ಉಡುಪಿ: ಜಿಲ್ಲೆಯ ಕಾರ್ಕಳ (Karkala) ಕ್ಷೇತ್ರದ ಕಾಂಗ್ರೆಸ್ (Congress) ಟಿಕೆಟ್ ಹಿಂದುತ್ವವಾದಿ ಗುತ್ತಿಗೆದಾರ ಮುನಿಯಾಲು ಉದಯ್ ಕುಮಾರ್ ಶೆಟ್ಟಿ (Muniyalu Uday Kumar Shetty) ಪಾಲಾಗಿದೆ. ಮಾಜಿ ಮುಖ್ಯಮಂತ್ರಿ ವೀರಪ್ಪ ಮೊಯ್ಲಿ (Veerappa Moily) ಜೊತೆ ತೀವ್ರ ಸೆಣಸಾಟ ನಡೆಸಿ ಕಾರ್ಕಳದಲ್ಲಿ ನಾಲ್ವರು ಟಿಕೆಟ್‌ಗೆ ಅರ್ಜಿ ಸಲ್ಲಿಸಿದ್ದರೂ ಉದಯ್ ಶೆಟ್ಟಿ ಬಿ ಫಾರಂ ಪಡೆದಿದ್ದಾರೆ.
ಅರ್ಜಿ ಸಲ್ಲಿಸಿರುವ ನಾಲ್ವರಿಗೆ ಕೈ ಟಿಕೆಟ್ ಸಿಕ್ಕಿಲ್ಲ. ಬದಲಾಗಿ ಉದ್ಯಮಿ ಗುತ್ತಿಗೆದಾರ ಮುನಿಯಾಲು ಉದಯ್ ಕುಮಾರ್ ಶೆಟ್ಟಿಗೆ ಬಿ ಫಾರಂ ಸಿಕ್ಕಿದೆ. ಮಂಜುನಾಥ್ ಪೂಜಾರಿ (ಮೊಯ್ಲಿ ಅಭ್ಯರ್ಥಿ), ಸುರೇಂದ್ರ ಶೆಟ್ಟಿ, ಡಿಆರ್ ರಾಜು, ನೀರೆ ಕೃಷ್ಣ ಶೆಟ್ಟಿ ಕಾರ್ಕಳ ಟಿಕೆಟ್ ಆಕಾಂಕ್ಷಿಗಳಾಗಿದ್ದರು.
Advertisement
Advertisement
2018ರ ಚುನಾವಣೆಯಲ್ಲಿ ಆಕಾಂಕ್ಷಿಯಾಗಿದ್ದ ಉದಯ್ ಶೆಟ್ಟಿ ಟಿಕೆಟ್ ಕೈ ತಪ್ಪಿದಾಗ ಬಹಿರಂಗವಾಗಿ ವೀರಪ್ಪ ಮೊಯ್ಲಿ ವಿರುದ್ಧ ಸಿಡಿದೆದ್ದಿದ್ದರು. ವೀರಪ್ಪ ಮೊಯ್ಲಿ ಮತ್ತು ಮಾಜಿ ಶಾಸಕ ಗೋಪಾಲ ಭಂಡಾರಿಯ ಶವಯಾತ್ರೆ ಮಾಡಿ ಮೊಯ್ಲಿ ಕೆಂಗಣ್ಣಿಗೆ ಗುರಿಯಾಗಿದ್ದರು. ಆನಂತರ ಉದಯ್ ಶೆಟ್ಟಿ ಮತ್ತು ವೀರಪ್ಪ ಮೊಯ್ಲಿಯ ನಡುವೆ ಭಾರೀ ಅಂತರ ಬೆಳೆದಿತ್ತು. ಹುಟ್ಟೂರಲ್ಲಿ ಗೌರವಕ್ಕೆ ಧಕ್ಕೆ ಆಗಿದೆ ಎಂದು ಉದಯ್ ಶೆಟ್ಟಿ ಬಣದ ವಿರುದ್ಧ ಮೊಯ್ಲಿ ಮುನಿಸಿಕೊಂಡಿದ್ದರು.
