ಬೆಳಗಾವಿ: ದೇಶದಲ್ಲಿ ಬಿಜೆಪಿಯರು ಹಿಂದುತ್ವವನ್ನು ಲೀಸ್‍ಗೆ ಪಡೆದಿದ್ದಾರಾ ಎಂದು ಸಂಸದ ಪ್ರತಾಪ್ ಸಿಂಹಗೆ ಯೂಥ್ ಕಾಂಗ್ರೆಸ್ ರಾಜ್ಯಾಧ್ಯಕ್ಷ ಮೊಹಮ್ಮದ್ ನಲಪಾಡ್ ತಿರುಗೇಟು ನೀಡಿದ್ದಾರೆ.
ನಗರದಲ್ಲಿ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು, ಮೂರ್ಖ ಜನ ವಿರೋಧಿ ಬಿಜೆಪಿ ಸರ್ಕಾರಕ್ಕೆ 40% ಕಮಿಷನ್ ಬಿಟ್ಟು ಬೇರೆ ಎನೂ ಕಾಣಿಸುತ್ತಿಲ್ಲ. ಕಳೆದ ಏಳು ವರ್ಷದಿಂದ ಪೆಟ್ರೋಲ್, ಡೀಸೆಲ್ ದರ ಡಬಲ್ ಆಗಿದೆ. ಸಾಮಾನ್ಯ ಒಬ್ಬ ವ್ಯಕ್ತಿ ಮನೆಯಿಂದ ಆಚೆ ಬರಲು ಭಯ ಪಡುವ ಸ್ಥಿತಿ ನಿರ್ಮಾಣವಾಗಿದೆ ಎಂದರು.
ಬಿಜೆಪಿಯ 40% ಪರ್ಸೆಂಟ್ ಸರ್ಕಾರ ಒಬ್ಬ ಯುವಕನ ಜೀವವನ್ನ ತೆಗೆದಿದೆ. ಸ್ವಾಮೀಜಿಗಳಿಂದ 30 ಪರ್ಸೆಂಟ್ ಕಮಿಷನ್ ಪಡೆಯುತ್ತಿದೆ. ಇವರಿಗೆ ನಾಚಿಕೆಯಾಗಬೇಕು. ಇಂತಹ ಸರ್ಕಾರವನ್ನು ಕಿತ್ತು ಬಿಸಾಕಲು ಯುವ ಕಾಂಗ್ರೆಸ್ ಮುಂದೆ ಬಂದಿದೆ. ಸರ್ಕಾರದ ವಿರುದ್ಧ ಹೋರಾಟ ಇನ್ನೂ ಮುಂದುವರಿಯುತ್ತದೆ ಎಂದು ನಲಪಾಡ್ ಹೇಳಿದರು. ಇದನ್ನೂ ಓದಿ: ಸರ್ಕಾರದ ವೈಫಲ್ಯ, ಭ್ರಷ್ಟಾಚಾರ ಮುಚ್ಚಿಕೊಳ್ಳಲು ಬಿಜೆಪಿಯಿಂದ ಜಾತಿ ರಾಜಕಾರಣ: ನಲಪಾಡ್
ಪ್ರತಾಪ್ ಸಿಂಹ ಅವರು ಹೇಳ್ತಾರೆ ಕಾಂಗ್ರೆಸ್‍ನಲ್ಲಿ ಬಣ ಇದೆ ಅಂತಾ. ಆದರೆ ಕಾಂಗ್ರೆಸ್ ನಲ್ಲಿ ಇರೋದು ಒಂದೇ ಬಣ. ಅದು ಕಾಂಗ್ರೆಸ್ ಬಣ ಎಂದರು. ಡಿ.ಕೆ ಶಿವಕುಮಾರ್, ಸಿದ್ದರಾಮಯ್ಯ ಅವರು ಯಾವ ಧರ್ಮಕ್ಕೆ ಸೇರಿದವರು. ನಾವೇನೂ ಇಂತಹದ್ದೇ ಜಾತಿಯಲ್ಲಿ ಹುಟ್ಟಬೇಕು ಅಂತಾ ಅರ್ಜಿ ಹಾಕಿ ಹುಟ್ಟಿದ್ದೇವಾ..? ಬಿಜೆಪಿಯರು ಹಿಂದುತ್ವವನ್ನು ಲೀಸ್‍ಗೆ ಪಡೆದಿದ್ದಾರಾ ಎಂದು ಸಂಸದ ಪ್ರತಾಪ್ ಸಿಂಹಗೆ ನಲಪಾಡ್ ತಿರುಗೇಟು ನೀಡಿದ್ದಾರೆ.