ಬೆಂಗಳೂರು: ಮುಂದಿನ ಚುನಾವಣೆಗೆ ಕಾಂಗ್ರೆಸ್ ರಣತಂತ್ರ ರೂಪಿಸಿದೆ. ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಹುಟ್ಟುಹಬ್ಬದ ಪ್ರಯುಕ್ತ ಸಿದ್ದರಾಮೋತ್ಸವ ಕಾರ್ಯಕ್ರಮ ಆಯೋಜನೆ ಮಾಡಲಾಗಿತ್ತು. ಕಾರ್ಯಕ್ರಮ ಭಾರೀ ಜನಸ್ತೋಮದಿಂದ ಕೂಡಿತ್ತು. ಈ ಹಿನ್ನೆಲೆಯಲ್ಲಿ ಇದೀಕ್ಷ ಕಾಂಗ್ರೆಸ್ ಪಕ್ಷೋತ್ಸವ ಮಾಡಲು ತೀರ್ಮಾನಿಸಿದೆ.
Advertisement
ಆಗಸ್ಟ್ 15ರಂದು ಬೆಂಗಳೂರಿನಲ್ಲಿ ನಡೆಯಬೇಕಿರುವ ಪಾದಯಾತ್ರೆ ಈಗ ಕೇವಲ ಫ್ರೀಡಂಮಾರ್ಚ್ ಆಗಿಲ್ಲ. ಆಗಸ್ಟ್ 15ರ ನಡಿಗೆ ಪಕ್ಷೋತ್ಸವ ಆಗಲಿದೆ. ಸಿದ್ದರಾಮೋತ್ಸವದ ಮಾದರಿಯಲ್ಲಿಯೇ ಅದ್ದೂರಿ ಕಾರ್ಯಕ್ರಮ ಮಾಡಲು ಡಿಕೆಶಿ ಸಿದ್ದತೆ ಆರಂಭಿಸಿದ್ದಾರೆ ಎಂಬ ಮಾಹಿತಿ ಪಬ್ಲಿಕ್ ಟಿವಿಗೆ ಲಭಿಸಿದೆ. ಇದನ್ನೂ ಓದಿ: ಸಿದ್ದರಾಮಯ್ಯ ನನ್ನ ಹಿರಿಯಣ್ಣನಂತೆ- ಮಾಜಿ ಸಿಎಂ ಗುಣಗಾನ ಮಾಡಿದ ಡಿಕೆ ಶಿವಕುಮಾರ್
Advertisement
Advertisement
ಒಂದು ಲಕ್ಷ ಜನ, 6 ಕಿಮೀ ನಡಿಗೆ, ವೇದಿಕೆ ಮೇಲೆ ಪಕ್ಷದ ಪರವಾದ ಅದ್ದೂರಿ ಆಚರಣೆಗೆ ಪ್ಲಾನ್ ಮಾಡಲಾಗುತ್ತಿದೆ. ಪ್ರಿಯಾಂಕಾ ಗಾಂಧಿ ಅಥವಾ ರಾಹುಲ್ ಗಾಂಧಿ ಇಬ್ಬರಲ್ಲಿ ಒಬ್ಬರು ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ. ವ್ಯಕ್ತಿಗಿಂತ ಪಕ್ಷ ಮುಖ್ಯ. ಪಕ್ಷವೇ ಎಲ್ಲಾ. ಪಕ್ಷದಿಂದಲೇ ಎಲ್ಲಾ ಎಂಬಂತೆ ಕಾರ್ಯಕ್ರಮ ಆಯೋಜನೆಗೆ ಪ್ಲಾನ್ ಮಾಡುತ್ತಿದ್ದಾರೆ ಎನ್ನಲಾಗುತ್ತಿದೆ.
Advertisement
ಫ್ರೀಡಂ ಮಾರ್ಚ್‍ನಲ್ಲೂ ಟಿಕ್ ಫಾರ್ ಟ್ಯಾಕ್. ಒಗ್ಗಟ್ಟಿನ ಮಂತ್ರದ ನಡುವೆಯೂ ಸಿದ್ಸರಾಮೋತ್ಸವದ ಮಾದರಿಯಲ್ಲೆ ಅದಕ್ಕಿಂತ ಅದ್ದೂರಿಯಾಗಿ ಪಕ್ಷಕ್ಕಾಗಿ ಮಾಡುವ ಕಾರ್ಯಕ್ರಮ ಎಂದು ಬಿಂಬಿಸುವುದು ಡಿಕೆಶಿ ಲೆಕ್ಕಾಚಾರ ಎನ್ನಲಾಗುತ್ತಿದೆ. ಇದನ್ನೂ ಓದಿ: ಪಕ್ಷ ಗೆದ್ದ ಬಳಿಕವೇ ಮುಖ್ಯಮಂತ್ರಿ ವಿಚಾರ – ಮುಂದಿನ ಸಿಎಂ ಚರ್ಚೆಗೆ ರಾಹುಲ್ ಗಾಂಧಿ ಬ್ರೇಕ್