ನವದೆಹಲಿ: ನ್ಯಾಷನಲ್ ಹೆರಾಲ್ಡ್ ಪ್ರಕರಣದಲ್ಲಿ ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿ ಮತ್ತು ಸಂಸದ ರಾಹುಲ್ ಗಾಂಧಿಗೆ ಇಡಿ ಸಮನ್ಸ್ ನೀಡಿದ್ದು, ಈ ಸಂಬಂಧ ನಾಳೆ ದೇಶದ್ಯಾಂತ ಎಲ್ಲ ರಾಜ್ಯಗಳ ಪ್ರಮುಖ ನಗರಗಳಲ್ಲಿ ಸುದ್ದಿಗೋಷ್ಠಿ ನಡೆಸಲು ತೀರ್ಮಾನಿಸಲಾಗಿದೆ.
Advertisement
ಕೇಂದ್ರ ಸರ್ಕಾರದ ಕೈಗೊಂಬೆಯಾಗಿ ಇಡಿ ವರ್ತಿಸುತ್ತಿದೆ ಎಂದು ಆರೋಪಿಸಿ ಕಾಂಗ್ರೆಸ್ ಬೃಹತ್ ಪ್ರತಿಭಟನಾ ರ್‍ಯಾಲಿ ಹಮ್ಮಿಕೊಳ್ಳಲು ನಿರ್ಧರಿಸಿದೆ. ಜೂನ್ 13 ರಂದು ದೆಹಲಿಯಲ್ಲಿ ಈ ಪ್ರತಿಭಟನೆ ನಡೆಯಲಿದ್ದು ಎಐಸಿಸಿ ಕಚೇರಿಯಿಂದ ಇಡಿ ಕಚೇರಿವರೆಗೂ ಕಾಂಗ್ರೆಸ್ ನಾಯಕರು ಪಾದಯಾತ್ರೆ ಮಾಡಲಿದ್ದಾರೆ. ಇದನ್ನೂ ಓದಿ: ಯುವ ಬ್ಯಾಟ್ಸ್‌ಮಾನ್‌ಗಳು, ಆಲ್‍ರೌಂಡರ್‌ಗಳ ನಾಯಕತ್ವಕ್ಕೆ ಚಪ್ಪಾಳೆ ಹೊಡೆದ ದ್ರಾವಿಡ್
Advertisement
Congress will hold press conferences across the country tomorrow, 12th June, on the issue of summoning of Sonia Gandhi and Rahul Gandhi by ED in the National Herald case.
(File photos) pic.twitter.com/tAv6z4Qa8o
— ANI (@ANI) June 11, 2022
Advertisement
ಮೂಲಗಳ ಪ್ರಕಾರ ಜೂನ್ 13ರ ಕಾರ್ಯಕ್ರಮದ ಬಗ್ಗೆ ನಾಳಿನ ಸುದ್ದಿಗೋಷ್ಠಿಯಲ್ಲಿ ರಾಜ್ಯ ಕಾಂಗ್ರೆಸ್ ನಾಯಕರು ಸುದ್ದಿಗೋಷ್ಠಿ ನಡೆಸಲಿದ್ದು, ಕೇಂದ್ರ ಸರ್ಕಾರ ಮತ್ತು ಜಾರಿ ನಿರ್ದೇಶನಾಲಯ ವಿರುದ್ಧ ವಾಗ್ದಾಳಿ ನಡೆಸಲಿದ್ದಾರೆ ಎನ್ನಲಾಗಿದೆ. ಇದನ್ನೂ ಓದಿ: ಬಿಜೆಪಿ ‘ಎ’ ಟೀಂ ಅಂತ ಎಲ್ಲರೂ ಒಪ್ಪಿಕೊಂಡಾಗಿದೆ, ಬಿ ಟೀಂ ಯಾವುದಾದರೇನು: ಬೊಮ್ಮಾಯಿ
Advertisement
ನ್ಯಾಷನಲ್ ಹೆರಾಲ್ಡ್ ಪ್ರಕರಣಕ್ಕೆ ಸಂಬಂಧಿಸಿದಂತೆ ಇಡಿ ಸೋನಿಯಾಗಾಂಧಿ, ರಾಹುಲ್ ಗಾಂಧಿಗೆ ವಿಚಾರಣೆ ಆಗಮಿಸಲು ಸೂಚನೆ ನೀಡಿತ್ತು. ಕೊರೊನಾ ಸೋಂಕು ತಗುಲಿರುವ ಕಾರಣ ಸೋನಿಯಾಗಾಂಧಿ ಮೂರು ವಾರಗಳ ವಿನಾಯಿತಿ ಕೇಳಿದರೇ, ರಾಹುಲ್ ಗಾಂಧಿ ವಿದೇಶ ಪ್ರವಾಸದ ಹಿನ್ನೆಲೆ ಜೂನ್ 18 ರಂದು ವಿಚಾರಣೆ ಹಾಜರಾಗಲು ಅನುಮತಿ ಕೇಳಿದ್ದಾರೆ.