-ಬಹುಮತ ಇದ್ರೂ ಜೆಡಿಎಸ್ ಗೆ ಮುಖಭಂಗ
ರಾಮನಗರ: ಬುಧವಾರ ನಡೆದ ಮಾಗಡಿ ಪುರಸಭಾ ಅಧ್ಯಕ್ಷ, ಉಪಾಧ್ಯಕ್ಷ ಚುನಾವಣೆಯಲ್ಲಿ ಕಾಂಗ್ರೆಸ್ ಮೇಲುಗೈ ಸಾಧಿಸಿದೆ. ಶಾಸಕ ಹೆಚ್.ಸಿ.ಬಾಲಕೃಷ್ಣ (H C Balakrishna) ನೇತೃತ್ವದಲ್ಲಿ ಹೈಜಾಕ್ ಆಪರೇಷನ್ ನಡೆದಿದ್ದು, ಈ ಮೂಲಕ ಕಾಂಗ್ರೆಸ್ (Congress) ಪುರಸಭೆ ಗದ್ದುಗೆ ಏರಿದೆ.
ಮಾಗಡಿ ಪುರಸಭೆ (Magadi Municipality) ಒಟ್ಟು 23 ಸದಸ್ಯ ಸ್ಥಾನವಿದ್ದು, ಜೆಡಿಎಸ್ (JDS) 12, ಬಿಜೆಪಿ(BJP) 1, ಕಾಂಗ್ರೆಸ್ (Congress) 10 ಸದಸ್ಯರ ಸಂಖ್ಯಾಬಲ ಹೊಂದಿತ್ತು. ಅಧಿಕಾರ ಹಿಡಿಯಲು ಕಾಂಗ್ರೆಸ್ ಮೂವರು ಜೆಡಿಎಸ್ ಸದಸ್ಯರ ಹೈಜಾಕ್ ಮಾಡಿಸಿ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನ ಗೆಲ್ಲಲು ತಂತ್ರಗಾರಿಕೆ ನಡೆಸಿತು. ಕಳೆದ ಮೂರು ದಿನಗಳಿಂದ ಜೆಡಿಎಸ್‌ನ ಮೂವರು ಸದಸ್ಯರು ಸಂಪರ್ಕಕ್ಕೆ ಸಿಕ್ಕಿರಲಿಲ್ಲ. ಇದನ್ನೂ ಓದಿ: ಶಾಸಕ ಮುನಿರತ್ನ ಕೇಸ್‌ನಲ್ಲಿ ದ್ವೇಷದ ರಾಜಕೀಯ ಮಾಡ್ತಿಲ್ಲ: ಸಿದ್ದರಾಮಯ್ಯ
ಬಾಲಕೃಷ್ಣ ತಂತ್ರಗಾರಿಕೆಯಿಂದ ಜೆಡಿಎಸ್ ಸದಸ್ಯರ ಆಪರೇಷನ್ ಮೂಲಕ ಕಾಂಗ್ರೆಸ್ ವಿಜಯ ಸಾಧಿಸಿದೆ. 11 ಸದಸ್ಯರ ಬೆಂಬಲದಿಂದ ಕಾಂಗ್ರೆಸ್ ಅಭ್ಯರ್ಥಿ ಗೆಲುವು ಸಾಧಿಸಿದರು. ಇದರಿಂದ ಬಹುಮತ ಇದ್ದರೂ ಜೆಡಿಎಸ್ ಅಧಿಕಾರ ಕಳೆದುಕೊಂಡಿತು. ಕಾಂಗ್ರೆಸ್ ಹೈಜಾಕ್ ಮಾಡಿದ್ದ 4 ಮಂದಿ ಜೆಡಿಎಸ್ ಸದಸ್ಯರು ಚುನಾವಣೆಯಲ್ಲಿ ತಟಸ್ಥರಾಗಿದ್ದರು. ಇದನ್ನೂ ಓದಿ: ಒಂದು ದೇಶ ಒಂದು ಚುನಾವಣೆಯಿಂದ ಕೋಟ್ಯಂತರ ಹಣ ಉಳಿತಾಯ: ಅಶೋಕ್
ಕಾಂಗ್ರೆಸ್‌ನ ರಮ್ಯ ನರಸಿಂಹಮೂರ್ತಿಗೆ ಅಧ್ಯಕ್ಷ ಸ್ಥಾನ, ರಿಯಾಜ್ ಅಹಮ್ಮದ್‌ಗೆ ಉಪಾಧ್ಯಕ್ಷ ಸ್ಥಾನ ಒಲಿದಿದೆ. ಬಾಲಕೃಷ್ಣ ನೂತನ ಅಧ್ಯಕ್ಷೆ, ಉಪಾಧ್ಯಕ್ಷರಿಗೆ ಸಿಹಿ ತಿನ್ನಿಸಿ ಶುಭಕೋರಿದರು. ಇದನ್ನೂ ಓದಿ: ಹೃದಯಾಘಾತದಿಂದ ಬಹುಭಾಷಾ ನಟಿ ಶಕುಂತಲಾ ನಿಧನ