ನವದೆಹಲಿ: ಎಲೆಕ್ಟ್ರಾನಿಕ್ ವೋಟಿಂಗ್ ಮಷಿನ್ ಅರ್ಥಾತ್ ಇವಿಎಂ ವಿರುದ್ಧ ಕಾಂಗ್ರೆಸ್‍ನಲ್ಲೇ ಅಸಮಾಧಾನ ಭುಗಿಲೆದ್ದಿದೆ. ಇವಿಎಂ ವಿಚಾರದಲ್ಲಿ ಕಾಂಗ್ರೆಸ್ ನಾಯಕರು ದೂರು ನೀಡಿದ್ದಕ್ಕೆ ಹಿರಿಯ ಮುಖಂಡ ವೀರಪ್ಪ ಮೊಯ್ಲಿ ಬೇಸರ ವ್ಯಕ್ತಪಡಿಸಿದ್ದಾರೆ.
ಇವಿಎಂನಲ್ಲಿ ಯಾರಿಗೆ ವೋಟು ಹಾಕಿದ್ರೂ ಅದು ಬಿಜೆಪಿಗೆ ಹೋಗುತ್ತದೆ ಎಂದು ಕಾಂಗ್ರೆಸ್ ಸೇರಿ ಹಲವು ಪಕ್ಷಗಳು ಆರೋಪಿಸಿತ್ತು. ಕಾಂಗ್ರೆಸ್ ನಾಯಕರು ಒಂದು ಹೆಜ್ಜೆ ಮುಂದೆ ಹೋಗಿ ಕೇಂದ್ರ ಚುನಾವಣಾ ಆಯೋಗಕ್ಕೂ ದೂರು ನೀಡಿದ್ದರು. ಈಗ ದೂರು ನೀಡಿದ್ದಕ್ಕೆ ಸ್ವತಃ ಹಿರಿಯ ಮುಖಂಡ ಹಾಲಿ ಸಂಸದ ವೀರಪ್ಪ ಮೊಯ್ಲಿ ಬೇಸರ ವ್ಯಕ್ತಪಡಿಸಿದ್ದಾರೆ.
Advertisement
ನಾನು ಈ ಹಿಂದೆ ಕಾನೂನು ಸಚಿವನಾಗಿ ಕಾರ್ಯನಿರ್ವಹಿಸಿದ್ದೇನೆ.ಕಾಂಗ್ರೆಸ್ ಪಕ್ಷ ಅಧಿಕಾರದಲ್ಲಿದ್ದಾಗಲೇ ಇವಿಎಂ ಜಾರಿಗೆ ತಂದಿದ್ದೇವೆ. ಅಂದೇ ಆರೋಪಗಳು ಕೇಳಿ ಬಂದಿತ್ತು. ಆದರೆ ಅದರಲ್ಲಿ ಯಾವುದೇ ಆದರಲ್ಲಿ ಲೋಪದೋಷಗಳಿಲ್ಲ. ಒಂದುವೇಳೆ ಲೋಪದೋಷಗಳಿದೆ ಅನ್ನೋದಾದ್ರೆ ಕಾಂಗ್ರೆಸ್‍ನ ಹಿರಿಯ ಮುಖಂಡರನ್ನ ಸಂಪರ್ಕಿಸಿ ನಿರ್ಧಾರ ಕೈಗೊಳ್ಳಬೇಕಿತ್ತು. ನಮ್ಮನ್ನು ಯಾರೂ ಸಂಪರ್ಕಿಸಿಲ್ಲ ಎಂದು ಅವರು ಕಿಡಿ ಕಾರಿದ್ದಾರೆ.
Advertisement
ಪಕ್ಷ ಸೋತಿರುವುದಕ್ಕೆ ಇವಿಎಂ ದೂಷಿಸಿ ಪ್ರಯೋಜನವಿಲ್ಲ. ಯಾರೆಲ್ಲ ಸೋತಿದ್ದಾರೋ ಅವರೆಲ್ಲ ಈಗ ಇವಿಎಂ ದೂಷಿಸುವುದು ಸರಿಯಲ್ಲ ಎಂದು ವೀರಪ್ಪ ಮೊಯ್ಲಿ ಹೇಳಿದರು.
Advertisement
Congress leader Veerappa Moily called for opposition leaders meeting on EVM issue pic.twitter.com/AIawsWO0xX
— ANI (@ANI_news) April 12, 2017
Advertisement
Among all countries, our electoral system is the best and for that the credit should go to the UPA and Congress: Veerappa Moily,Congress pic.twitter.com/ZiZvdAEWpb
— ANI (@ANI_news) April 12, 2017