ಬೆಂಗಳೂರು: 2023ರ ವಿಧಾನಸಭೆ ಚುನಾವಣೆಗೆ (Election) ರಾಜಕೀಯ ಪಕ್ಷಗಳ ಚಟುವಟಿಕೆ ಈಗಿನಿಂದಲೇ ಗರಿಗೆದರಿವೆ. ಅದರಲ್ಲೂ ಕಾಂಗ್ರೆಸ್ (Congress) ಪಕ್ಷ ನವೆಂಬರ್‌ನೊಳಗೆ ರಾಜ್ಯದ ಎಲ್ಲ ಕಡೆ ಒಂದು ರೌಂಡ್ ಹವಾ ಮುಗಿಸಲು ತಂತ್ರ ಹೆಣೆದಿದೆ.
ಮೇಕೆದಾಟು ಪಾದಯಾತ್ರೆಯಿಂದ ಹಳೆ ಮೈಸೂರಿನ ಕೆಲ ಜಿಲ್ಲೆಗಳು, ಬೆಂಗಳೂರು ಕವರ್ ಮಾಡಿರುವ ಕಾಂಗ್ರೆಸ್ ನಾಯಕರು, ಸ್ವಾತಂತ್ರ್ಯ ನಡಿಗೆಯಿಂದ ಬೆಂಗಳೂರು ಸೇರಿ ಕೆಲ ಸುತ್ತಮುತ್ತಲ ಜಿಲ್ಲೆಗಳು ಕವರ್ ಮಾಡಿದ್ರು. ಈಗ ಭಾರತ್ ಜೋಡೋ ಯಾತ್ರೆ (Bharat Jodo Yatra) ಮೂಲಕ ಹಳೆ ಮೈಸೂರು, ಮಧ್ಯ ಕರ್ನಾಟಕ, ಹೈದರಾಬಾದ್ ಕರ್ನಾಟಕದಲ್ಲಿ ಹವಾ ಎಬ್ಬಿಸಿದ್ದಾರೆ. ಇನ್ನು ಸಿದ್ದರಾಮೋತ್ಸವ ದಾವಣಗೆರೆಯಲ್ಲಿ ನಡೆದಿರೋದ್ರಿಂದ ಮಧ್ಯ ಕರ್ನಾಟಕದ ಸುತ್ತಮುತ್ತ ಜಿಲ್ಲೆಗಳ ಮೇಲೆ ಪಕ್ಷದ ಪ್ರಭಾವ ಬೀರಿದೆ. ಇದನ್ನೂ ಓದಿ: ಮುಸ್ಲಿಮರಲ್ಲೂ ಜಾತಿ ಪದ್ಧತಿ – ಪಿಂಜಾರ, ನದಾಫ್ ಉಪಜಾತಿಗೆ ವಿಶೇಷ ಮೀಸಲಾತಿ ಕೊಡಲು ಒತ್ತಾಯ
ಆದರೆ ಕರಾವಳಿ (Coastal), ಮುಂಬೈ ಕರ್ನಾಟದಲ್ಲಿ ರಣಕಹಳೆಯನ್ನು ಮೊಳಗಿಸಲು ಕಾಂಗ್ರೆಸ್ ಇನ್ನು ಅಖಾಡಕ್ಕೆ ಇಳಿದಿಲ್ಲ. ಹಾಗಾಗಿ ನೆಕ್ಸ್ಟ್ ಕರಾವಳಿ ಕರ್ನಾಟಕ ಮತ್ತು ಮುಂಬೈ ಕರ್ನಾಟಕದ ಮೇಲೆ ಕಣ್ಣಿಟ್ಟಿರೋ ಕಾಂಗ್ರೆಸ್ ಈ ಭಾಗದಲ್ಲಿ ಯಾತ್ರೆ ಜೊತೆಗೆ ಮೆಗಾ ಶೋ ನಡೆಸಲು ಪ್ಲ್ಯಾನ್ ಮಾಡಿದೆ. ಆ ಮೂಲಕ ಬಿಜೆಪಿಗೆ ಹವಾ ಕುಗ್ಗಿಸಲು ಮುಂದಾಗಿದೆ. ಆದ್ರೆ ಈ ಎರಡು ಭಾಗಗಳಲ್ಲಿ ಕಾಂಗ್ರೆಸ್‍ನಿಂದ ಯಾತ್ರೆಗಳ ಜಾತ್ರೆಯೋ? ಸಮಾವೇಶಗಳೋ? ಅನ್ನೊದು ಗೊತ್ತಾಗಬೇಕಿದೆ. ಈ ಬಗ್ಗೆ ನವೆಂಬರ್ ಮೊದಲ ವಾರದಲ್ಲಿ ಡಿಕೆಶಿ (DK Shivakumar), ಸಿದ್ದರಾಮಯ್ಯ (Siddaramaiah) ಜೋಡಿ ನಿರ್ಧಾರ ಮಾಡಲಿದೆ. ಇದನ್ನೂ ಓದಿ: ಯತ್ನಾಳ್‍ಗೆ ನೋಟಿಸ್ ನೀಡಿ ಪಕ್ಷದ ಹಿರಿಯ ನಾಯಕರ ವಿರುದ್ಧ ಮಾತನಾಡದಂತೆ ವಾರ್ನ್ ಮಾಡಿದ್ದೇವೆ: ಅರುಣ್ ಸಿಂಗ್