ನೆಲಮಂಗಲ: ಗ್ರಾಮೀಣ ಪ್ರದೇಶದಲ್ಲಿ ಆಡಳಿತ ವ್ಯವಸ್ಥೆಯ ಏಣಿಶ್ರೇಣಿ ನಿಯಮದಲ್ಲಿ ಬೇರು ಮಟ್ಟದಲ್ಲಿ ಕಾರ್ಯನಿರ್ವಹಿಸುವ ಅಂಗನವಾಡಿ ಕಾರ್ಯಕರ್ತೆಯರಿಗೆ ಸರ್ಕಾರ ಹೆಚ್ಚಿನ ಸೌಲಭ್ಯ ನೀಡಬೇಕು ಎಂದು ಎಐಟಿಯುಸಿ ಸಂಘಟನೆಯ ತಾಲೂಕು ಅಧ್ಯಕ್ಷೆ ಶಿವಗಂಗೆ ಜ್ಯೋತಿ ಸರ್ಕಾರಕ್ಕೆ ಒತ್ತಾಯಿಸಿದರು.
Advertisement
ಬೆಂಗಳೂರು ಹೊರವಲಯ ನೆಲಮಂಗಲ ತಾಲೂಕಿನ, ಕುಲುವನಹಳ್ಳಿ ಪಂಚಾಯತಿ ವ್ಯಾಪ್ತಿಯ ಸುಧಾನಗರದ ಅಂಗನವಾಡಿ ಕೇಂದ್ರದಲ್ಲಿ ರಾಜ್ಯ ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕಿಯರ ಫೆಡರೇಷನ್ ವತಿಯಿಂದ ಸಂಘಟನೆಗೆ ನೋಂದಣಿ ಮತ್ತು ಸಂಘದ ನಡಾವಳಿ ತಿಳಿಸಿಕೊಡುವ ಸಭೆ ನಡೆಯಿತು. ಇದನ್ನೂ ಓದಿ: ಹುಲಿ ಹುಡುಕೋ ಕಾರ್ಯಾಚರಣೆ ವೇಳೆ ಸಿಕ್ತು ಕಾಡುಕೋಣ..!
Advertisement
ಈ ವೇಳೆ ಮಾತನಾಡಿದ ಶಿವಗಂಗೆ ಜ್ಯೋತಿ ಅವರು, ಮಹಿಳೆಯರ ಸಬಲೀಕರಣದ ಜೊತೆಗೆ ಕಾರ್ಯಕರ್ತೆಯರ ಹಕ್ಕುಗಳಿಗೆ ಹಾಗೂ ಮುಖ್ಯವಾಗಿ ಅಂಗನವಾಡಿ ಕಾರ್ಯಕರ್ತೆಯರ ವೇತನ ಹೆಚ್ಚಳ, ಪಿಂಚಣಿ, ಹೋರಾಟ, ಸರ್ಕಾರದ ಸೌಲಭ್ಯವನ್ನು ತಲುಪಿಸಲು ಶ್ರಮಿಸುತ್ತಿದ್ದೇವೆ. ಕೋವಿಡ್ ನೆಪವೊಡ್ಡಿ ನಿವೃತ್ತರಾದ ಅಂಗನವಾಡಿ ಕಾರ್ಯಕರ್ತೆಯರಿಗೆ 1 ಲಕ್ಷ ಸರ್ಕಾರ ನೀಡುತ್ತಿದ್ದನ್ನು ಮೊಟಕುಗೊಳಿಸಿರುವುದಕ್ಕೆ ಬೇಸರ ವ್ಯಕ್ತಪಡಿಸಿದರು.
Advertisement
Advertisement
ಅಂಗನವಾಡಿ ಕಾರ್ಯಕರ್ತೆಯರನ್ನು ನೌಕರರೆಂದು ಗುರುತಿಸಿ ಸರ್ಕಾರಿ ಶ್ರೇಣಿಯ ಸೌಲಭ್ಯ ನೀಡಬೇಕು. ಕಾರ್ಯಕರ್ತೆಯರ ಜೀವನ ಮಟ್ಟ ಸುಧಾರಿಸುವುದೇ ನಮ್ಮ ಸಂಘಟನೆ ಗುರಿ ಎಂದು ಶಪಥ ಮಾಡಿದರು. ಇದನ್ನೂ ಓದಿ: ಸರಕು, ಸೇವೆಗಳ ಬೇಡಿಕೆ ಹೆಚ್ಚಿಸಲು ಗುಣಮಟ್ಟದ ರಫ್ತು ಅವಶ್ಯಕ – ವಸಂತ ಲದ್ವಾ
ಈ ವೇಳೆಯಲ್ಲಿ ಅಂಗನವಾಡಿ ಕಾರ್ಯಕರ್ತೆಯರಾದ ಹನುಮಕ್ಕ, ಸುಶೀಲ, ಮುದ್ದುಲಕ್ಷ್ಮಿ, ಚಂದ್ರಕಲಾ, ಪಾರಿಜಾತ, ಕಮಲಾಕ್ಷಿ, ಮುಂತಾದ ಮೂವತ್ತಕ್ಕೂ ಅಧಿಕ ಮಂದಿ ಪಾಲ್ಗೊಂಡಿದ್ದರು.