ಹಾವೇರಿ: ಬರ್ತ್‌ಡೇ ದಿನವೇ ಕಾಂಗ್ರೆಸ್ (Congress) ಯುವ ಕಾರ್ಯಕರ್ತ ಹತ್ಯೆಯಾಗಿರುವ ಘಟನೆ ಹಾವೇರಿಯಲ್ಲಿ (Haveri) ನಡೆದಿದೆ.
ಹಾನಗಲ್ ತಾಲೂಕಿನ ಬೊಮ್ಮನಹಳ್ಳಿ ಗ್ರಾಮದ ನಿವಾಸಿ ಮನೋಜ್ ಪ್ರಕಾಶ್ ಉಡಗಣ (28) ಹತ್ಯೆಯಾದ ಯುವಕ. ಮನೋಜ್‌ಗೆ ಕಂಠಪೂರ್ತಿ ಮದ್ಯ ಕುಡಿಸಿ, ವರದಾ ನದಿ ಬ್ರಿಡ್ಜ್ ಮೇಲಿಂದ ಆರೋಪಿಗಳು ನೂಕಿ ಹತ್ಯೆ ಮಾಡಿದ್ದಾರೆನ್ನಲಾಗಿದೆ. ಇದನ್ನೂ ಓದಿ: ಆಟೋದಲ್ಲಿ ಬಂದು ಅಂಗಡಿ ಮುಂದಿದ್ದ ಉಪ್ಪಿನ ಮೂಟೆ ಕದ್ದ ಕಳ್ಳರು
ನನ್ನ ಸಹೋದರನನ್ನು ಕಿಡ್ನ್ಯಾಪ್ ಮಾಡಿ ಹತ್ಯೆ ಮಾಡಿದ್ದಾರೆಂದು ಕೆಲವರ ವಿರುದ್ಧ ಮೃತ ಮನೋಜ್‌ನ ಸಹೋದರ ಶಂಭು ಗಂಭೀರ ಆರೋಪ ಮಾಡಿದ್ದಾರೆ. ಮದುವೆಯಾದ ಗೃಹಿಣಿಗೆ ಮೆಸೇಜ್ ಮಾಡುತ್ತಿದ್ದ ಕಾರಣಕ್ಕೆ ಹತ್ಯೆ ಮಾಡಲಾಗಿದೆ ಎಂದು ಶಂಕಿಸಲಾಗಿದೆ.
ಮನೋಜ್, ಯುವತಿಯೊಬ್ಬಳನ್ನು ಪ್ರೀತಿಸುತ್ತಿದ್ದ. ಆದರೆ, ಆಕೆಗೆ ಬೇರೊಬ್ಬರ ಜೊತೆ ಮದುವೆಯಾಯಿತು. ಆದರೂ, ಮನೋಜ್ ಆಕೆಗೆ ಮೆಸೇಜ್ ಮಾಡುತ್ತಿದ್ದ. ಇದರಿಂದ ಆಕೆಯ ಪತಿ ಕೋಪಗೊಂಡು ಕಾಂಗ್ರೆಸ್ ಯುವ ಕಾರ್ಯಕರ್ತನನ್ನು ಹತ್ಯೆ ಮಾಡಿದ್ದಾರೆ ಎನ್ನಲಾಗಿದೆ. ಇದನ್ನೂ ಓದಿ: ಅತ್ಯಾಚಾರ ಕೇಸಲ್ಲಿ ಅಪರಾಧಿ; ತೀರ್ಪು ಪ್ರಕಟವಾಗುತ್ತಿದ್ದಂತೆ ಕೋರ್ಟ್‌ನಲ್ಲಿ ಕಣ್ಣೀರಿಟ್ಟ ಪ್ರಜ್ವಲ್ ರೇವಣ್ಣ
ಕಳೆದ ಜು.26 ರಂದು ಮನೋಜ್ ಬರ್ತ್ಡೇ ಇತ್ತು. ಹುಟ್ಟುಹಬ್ಬದ ದಿನವೇ ಆತನನ್ನು ಅಪಹರಿಸಿ ಹತ್ಯೆ ಮಾಡಲಾಗಿದೆ. ಸವಣೂರು ತಾಲೂಕು ಮೆಳ್ಳಾಗಟ್ಟಿ ಬಳಿ ವರದಾ ನದಿ ದಡದಲ್ಲಿ ಮನೋಜ್ ಶವ ಪತ್ತೆಯಾಗಿದೆ. ಶವವನ್ನು ಪೊಲೀಸರು ಹೊರತೆಗೆದಿದ್ದಾರೆ. ಹಾನಗಲ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.