DistrictsHassanKarnatakaLatestMain Post

ಕಾಂಗ್ರೆಸ್ ಅಧಿಕಾರಕ್ಕೆ ಬರುತ್ತೆ, ಸಿದ್ದರಾಮಯ್ಯ ಸಿಎಂ ಆಗ್ತಾರೆ ಎಂದು ಮತಯಾಚಿಸಿದ ಎಂ.ಶಂಕರ್

ಹಾಸನ: ಮುಂದೆ ಕಾಂಗ್ರೆಸ್ ಸರ್ಕಾರ ಬರುತ್ತದೆ. ಸರ್ಕಾರ ಬಂದರೆ ಸಿದ್ದರಾಮಯ್ಯ ಅವರೇ ಮುಖ್ಯಮಂತ್ರಿ ಆಗುತ್ತಾರೆ ಎಂದು ಹೇಳಿ ಕಾಂಗ್ರೆಸ್ ಎಂಎಲ್‍ಸಿ ಅಭ್ಯರ್ಥಿ ಎಂ.ಶಂಕರ್ ಮತಯಾಚಿಸಿದ್ದಾರೆ.

ಇಂದು ಹಾಸನ ಜಿಲ್ಲೆಯ, ಅರಕಲಗೂಡಿಗೆ ಖಾಸಗಿ ಕಾರ್ಯಕ್ರಮದ ನಿಮಿತ್ತ ಸಿದ್ದರಾಮಯ್ಯ ಆಗಮಿಸುವವರಿದ್ದರು. ಹೀಗಾಗಿ ಹೊಳೆನರಸೀಪುರ ತಾಲೂಕಿನ, ದೊಡ್ಡಹಳ್ಳಿ ಗ್ರಾಮದಲ್ಲಿ ಸಿದ್ದರಾಮಯ್ಯ ಅವರಿಗೆ ಸ್ವಾಗತ ಕೋರಲು ಅಭಿಮಾನಿಗಳು ಕಾದು ನಿಂತಿದ್ದರು. ಸಿದ್ದರಾಮಯ್ಯ ಬರುವ ಮುಂಚೆ ಅವರನ್ನು ಕಾದುನಿಂತ ಅಭಿಮಾನಿಗಳಲ್ಲಿ ಮತಯಾಚನೆ ಮಾಡುತ್ತಿದ್ದ ಕಾಂಗ್ರೆಸ್ ಅಭ್ಯರ್ಥಿ ಎಂ.ಶಂಕರ್, ನನ್ನ ಸ್ಪರ್ಧೆಯಿಂದ ಹೊಳೆನರಸೀಪುರದವರಿಗೆ ಗೊಂದಲ ಶುರುವಾಗಿದೆ. ಸೋಲುವ ಭೀತಿಯಲ್ಲಿ ಅದು, ಇದು ಹೇಳಿಸುತ್ತಿದ್ದಾರೆ ಎಂದರು. ಇದನ್ನೂ ಓದಿ: ಒಂದೇ ಕುಟುಂಬದ ನಾಲ್ವರು ಆತ್ಮಹತ್ಯೆ

ನಾನು ಜೆಡಿಎಸ್‍ಗೆ ಬುಕ್ ಆಗಿದ್ದೇನೆ ಎಂದು ವದಂತಿ ಇದೆ ನಮ್ಮ ಸಿದ್ದರಾಮಯ್ಯ, ಡಿ.ಕೆ ಶಿವಕುಮಾರ್ ಇರುವ ಸಂದರ್ಭದಲ್ಲಿ ನಾನು ಬುಕ್ ಆಗ್ತೀನಾ? ಅದೆಲ್ಲ ಸುಳ್ಳು. ಮುಂದೆ ಸರ್ಕಾರ ಬರುತ್ತೆ. ಸರ್ಕಾರ ಬಂದರೆ ಸಿದ್ದರಾಮಯ್ಯ ಅವರೇ ಮುಖ್ಯಮಂತ್ರಿ ಆಗುತ್ತಾರೆ. ಜೆಡಿಎಸ್ ಒಂದು ಸವಕಲು ನಾಣ್ಯವಾಗಿದೆ. ಅದು ಎಲ್ಲಿಯೂ ನಡೆಯುತ್ತಿಲ್ಲ. ಹೀಗಾಗಿ ನನಗೆ ಮತ ಕೊಟ್ಟು ಆಶೀರ್ವಾದ ಮಾಡಿ ಎಂದು ಮನವಿ ಮಾಡಿಕೊಂಡರು. ಇದನ್ನೂ ಓದಿ:  ಖ್ಯಾತ ಫೋಟೋಗ್ರಾಫರ್ ತೆಗೆದಿರುವ ಸೂರ್ಯನ ಒಂದು ಫೋಟೋಗೆ 3766ರೂ.!

Leave a Reply

Your email address will not be published.

Back to top button