ಬೆಂಗಳೂರು: ಭಾನುವಾರ ಡಿಸಿಎಂ ಡಿಕೆಶಿವಕುಮಾರ್ (DK Shivakumar) ಹೇಳಿಕೆಯನ್ನು ಸಮರ್ಥಿಸಿಕೊಂಡಿದ್ದ ರಮ್ಯಾ (Ramya) ಇಂದು ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ಇಂದು ಇನ್‌ಸ್ಟಾದಲ್ಲಿ ಪೋಸ್ಟ್ ಹಾಕಿದ ರಮ್ಯಾ ಡಿ ಕೆ ಶಿವಕುಮಾರ್ ಅವರ ಮಾತಿಗೆ ಅಡ್ಡಗೋಡೆ ಮೇಲೆ ದೀಪವಿಟ್ಟಂತೆ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
Advertisement
ಪೋಸ್ಟ್‌ನಲ್ಲಿ ಏನಿದೆ?
ಡಿ.ಕೆ. ಶಿವಕುಮಾರ್ ಅವರ ಹೇಳಿಕೆ ಸಂಪೂರ್ಣ ತಪ್ಪು ಎಂದು ಹೇಳಲಾಗದು. ನಟರಾಗಿರುವ ನಾವೆಲ್ಲರೂ ಸಾರ್ವಜನಿಕರ ಮೇಲೆ ಗಮನಾರ್ಹ ಪ್ರಭಾವವನ್ನು ಹೊಂದಿದ್ದೇವೆ ಮತ್ತು ನಾವು ನಂಬುವ ಕಾರಣಗಳಿಗೆ ನಮ್ಮ ಧ್ವನಿಯನ್ನು ಒದಗಿಸುವುದು ಅಗತ್ಯ. ಇದನ್ನೂ ಓದಿ: ಸಿನಿಮಾದವರು ಬಾಯಿಮುಚ್ಚಿಕೊಂಡು ಇರಬೇಕು – ರಶ್ಮಿಕಾ ವಿರುದ್ಧ ಕೆಂಡ ಕಾರಿದ ಗಣಿಗ ರವಿ
Advertisement
Advertisement
ಸಂವಾದ ಪ್ರಜಾಪ್ರಭುತ್ವಕ್ಕೆ ಅತ್ಯಗತ್ಯ. ಗೋಕಾಕ್ ಚಳುವಳಿಗೆ ತಮ್ಮ ಬೆಂಬಲವನ್ನು ನೀಡಿದ ಡಾ. ರಾಜಕುಮಾರ್ ಅವರೇ ಅದಕ್ಕೆ ಶ್ರೇಷ್ಠ ಉದಾಹರಣೆ. ಒಬ್ಬ ಕಲಾವಿದನು ತನ್ನ ಹೆಸರನ್ನು ಯಾವಾಗಲೂ ಒಂದು ಚಳುವಳಿಗೆ ಒದಗಿಸಬೇಕೆ, ಬೇಡವೇ ಎನ್ನುವುದು ಅವನ ಇಚ್ಚೆ. ಆದರೆ ಯಾವುದೇ ಸಂದರ್ಭದಲ್ಲೂ ಯಾರನ್ನಾದರೂ ಬೆದರಿಸಲು ಸಾಧ್ಯವಿಲ್ಲ.
Advertisement
ಚಿತ್ರರಂಗದಲ್ಲಿನ ನನ್ನ ಬಹುತೇಕ ಸ್ನೇಹಿತರು ಖಾಸಗಿ ಜೀವನದಲ್ಲಿ ತಮ್ಮ ಅಭಿಪ್ರಾಯಗಳನ್ನು ಬಹಳ ಮುಕ್ತವಾಗಿ ಹಂಚಿಕೊಳ್ಳುತ್ತಾರೆ. ಆದರೆ ಸಾರ್ವಜನಿಕವಾಗಿ ಹೇಳಲು ಹಿಂಜರಿಯುತ್ತಾರೆ. ಇದಕ್ಕೆ ಕಾರಣ ಅವರ ಮಾತುಗಳಿಗೆ ರಾತ್ರೋರಾತ್ರಿ ಟ್ರೋಲ್ ಆಗುತ್ತದೆ. ಇದು ಅಪಾಯಕರವಾಗಿ ಪರಿಣಾಮ ಬೀರುತ್ತದೆ.
ನಟರು, ವಿಶೇಷವಾಗಿ ಮಹಿಳಾ ಕಲಾವಿದರು ನೇರ ಗುರಿಯಾಗುತ್ತಿದ್ದಾರೆ. ನಮ್ಮ ನಾಯಕರು ಬೆದರಿಕೆ ಹಾಕುವುದು, ಬಲವಂತ ಮಾಡುವುದನ್ನು ನಿಲ್ಲಿಸಬೇಕು ಎಂದು ವಿನಂತಿಸುತ್ತೇನೆ. ಈ ಕಾರಣದಿಂದಲೇ ಅವರು ಮಾತನಾಡಲು ಹಿಂಜರಿಯುತ್ತಾರೆ.