ನವದೆಹಲಿ: ಬಿಜೆಪಿ ಅಧ್ಯಕ್ಷ ಜೆಪಿ ನಡ್ಡಾ ಅವರ ದೆಹಲಿ ನಿವಾಸದ ಹೊರಗೆ ಬೆಂಕಿ ಹಚ್ಚಿದ ಆರೋಪದ ಮೇಲೆ ಕಾಂಗ್ರೆಸ್‍ನ ಯುವ ಘಟಕವಾದ ನ್ಯಾಷನಲ್ ಸ್ಟೂಡೆಂಟ್ ಯೂನಿಯನ್ ಆಫ್ ಇಂಡಿಯಾ (ಎನ್‍ಎಸ್‍ಯುಐ)ನ ನಾಲ್ವರು ಸದಸ್ಯರನ್ನು ದೆಹಲಿ ಪೊಲೀಸರು ಬಂಧಿಸಿದ್ದಾರೆ.
ಜಗದೀಪ್ ಸಿಂಗ್, ಸರ್ವೋತ್ತಮ್ ರಾಣಾ, ಪ್ರಣವ್ ಪಾಂಡೆ ಮತ್ತು ವಿಶಾಲ್ ಬಂಧಿತ ಆರೋಪಿ. ನಡ್ಡಾ ಅವರ ಮೋತಿ ಲಾಲ್ ನೆಹರು ಮಾರ್ಗ ನಿವಾಸದಲ್ಲಿ ಈ ಘಟನೆ ನಡೆದಿದೆ. 8-10 ಜನರು ಮನೆಯ ಹೊರಗೆ ಜಮಾಯಿಸಿ ಘೋಷಣೆ ಕೂಗಲು ಪ್ರಾರಂಭಿಸಿದ್ದರು. ಕೆಲ ಸಮಯದ ನಂತರ ಆಕ್ರೋಶಗೊಂಡ ಪ್ರತಿಭಟನಾಕಾರರು ಎರಡು ಖಾಕಿ ಚಡ್ಡಿಗಳನ್ನು ಮರದ ಕೋಲಿಗೆ ಸುತ್ತಿ ಬೆಂಕಿ ಹಚ್ಚಿದರು. ಇದನ್ನೂ ಓದಿ: ಏಕನಾಥ್ ಶಿಂಧೆ ಮಹಾರಾಷ್ಟ್ರದ ಮುಂದಿನ ಸಿಎಂ?
Advertisement
Advertisement
ಬಳಿಕ ಮನೆಯ ಗೇಟ್‍ನಲ್ಲಿರುವ ಭದ್ರತಾ ಕೊಠಡಿಗೆ ಸುಟ್ಟ ಕೋಲುಗಳನ್ನು ಎಸೆಯಲು ಯತ್ನಿಸಿದರಾದರೂ ಭದ್ರತಾ ಸಿಬ್ಬಂದಿ ಈ ಪ್ರಯತ್ನವನ್ನು ವಿಫಲಗೊಳಿಸಿದರು. ಈ ಹಿನ್ನೆಲೆಯಲ್ಲಿ ಪೊಲೀಸರು ಪ್ರಕರಣವನ್ನು ದಾಖಲಿಸಿದಕೊಂಡಿದ್ದಾರೆ. ಈ ಹಿನ್ನೆಲೆಯಲ್ಲಿ ಈ ಹಿನ್ನೆಲೆಯಲ್ಲಿ ಇದುವರೆಗೆ 4 ಆರೋಪಿಗಳನ್ನು ವಿವಿಧೆಡೆ ಬಂಧಿಸಲಾಗಿದೆ. ಈ ಬಗ್ಗೆ ತನಿಖೆ ನಡೆಸಿದ ಪೊಲೀಸರು, ಘಟನೆಯ ಸ್ಥಳದ ಹೊರಗೆ ಅಳವಡಿಸಲಾದ ಸಿಸಿಟಿವಿಗಳ ದೃಶ್ಯಗಳನ್ನು ಪರಿಶೀಲಿಸಿದ್ದಾರೆ. ಇದನ್ನೂ ಓದಿ: ಸಿಎಂ ಅಧಿಕೃತ ನಿವಾಸ ತೊರೆದ ಉದ್ದವ್ ಠಾಕ್ರೆ