ಹೈದರಾಬಾದ್: ತೆಲಂಗಾಣ ಮಾಜಿ ಸಿಎಂ ಕೆ. ಚಂದ್ರಶೇಖರ್ ರಾವ್ ವಿಧಾನಸಭೆಯನ್ನು ವಿಸರ್ಜಿಸಿದ್ದು, ನವೆಂಬರ್ ನಲ್ಲಿ ಚುನಾವಣೆ ನಡೆದರೆ ಒಳ್ಳೆಯದು ಅಂತಾ ಚುನಾವಣಾ ಆಯೋಗದ ಬಳಿ ಮನವಿಯನ್ನು ಮಾಡಿಕೊಂಡಿದ್ದಾರೆ. ವಿಧಾನಸಭೆ ವಿಸರ್ಜನೆ ಬಳಿಕ ಸುದ್ದಿಗೋಷ್ಠಿಯಲ್ಲಿ ಕಾಂಗ್ರೆಸ್ ವಿರುದ್ಧ ವಾಕ್ ಪ್ರಹಾರ ನಡೆಸಿದ್ದರು. ಚುನಾವಣೆಗೆ ಸಿದ್ಧತೆ ನಡೆಸಿದ್ದ ಕೆಸಿಆರ್ ಗೆ ಕಾಂಗ್ರೆಸ್ ತಿರುಗು ಬಾಣವನ್ನು ಬಿಟ್ಟಿದೆ.
ರಾಜ್ಯದಲ್ಲಿ ವಿಧಾನಸಭಾ ಚುನಾವಣೆಗೂ ಮುನ್ನ ಮತದಾರರ ಪಟ್ಟಿ ಪರಿಶೀಲನೆ ನಡೆಯಬೇಕು. ತೆಲಂಗಾಣದಲ್ಲಿ ನಕಲಿ ಮತದಾರರ ಹೆಸರುಗಳಿವೆ ಎಂದು ಹೇಳಲಾಗುತ್ತಿದ್ದು, ಮತ್ತೆ ಕೆಲವರ ಹೆಸರು ಎರಡೆರೆಡು ಕ್ಷೇತ್ರಗಳಲ್ಲಿವೆ ಎನ್ನಲಾಗುತ್ತಿದೆ. ಹೀಗಾಗಿ ಚುನಾವಣೆಯನ್ನು ಮತದಾರರ ಪಟ್ಟಿಯನ್ನು ಸೂಕ್ತವಾಗಿ ಪರಿಶೀಲಿಸಿ ಸಿದ್ಧಪಡಿಸಬೇಕೆಂದು ಕಾಂಗ್ರೆಸ್ ಚುನಾವಣಾ ಆಯೋಗದ ಕಮೀಷನರ್ ಓಪಿ ರಾವತ್ ಅವರಿಗೆ ಪತ್ರ ಬರೆದಿದೆ.
Advertisement
Advertisement
ನವೆಂಬರ್ ನಲ್ಲಿ ಮಧ್ಯ ಪ್ರದೇಶ, ರಾಜಸ್ಥಾನ ಮತ್ತು ಛತ್ತೀಸಗಢ ರಾಜ್ಯದ ಚುನಾವಣೆಗಳು ನಡೆಯಲಿದೆ. ಈ ರಾಜ್ಯಗಳ ಜೊತೆಯಲ್ಲಿ ತೆಲಂಗಾಣದ ಚುನಾವಣೆ ನಡೆಯಲಿ ಎಂಬುದು ಕೆಸಿಆರ್ ಅವರ ಇಚ್ಛೆ ಆಗಿದೆ ಎನ್ನಲಾಗುತ್ತಿದೆ.
Advertisement
ಈ ಕುರಿತು ಮಾಧ್ಯಮಗಳಿಗೆ ಪ್ರತಿಕ್ರಿಯಿಸಿರುವ ಕಾಂಗ್ರೆಸ್ ಕಾನೂನು ಘಟಕ ಮುಖ್ಯಸ್ಥ ವಿವೇಕ್ ಟಾಂಕಾ, ಮಧ್ಯ ಪ್ರದೇಶ, ಛತ್ತೀಸಗಢ, ರಾಜಸ್ಥಾನ ರಾಜ್ಯಗಳಲ್ಲಿರುವಂತೆ ತೆಲಂಗಾಣದಲ್ಲಿಯೂ ವೋಟರ್ ಲಿಸ್ಟ್ ನಲ್ಲಿ ಹಲವು ಗೊಂದಲಗಳಿವೆ. ಚುನಾವಣೆಗೂ ಮುನ್ನ ಮತದಾರರ ಪಟ್ಟಿಯಲ್ಲಿ ಲೋಪ ದೋಷಗಳು ಸರಿಯಾಗಬೇಕಿದೆ. ಹೀಗಾಗಿ ಚುನಾವಣಾ ಆಯೋಗಕ್ಕೆ ಮನವಿ ಸಲ್ಲಿಸಲಾಗಿದೆ ಎಂದು ತಿಳಿಸಿದ್ದಾರೆ.
Advertisement
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv