ಬೆಂಗಳೂರು: ಶಾಸನ ಸಭೆಗಳಲ್ಲಿ ಮಹಿಳೆಯರಿಗೆ 33% ಮೀಸಲಾತಿ ಕೊಡುವ ಬಿಲ್ ಮಂಡನೆ ಮಾಡಿರೋ ಕೇಂದ್ರ ಸರ್ಕಾರದ ನಿಲುವನ್ನ ಸ್ವಾಗತ ಮಾಡೋದಾಗಿ ಸಚಿವ ದಿನೇಶ್ ಗುಂಡೂರಾವ್ ತಿಳಿಸಿದ್ದಾರೆ.
ಮಹಿಳಾ ಮೀಸಲಾತಿ ಬಗ್ಗೆ ವಿಕಾಸಸೌಧದಲ್ಲಿ ಮಾತನಾಡಿದ ಅವರು, ಮಹಿಳಾ ಮೀಸಲಾತಿಯನ್ನ ಕಾಂಗ್ರೆಸ್ ಸ್ವಾಗತ ಮಾಡುತ್ತದೆ. ಮಹಿಳಾ ಮೀಸಲಾತಿ ತರಲು ಕಾಂಗ್ರೆಸ್ ಬಹಳ ಪ್ರಯತ್ನ ಮಾಡಿತ್ತು. ಹೀಗಾಗಿ ನಮ್ಮ ಸಂಪೂರ್ಣ ಬೆಂಬಲ ಬಿಲ್‍ಗೆ ಇದೆ ಎಂದರು.
Advertisement
Advertisement
ಪಂಚಾಯ್ತಿ ಲೆವೆಲ್ ನಲ್ಲಿ ನಾವು ಮಹಿಳೆಯರಿಗೆ 50% ಮೀಸಲಾತಿ ಜಾರಿ ಮಾಡಿದ್ವಿ. ಅಂದು ರಾಜ್ಯಸಭೆಯಲ್ಲಿ ಮಹಿಳಾ ಮೀಸಲಾತಿ ಬಿಲ್ ಪಾಸ್ ಆಗಿತ್ತು. ರಾಜಕೀಯ ಒತ್ತಡದಿಂದ ಲೋಕಸಭೆಯಲ್ಲಿ ಪಾಸ್ ಆಗಿರಲಿಲ್ಲ. ಈಗ ಮಂಡನೆ ಆಗಿರೋದು ಸ್ವಾಗತ ಅಂದರು. ಇದನ್ನೂ ಓದಿ: ಮಹಿಳಾ ಮೀಸಲಾತಿ ಮಸೂದೆ ನಮ್ಮದು: ಸೋನಿಯಾ ಗಾಂಧಿ
Advertisement
Advertisement
9 ವರ್ಷ ಆದ ಮೇಲೆ ಮೋದಿ ಅವರು ಮಸೂದೆ ಜಾರಿ ಮಾಡ್ತಿದ್ದಾರೆ. ಮೊದಲ ಅವಧಿಯಲ್ಲೆ ಮೋದಿ ಅವರು ಬಿಲ್ ಜಾರಿ ಮಾಡಬಹುದಿತ್ತು. ಪೂರ್ಣ ಬಹುಮತ ಇದ್ದರು ಇದನ್ನ ಮಾಡಿರಲಿಲ್ಲ.ಈಗ ರಾಜಕೀಯ ಲಾಭ ತೆಗೆದುಕೊಳ್ಳಲು ಮಾಡ್ತಿದ್ದಾರೆ ಅನ್ನಿಸುತ್ತದೆ.ಆದರು ನಾವು ಮಹಿಳಾ ಮೀಸಲಾತಿಯನ್ನ ಸ್ವಾಗತ ಮಾಡ್ತೀವಿ.ಕಾಂಗ್ರೆಸ್ ಕೂಡಾ ಇದಕ್ಕೆ ಬೆಂಬಲ ಕೊಡುತ್ತದೆ.ಕೇಂದ್ರದ ನಿರ್ಧಾರವನ್ನ ಸ್ವಾಗತ ಮಾಡ್ತೀವಿ ಎಂದರು.
Web Stories