ಬೀದರ್: ಮಾಜಿ ಸಚಿವ ಡಿ.ಕೆ.ಶಿವಕುಮಾರ್ ಮೇಲೆ ರಾಜಕೀಯ ಪ್ರೇರಿತ ಪ್ರಕರಣ ದಾಖಲಿಸಿ ಕೇಂದ್ರ ಸರ್ಕಾರ ದಬ್ಬಾಳಿಕೆ ಮಾಡುತ್ತಿದೆ. ಅಲ್ಲದೆ, ತನಿಖಾ ಸಂಸ್ಥೆಗಳು ಮಾನಸಿಕ, ದೈಹಿಕವಾಗಿ ಕ್ರೂರವಾಗಿ ನಡೆಸಿಕೊಳ್ಳುತ್ತಿವೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ್ ಖಂಡ್ರೆ ಆರೋಪಿಸಿದ್ದಾರೆ.
ಬೀದರ್‍ನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೇಂದ್ರ ಸರ್ಕಾರ ಈ ರೀತಿ ನಡೆದುಕೊಳ್ಳುವುದು ಖಂಡನೀಯವಾಗಿದ್ದು, ಡಿಕೆಶಿಗೆ ನ್ಯಾಯ ಸಿಕ್ಕು ಜಯಶಾಲಿಯಾಗಿ ಹೊರ ಬರುತ್ತಾರೆ. ಡಿಕೆಶಿಯನ್ನು ಸಿದ್ದರಾಮಯ್ಯ ಭೇಟಿಯಾಗಲಿದ್ದು, ಅವರ ಜೊತೆ ಕಾಂಗ್ರೆಸ್ ಪಕ್ಷ ಇದೆ ಎಂದು ತಿಳಿಸಿದರು.
Advertisement
Advertisement
ನೆರೆ ಸಂತ್ರಸ್ತರಿಗೆ ಪರಿಹಾರ ನೀಡಲು ಕೇಂದ್ರ ಸರ್ಕಾರ ವಿಳಂಬ ನೀತಿ ಅನುಸರಿಸುತ್ತಿರುವ ಹಿನ್ನೆಲೆ ಖಂಡ್ರೆ ಆಕ್ರೋಶ ವ್ಯಕ್ತಪಡಿಸಿದ್ದು, ಮೋದಿ, ಅಮಿತ್ ಶಾ ಬಳಿ ಪರಿಹಾರ ಕೇಳಲು ಸಿಎಂ, ಸಂಸದರು, ಸಚಿವರಿಗೆ ಎದೆಗಾರಿಕೆ ಇಲ್ಲ. ರಾಜ್ಯಕ್ಕೆ ಮೋದಿ ಮಲತಾಯಿ ಧೋರಣೆ ಅನುಸರಿಸುತ್ತಿದ್ದು, ನಿರಾಶ್ರಿತರ ಬಗ್ಗೆ ಎಳ್ಳಷ್ಟು ಕಳಕಳಿ ಇಲ್ಲ. ಇಂಥಾ ಸರ್ಕಾರ ಬೇಕಾ? 25 ಸಂಸದರನ್ನು ಗೆಲ್ಲಿಸಿ ಕಳಿಸಿದ್ದೇವೆ. ನಮ್ಮ ಸಂಸದರು ಎಲ್ಲಿದ್ದಾರೆ? ಎಂದು ಖಂಡ್ರೆ ಬಿಜೆಪಿ ನಾಯಕರ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು.