಂದುಕೊಂಡಿದ್ದೇನೆ. ಇನ್ನುಮುಂದೆ ತಡ ಆಗದ ರೀತಿಯಲ್ಲಿ ಜಾತಿಗಣತಿ ಬಗ್ಗೆ ನಿರ್ಣಯ ತೆಗೆದುಕೊಳ್ಳುತ್ತಾರೆ ಎಂದು ಹೇಳಿದರು. ಇದನ್ನೂ ಓದಿ: ಬೀದರ್ ಪೊಲೀಸರ ಭರ್ಜರಿ ಕಾರ್ಯಾಚರಣೆ – 43 ಲಕ್ಷಕ್ಕೂ ಅಧಿಕ ಮೌಲ್ಯದ ಬೈಕ್, ಚಿನ್ನಾಭರಣ ಜಪ್ತಿ
Advertisement
ಹಿಂದೂ ಧರ್ಮದ ಬಗ್ಗೆ ಫ್ರೊ ಕೆ.ಎಸ್.ಭಗವಾನ್ ಹೇಳಿಕೆ ವಿಚಾರ ಕುರಿತು ಮಾತನಾಡಿದ ಅವರು, ಹಿಂದೂಗಳ ಧರ್ಮ ಅಲ್ಲ ಬ್ರಾಹ್ಮಣರ ಧರ್ಮ ಎಂದು ಹೇಳಿದ್ದಾರೆ. ಅದು ಅವರ ಅಭಿಪ್ರಾಯ. ನನ್ನದೇನು ರಿಯಾಕ್ಷನ್ ಇಲ್ಲ. ಹಿಂದೂ ಧರ್ಮ ಅಂತ ನಾನು ಒಪ್ಪಲ್ಲ. ಇದು ಬ್ರಾಹ್ಮಣರ ಧರ್ಮ ಅಷ್ಟೇ, ಅಹಿಂದ ವರ್ಗಗಳ ಧರ್ಮ ಅಲ್ಲ ಅಂತ ಹೇಳಿದ್ದಾರೆ. ಅದು ಅವರ ಅಭಿಪ್ರಾಯ. ಅದರ ಬಗ್ಗೆ ನನ್ನ ಅಭಿಪ್ರಾಯ ಇಲ್ಲ ಎಂದರು. ಇದನ್ನೂ ಓದಿ: ಮಂಡ್ಯ | ನಿಂತಿದ್ದ ಕಂಟೈನರ್‌ಗೆ ಕೆಎಸ್‌ಆರ್‌ಟಿಸಿ ಬಸ್ ಡಿಕ್ಕಿ – 20ಕ್ಕೂ ಹೆಚ್ಚು ಜನರಿಗೆ ಗಂಭೀರ ಗಾಯ