ಬೆಂಗಳೂರು: ಸಂಸದ ತೇಜಸ್ವಿಸೂರ್ಯ ಅವರಿಗೆ ಹೂ ನೀಡಲು ಬಂದ ಕಾಂಗ್ರೆಸ್ ಕಾರ್ಯಕರ್ತರನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.
ಕಲ್ಲು ಹೊಡೆಯುವುದು ಬೇಡ ನಾವು ಉಡುಗೊರೆಯಾಗಿ ಕಲ್ಲುಗಳನ್ನು ಹಾಗೂ ಹೂ ಕೊಡುತ್ತೇವೆ ಅಂತಾ ಕಾಂಗ್ರೆಸ್ ಕಾರ್ಯಕರ್ತರು ತೇಜಸ್ವಿ ಸೂರ್ಯ ನಿವಾಸದ ಬಳಿ ಶಾಂತಿಯುತವಾಗಿ ಪ್ರತಿಭಟನೆ ನಡೆಸಲು ನಿರ್ಧರಿಸಿದ್ದರು. ಇದನ್ನೂ ಓದಿ: ಆರಗ ಮನೆಗೆ ನುಗ್ಗಿದ ABVP ಕಾರ್ಯಕರ್ತರಿಗೆ ಲಾಠಿ ಏಟು
ಗಿರಿನಗರ ಸರ್ಕಲ್‍ನಿಂದ ತೇಜಸ್ವಿ ಸೂರ್ಯ ನಿವಾಸಕ್ಕೆ ರ್‍ಯಾಲಿ ನಡೆಸಲು ಪ್ಲ್ಯಾನ್ ಕೂಡ ಮಾಡಿದ್ದರು. ಹೀಗಾಗಿ ಕಾಂಗ್ರೆಸ್ ಕಾರ್ಯಕರ್ತರಿಂದ ಮುತ್ತಿಗೆ ಹಿನ್ನೆಲೆ ಇಂದು ತೇಜಸ್ವಿ ಸೂರ್ಯ ನಿವಾಸ ಬಳಿ ಭದ್ರತೆ ವಹಿಸಲಾಗಿತ್ತು. ಆದರೂ ಪೊಲೀಸ್ ಸರ್ಪಗಾವಲು ನಡುವೆಯೂ ತೇಜಸ್ವಿ ಸೂರ್ಯ ನಿವಾಸದ ಮುಂದೆ ಬಂದು, ಶಾಂತಿಯುತವಾಗಿ ಪ್ರತಿಭಟನೆ ನಡೆಸಲು ಕಾಂಗ್ರೆಸ್ ಕಾರ್ಯಕರ್ತರು ಸೇರಿದ್ದರು. ಆದರೆ ಪ್ರತಿಭಟನೆ ಆರಂಭಕ್ಕೂ ಮುನ್ನವೇ ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಇದೇ ವೇಳೆ ದ್ವಿಚಕ್ರವಾಹನದಲ್ಲಿ ಪ್ರೆಸ್ ಅಂತಾ ಬೋರ್ಡ್ ಹಾಕಿಕೊಂಡು ಬಂದು ಕಲ್ಲು ಹೊಡೆಯೋದು ಬೇಡ ಹೂ ಕೊಡುತ್ತೇವೆ ಅಂತಾ ಹೂ ತಂದಿದ್ದ ಕಾಂಗ್ರೆಸ್ ಕಾರ್ಯಕರ್ತೆಯನ್ನು ಕೂಡ ಪೊಲೀಸರು ವಶಕ್ಕೆ ಪಡೆದುಕೊಂಡರು. ಇದನ್ನೂ ಓದಿ: ಬಚ್ಚನಕೇರಿ ಗ್ರಾಮದಲ್ಲಿ ಕಿತ್ತೂರು ಅರಮನೆ ನಿರ್ಮಾಣ – ಸ್ಥಳೀಯರಿಂದ ವಿರೋಧ
ತೇಜಸ್ವಿ ಸೂರ್ಯ ಹೇಳಿದ್ದೇನು?
ಬೆಳ್ಳಾರೆಯ ಬಿಜೆಪಿ ಕಾರ್ಯಕರ್ತ ಪ್ರವೀಣ್ ಹತ್ಯೆಯ ಬಳಿಕ ರಾಜ್ಯದಲ್ಲಿ ನಮ್ಮದೇ ಸರ್ಕಾರ ಇದ್ದರೂ ರಕ್ಷಣೆ ನೀಡಲು ಸಾಧ್ಯವಾಗುತ್ತಿಲ್ಲ ಎಂದು ಹೇಳಿ ಬಿಜೆಪಿ ಕಾರ್ಯಕರ್ತರು ಈಗ ಸಾಮೂಹಿಕ ರಾಜೀನಾಮೆ ನೀಡುತ್ತಿದ್ದಾರೆ.
ಇದೇ ವಿಚಾರವಾಗಿ ರಾಜೀನಾಮೆ ವಾಪಸ್ ಪಡೆಯುವಂತೆ ಚಿಕ್ಕಮಗಳೂರಿನ ಬಿಜೆಪಿ ಜಿಲ್ಲಾ ಯುವ ಮೋರ್ಚಾ ಅಧ್ಯಕ್ಷ ಸಂದೀಪ್‍ಗೆ ತೇಜಸ್ವಿ ಸೂರ್ಯ ಕರೆ ಮಾಡಿದ್ದರು. ಸರ್ಕಾರ ನಮ್ಮದೆ ಇದೆ. ಒಂದು ವೇಳೆ ಕಾಂಗ್ರೆಸ್ ಸರ್ಕಾರದಲ್ಲಿ ಹತ್ಯೆಯಾಗಿದ್ದರೆ ಕಲ್ಲು ಹೊಡೆಯಬಹುದಿತ್ತು ಎಂದು ಸಂದೀಪ್ ಜೊತೆ ಫೋನ್‍ನಲ್ಲಿ ತೇಜಸ್ವಿ ಸೂರ್ಯ ಮಾತನಾಡಿದ್ದರು. ಈ ಆಡಿಯೋ ವೈರಲ್ ಆಗಿತ್ತು. ಈ ಹೇಳಿಕೆ ಈಗ ಭಾರೀ ಚರ್ಚೆಗೆ ಕಾರಣವಾಗಿದೆ.