ಚಿತ್ರದುರ್ಗ: ರಾಜ್ಯದಲ್ಲಿ ವಿಧಾನಸಭಾ ಚುನಾವಣೆ ಮುಗಿದರೂ ಪಕ್ಷಗಳ ಕಾರ್ಯಕರ್ತರ ನಡುವಿನ ಕಾದಾಟ ಮುಂದುವರೆದಿದೆ. ಜಿಲ್ಲೆಯ ಹೊಳಲ್ಕರೆ ತಾಲೂಕಿನ ಕಾಳಘಟ್ಟ ವಡ್ಡರಹಳ್ಳಿಯಲ್ಲಿ ಕಾಂಗ್ರೆಸ್‍ನ ಕೆಲವು ಕಾರ್ಯಕರ್ತರು ಬಿಜೆಪಿ ನಾಯಕನ ಮೇಲೆ ಹಲ್ಲೆ ನಡೆಸಿದ್ದಾರೆ.
ಸತ್ಯಪ್ಪ (45) ಹಲ್ಲೆಗೊಳಗಾದ ಬಿಜೆಪಿ ಮುಖಂಡ. ಅದೇ ಗ್ರಾಮದ ಮಹಂತೇಶ್, ವೆಂಕಟೇಶ್, ಲೋಹಿತ್ ನಾಗರಾಜ್ ಹಾಗೂ ಮಹಿಳೆಯರು ಸೇರಿದಂತೆ ಹಲವರು ಸತ್ಯಪ್ಪರ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ್ದಾರೆ.
ಇತ್ತೀಚೆಗೆ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಗೆ ಗ್ರಾಮದಲ್ಲಿ ಲೀಡ್ ಬರಲು ಕಾರಣವಾಗಿದ್ದ ಎಂಬ ಕಾರಣಕ್ಕೆ ಹಲ್ಲೆ ನಡೆದಿದೆ ಎಂದು ಆರೋಪ ಮಾಡಲಾಗಿದೆ. ಸಮಾಜಕಲ್ಯಾಣ ಸಚಿವ ಆಂಜನೇಯ ಸ್ಪರ್ಧಿಸಿದ್ದ ಕ್ಷೇತ್ರ ಹೊಳಲ್ಕೆರೆಯಾಗಿದ್ದು, ಹಳೇ ರಾಜಕೀಯ ವೈಷಮ್ಯ ಹಿನ್ನೆಲೆಯಲ್ಲಿ ಈ ರೀತಿ ಸಯ್ಯಪ್ಪ ಮನೆಗೆ ಥಳಿಸಿದ್ದಾರೆ.
ಇನ್ನು ಈ ಘಟನೆಯಿಂದ ಗಾಯಗೊಂಡಿದ್ದ ಸತ್ಯಪ್ಪ ಅವರನ್ನು ಹೊಳಲ್ಕೆರೆ ತಾಲೂಕು ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಗಲಾಟೆ ನಡೆದ ಗ್ರಾಮಕ್ಕೆ ಚಿಕ್ಕಜಾಜೂರು ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.