ಕಾರವಾರ: ಉಪಚುನಾವಣೆಯಲ್ಲಿ ಮೂರು ಕ್ಷೇತ್ರಗಳಲ್ಲೂ ನಾವು ಗೆಲ್ತೀವಿ ಎಂದು ಸಚಿವ ಮಂಕಾಳ ವೈದ್ಯ (Mankala Vaidya) ಹೇಳಿದರು.
ಕಾರವಾರದಲ್ಲಿ (Karwar) ಮಾತನಾಡಿದ ಅವರು, ನಮ್ಮ ಅಭ್ಯರ್ಥಿ ಗೆಲ್ಲುವುದಕ್ಕೆ ಎಲ್ಲ ರೀತಿಯ ಸಹಾಯ ಸಹಕಾರ ಮಾಡ್ತೀವಿ. ಪಕ್ಷದ ಆದೇಶದ ಪ್ರಕಾರ ಹೇಳಿದ ಕ್ಷೇತ್ರಕ್ಕೆ ಹೋಗಿ ಪ್ರಚಾರ ಮಾಡ್ತೀನಿ. ಇದುವರೆಗೂ ಎಲ್ಲಿಗೆ ಯಾರು ಹೋಗಬೇಕು ಅಂತಾ ಹೇಳಿಲ್ಲ. ಅಭ್ಯರ್ಥಿಗಳ ಆಯ್ಕೆ ಬಳಿಕ ಪ್ರಚಾರದ ಬಗ್ಗೆ ಹೇಳ್ತಾರೆ ಎಂದು ತಿಳಿಸಿದರು.
ಉತ್ತರ ಕನ್ನಡ ಅಪರ ಜಿಲ್ಲಾಧಿಕಾರಿ ಕುರ್ಚಿ ಖಾಲಿ ವಿಚಾರವಾಗಿ ಮಾತನಾಡಿ, ಅಧಿಕಾರಿಗಳು ವರ್ಗಾವಣೆ ಆದ ಬಳಿಕ ಬರೋದು ಹೋಗುವುದು ಸಾಮಾನ್ಯ. ಈ ಹಿಂದೆ ಎಷ್ಟೋ ತಿಂಗಳುಗಳ ಕಾಲ ಕುರ್ಚಿ ಖಾಲಿ ಇತ್ತು. ಆರ್ಡರ್ ಆಗಿ 20 ದಿನ ಆದ್ರೂ ಬರದೆ ಇರೋದು ದೊಡ್ಡ ವಿಷಯ ಅಲ್ಲ. ಈ ಹಿಂದೆ ತಿಂಗಳುಗಟ್ಟಲೇ ಕುರ್ಚಿ ಖಾಲಿ ಇತ್ತು ಎಂದರು.
ಅವರು ಅಧಿಕಾರ ಸ್ವೀಕರಿಸಿಲ್ಲ ಅಂತಾ ಯಾರಿಗಾದ್ರೂ ಸಮಸ್ಯೆ ಆಗಿದೆಯಾ? ಜಿಲ್ಲಾಡಳಿತದ ಕೆಲಸಗಳು ಎಲ್ಲವೂ ಎಂದಿನಂತೆ ನಡೆಯುತ್ತಿವೆ. ವರ್ಗಾವಣೆ ಆದವರು ಆದಷ್ಟು ಬೇಗ ಹಾಜರಾಗಬಹುದು ಎಂದು ಹೇಳಿದರು.