Advertisement
ರಾಜ್ಯದ್ಯಂತ 40% ಕಮಿಷನ್ ಆರೋಪವನ್ನು ಕಾಂಗ್ರೆಸ್ ಮಾಡುತ್ತಿರುವಾಗಲೇ ಮುನಿಯಾಲು ಉಡುಪಿಯಲ್ಲಿ ಉದಯ್ ಶೆಟ್ಟಿ ಕಮಿಷನ್ ಎಲ್ಲ ಇಲ್ಲ ಎಂದು ಹೇಳುವ ಮೂಲಕ ಕಾಂಗ್ರೆಸ್ ಪಕ್ಷಕ್ಕೆ ಇರುಸುಮುರುಸು ತಂದಿದ್ದರು. ಉದಯ್ ಶೆಟ್ಟಿ ಹೆಸರು ಫೈನಲ್ ಆಗುತ್ತಿದ್ದಂತೆ ವೀರಪ್ಪ ಮೊಯ್ಲಿ ಪುತ್ರ ಹರ್ಷ ಮೊಯ್ಲಿ ಟ್ವೀಟ್ ಮಾಡಿದ್ದು, ರಾಜ್ಯಾದ್ಯಂತ ನಡೆಸುತ್ತಿರುವ ಅಭಿಯಾನಕ್ಕೆ ಇದು ಹಿನ್ನಡೆ ಅಲ್ಲವೇ ಎಂದು ಪ್ರಶ್ನೆ ಮಾಡಿದ್ದಾರೆ. ಇದನ್ನೂ ಓದಿ: ಸಿದ್ದುಗೆ ಕೋಲಾರ ಟಿಕೆಟ್ ಮಿಸ್ – ವರುಣಾ ಒಂದೇ ಫಿಕ್ಸ್
Advertisement
ಹಿಂದು-ಹಿಂದು-ಹಿಂದು ಸ್ಪರ್ಧೆ:
ಹಿಂದುತ್ವ ಅಭಿವೃದ್ಧಿ ಎನ್ನುವ ಇಂಧನ ಕನ್ನಡ ಸಂಸ್ಕೃತಿ ಸಚಿವ ಸುನಿಲ್ ಕುಮಾರ್, ನನ್ನದು ಅಸಲಿ ಹಿಂದುತ್ವ ಎನ್ನುವ ಪ್ರಮೋದ್ ಮುತಾಲಿಕ್. ಕಳೆದ ಎರಡು ದಶಕಗಳಿಂದ ಉದಯ್ ಶೆಟ್ಟಿ ಮುನಿಯಾಲು ಕಾರ್ಕಳ ತಾಲೂಕಿನಾದ್ಯಂತ ಕೊಡುಗೈ ದಾನಿ ಎಂದು ಕರೆಸಿಕೊಂಡಿದ್ದಾರೆ. ಸಾಫ್ಟ್ ಹಿಂದುತ್ವದ ಮೂಲಕ ಯಾರದ್ದೂ ವಿರೋಧ ಕಟ್ಟಿಕೊಂಡಿಲ್ಲ. ಜಾತಿ ಸಮೀಕರಣದ ಲೆಕ್ಕಾಚಾರ ಮತ್ತು ಕಳೆದ ವರ್ಷ ಟಿಕೆಟ್ ಸಿಗದ ಸಹಾನುಭೂತಿಯ ಮತಗಳು ಪ್ರಮುಖವಾಗಿರುವುದರಿಂದ ಸುನಿಲ್ ಕುಮಾರ್ ಮತ್ತು ಉದಯ್ ಶೆಟ್ಟಿ ನಡುವೆ ಜೋರು ಜಟಾಪಟಿ ನಡೆಯಲಿದೆ. ಪ್ರಮೋದ್ ಮುತಾಲಿಕ್ ಎಷ್ಟು ಮತ ಪಡೆಯುತ್ತಾರೆ ಎಂಬುದು ಕೂಡಾ ಕುತೂಹಲಕಾರಿಯಾಗಿದೆ.
ನನ್ನದೂ ಹಿಂದುತ್ವ, ನಾನು ನಿಜವಾದ ಹಿಂದು ಎಂದು ಹೇಳುವ ಉದಯ್ ಶೆಟ್ಟಿ ನಡುವೆ ಕಾರ್ಕಳದಲ್ಲಿ ಈ ಬಾರಿ ಚುನಾವಣೆ ನಡೆಯಲಿದೆ. ಇದನ್ನೂ ಓದಿ: ಬಿಜೆಪಿಯವರಿಂದಲೇ ಕಾಂಗ್ರೆಸ್ ಸೇರುವ ವಾತಾವರಣ ನಿರ್ಮಾಣ: ಲಕ್ಷ್ಮಣ ಸವದಿ