ಬಳ್ಳಾರಿ: ರಾಜ್ಯದಲ್ಲಿ ಅಲ್ಲ ಇಡೀ ದೇಶದಲ್ಲಿ ಕಾಂಗ್ರೆಸ್ (Congress) 20 ಸ್ಥಾನ ಗೆಲ್ಲುವುದಿಲ್ಲ ಎಂದು ಮಾಜಿ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ (CT Ravi) ಹೇಳಿದರು.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡುತ್ತಾ ರಾಜ್ಯದಲ್ಲಿ 20 ಲೋಕಸಭಾ ಕ್ಷೇತ್ರದಲ್ಲಿ ಗೆಲ್ಲೋದಾಗಿ ಹೇಳಿದ್ದ ಸಿದ್ದರಾಮಯ್ಯ (Siddaramaiah) ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ಕರ್ನಾಟಕ, ತಮಿಳುನಾಡು ಮತ್ತು ಕೇರಳದಲ್ಲಿ ಕಳೆದ ಬಾರಿ ಬೋನಸ್ ಅಗಿ ಒಂದೆರಡು ಕ್ಷೇತ್ರ ಗೆದ್ದಿದ್ದರು. ಈಗ ಅದು ಕೂಡ ಗೆಲ್ಲೋದಿಲ್ಲ ಎಂದರು.
Advertisement
Advertisement
ಆರಂಭದಲ್ಲಿ ಇಂಡಿಯಾ ಒಕ್ಕೂಟ ದೊಡ್ಡ ಸೌಂಡ್ ಮಾಡಿತ್ತು. ಒಂದು ಮತ್ತು ಎರಡನೇಯ ಮೀಟಿಂಗ್ ದೊಡ್ಡ ಸೌಂಡ್ ಮಾಡಿತ್ತು. ಮೂರನೇ ಮೀಟಿಂಗ್ ಡಮಾರ್ ಅಯಿತು. ದೇಶದಲ್ಲಿ ರಾಮಮಂದಿರ ನಿರ್ಮಾಣದ ಬಳಿಕ ಸರ್ವಂ ರಾಮಮಯಂ ಆಗಿದೆ. ಲೋಕಸಭೆಯಲ್ಲಿ 400 ಸ್ಥಾನ ಗೆದ್ದೇ ಗೆಲ್ಲುತ್ತೇವೆಂದು ವಿಶ್ವಾಸ ವ್ಯಕ್ತಪಡಿಸಿದರು. ಇದನ್ನೂ ಓದಿ: ಕೇಂದ್ರ ಮಧ್ಯಂತರ ಬಜೆಟ್ನಲ್ಲಿ ಹಲವು ವರ್ಗಕ್ಕೆ ಶಕ್ತಿ ತುಂಬುವ ಕೆಲಸ: ಹೆಚ್ಡಿಕೆ ಬಣ್ಣನೆ
Advertisement
ರಾಮ ರಾಮ ರಾಮ ದೇಶದ ಎಲ್ಲೆಡೆ ರಾಮಮಯ ಹೆಚ್ಚಾಗಿದೆ. ಹೀಗಾಗಿ ಇದೀಗ ಸಿದ್ದರಾಮಯ್ಯ ಅವರಿಗೆ ಜೈಶ್ರೀರಾಂ ಅನ್ನೋ ಹಾಗೇ ಅಯಿತು. 40 ವರ್ಷದ ರಾಜಕಾರಣದಲ್ಲಿ ರಾಮಮಂದಿರ ಕಟ್ಟಬೇಕೆಂದು ಒಮ್ಮೆಯೂ ಹೇಳಿಲ್ಲ. ಸಿದ್ದರಾಮಯ್ಯ ಬಾಯಿಯಲ್ಲಿ ಜೈಶ್ರೀರಾಂ (Jai Shree Ram) ಬಂದಿದೆ. ಅಂದರೆ ಕಾಂಗ್ರೆಸ್ ನವರಿಗೆ ಗೊತ್ತಾಗಿದೆ ಬಿಜೆಪಿ ಗೆಲ್ಲುತ್ತದೆ ಎಂದು ಹೇಳಿದರು.
Advertisement
ಮಂಡ್ಯ ವಿಚಾರದಲ್ಲಿ ಮಹಾ ಅಪರಾಧವಾಗಿದೆ. ಕಾಂಗ್ರೆಸ್ ಓಲೈಕೆ ರಾಜಕೀಯ ಮಾಡುತ್ತಿದೆ. ರಾಷ್ಟ್ರಧ್ವಜ ಹಾರಿಸಲು ಬೇಡ ಅಂದವರಾರು?. ಹನುಮ ಧ್ವಜ ಇಳಿಸಿ ಹಾರಿಸಬೆಕಿತ್ತೇ?. ಅದಕ್ಕಿಂತ ದೊಡ್ಡ ಸ್ತಂಬದ ಮೇಲೆ ಎತ್ತರದ ರಾಷ್ಟ್ರದ ರಾಷ್ಟ್ರ ಹಾರಿಸಿ. ಹನುಮ ಧ್ವಜ ಮತ್ತು ರಾಷ್ಟ್ರ ಧ್ವಜ ಹಾರಿಸಬೇಕಿತ್ತು ಎಂದು ಕಿಡಿಕಾರಿದರು.
ಕುರುಬರ ಹಾಸ್ಟೆಲ್ ಮೇಲೆ ಯಾರೂ ದಾಳಿ ಮಾಡಿಲ್ಲ. ಹಾಸ್ಟೆಲ್ ಮುಂದೆ ಇರುವ ಕಾಂಗ್ರೆಸ್ ನಾಯಕರ ಫ್ಲೆಕ್ಸ್ ಹರಿದಿದ್ದಾರೆ. ಕಾಂಗ್ರೆಸ್ ಟೋಲ್ ಕಿಟ್ ರಾಜಕೀಯ ಸುಳ್ಳು ಸುದ್ದಿ ಹಬ್ಬಿಸುತ್ತಿದೆ. ಕುರುಬರು ಹಿಂದೂಗಳಲ್ಲವೆ?. ಅವರು ದೇಶ ಭಕ್ತರು. ಸಂಗೊಳ್ಳಿ ರಾಯಣ್ಣ ಯಾರು..? ಕನಕದಾಸ ಸನಾತನ ಪರಂಪರೆಯನ್ನು ಎತ್ತಿ ಹಿಡಿದಿದ್ದಾರೆ. ಕುರುಬರು ಹನುಮ ಭಕ್ತರು. ಕುರುಬರನ್ನು ಎತ್ತಿಕಟ್ಟುವ ಟೋಲ್ ಕಿಟ್ ರಾಜಕೀಯವನ್ನು ಕಾಂಗ್ರೆಸ್ ಮಾಡುತ್ತಿದೆ ಎಂದು ಕಿಡಿಕಾರಿದರು.
ಲಕ್ಷ್ಮಣ ಸವದಿ (Laxman Savadi) ಸೇರಿದಂತೆ ದೇಶ ಮುಖ್ಯ ಎನ್ನುವವರು ಬಿಜೆಪಿಗೆ ಬರಬೇಕು ಎಂದ ಅವರು ಜನಾರ್ದನ ರೆಡ್ಡಿ (Janardhan Reddy) ಬಿಜೆಪಿಗೆ ಬರುವ ವಿಚಾರ ಕಾಲವೇ ನಿರ್ಧಾರ ಮಾಡುತ್ತದೆ ಎಂದರು.