– ಆತ ಎಂಪಿ ಆದ್ರೆ ‘ಹಿ ಈಸ್ ಡೇಂಜರಸ್’ ಎಂದ ಸೋಮ್ ದತ್ತಾ!
– ನಾನು ಗರ್ಲ್ ಫ್ರೆಂಡ್ ಅಲ್ಲ, ಭಾವಿ ಪತ್ನಿಯಾಗಿದ್ದೆ!
ಬೆಂಗಳೂರು: ಕಾಂಗ್ರೆಸ್ ವಕ್ತಾರ ಬ್ರಿಜೇಶ್ ಕಾಳಪ್ಪ ತಮ್ಮ ಸುದ್ದಿಗೋಷ್ಠಿ ನಡೆಸಿ ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ತೇಜಸ್ವಿ ಸೂರ್ಯ ವಿರುದ್ಧದ ಸ್ಫೋಟಕ ಆಡಿಯೋ ರಿಲೀಸ್ ಮಾಡಿದ್ದಾರೆ. ಡಾ. ಸೋಮ್ ದತ್ತಾ ತಮ್ಮ ಪರಿಚಿತ ವ್ಯಕ್ತಿ ಜೊತೆ 14 ನಿಮಿಷಗಳ ಕಾಲ ಮಾತನಾಡಿರುವ ಆಡಿಯೋ ಕ್ಲಿಪ್ ಅನ್ನು ಕಾಂಗ್ರೆಸ್ ಬಿಡುಗಡೆಮಾಡಿದೆ.
ತೇಜಸ್ವಿ ಸೂರ್ಯ ವಿರುದ್ಧ ಲೈಂಗಿಕ ಕಿರುಕುಳದ ಆರೋಪಕ್ಕೆ ಸಂಬಂಧಿಸಿದಂತೆ ಕೋರಮಂಗಲ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ತೇಜಸ್ವಿ ಸೂರ್ಯ ತಮ್ಮ ಅಫಿಡವಿಟ್ ನಲ್ಲಿ ಪ್ರಕರಣ ಬಗ್ಗೆ ಹೇಳಿಕೊಂಡಿಲ್ಲ. ಈ ಎಲ್ಲ ವಿಚಾರಗಳು ಸಂಸದ ಪ್ರತಾಪ್ ಸಿಂಹ, ಬಿಜೆಪಿ ಮತ್ತು ಆರ್‌ಎಸ್‌ಎಸ್ ನಾಯಕರಿಗೆ ಗೊತ್ತಿದ್ರೂ ಸುಮ್ಮನಿದ್ದಾರೆ. ತೇಜಸ್ವಿ ಸೂರ್ಯ ಮೂರು ಮಹಿಳೆಯರಿಗೆ ಮೋಸ ಮಾಡಿದ್ದಾನೆ ಎಂಬುವುದು ಆಡಿಯೋ ಕ್ಲಿಪ್ ಹೇಳುತ್ತದೆ. ಸೋಮ್ ದತ್ತಾಗೆ ಬಿಜೆಪಿ ನಾಯಕರು ಕರೆ ಮಾಡಿ ಧಮ್ಕಿ ಹಾಕಿದ್ದು, ಹೀಗಾಗಿ ಮಾಧ್ಯಮಗಳ ಮುಂದೆ ಬರಲು ಸಾಧ್ಯ ಆಗುತ್ತಿಲ್ಲ ಎಂದು ಬ್ರಿಜೇಶ್ ಕಾಳಪ್ಪ ಆರೋಪಿಸಿದರು.
Advertisement
Advertisement
ಆಡಿಯೋದಲ್ಲಿ ಏನಿದೆ?
ನಾನು ಮೊದಲಿನಿಂದಲೂ ಆ ಪಕ್ಷದಲ್ಲಿ ಕೆಲಸ ಮಾಡಿದ್ದೇನೆ. ಪಕ್ಷದ ಹಲವು ಮುಖಂಡರು ಸೇರಿದಂತೆ ತೇಜಸ್ವಿನಿ ಅನಂತ್‍ಕುಮಾರ್ ಅವರಿಗೂ ನಮ್ಮಿಬ್ಬರ ವಿಷಯ ಗೊತ್ತಿದೆ. ಎಂಪಿ ಟಿಕೆಟ್ ಸಿಕ್ಕ ಬಳಿಕ ಆತ ಪಾಪ್ಯೂಲರ್ ಆಗಿದ್ದು, ಅವನಿಗಿಂತ ಹೆಚ್ಚು ಗೌರವವನ್ನು ನಾನು ಸಮಾಜದಲ್ಲಿ ಹೊಂದಿದ್ದೇನೆ. ಆತನಿಂದಾಗಿ ನಾನೇಕೆ ನನ್ನ ಗೌರವವನ್ನು ಹಾಳು ಮಾಡಿಕೊಳ್ಳಲಿ. ಶಾಸಕರೊಬ್ಬರು ಕರೆ ಮಾಡಿ ನನ್ನ ಬಳಿ ಎಲ್ಲ ದಾಖಲೆಗಳಿವೆ. ಕೋರಮಂಗಲದಲ್ಲಿ ನಾನು ದೂರು ದಾಖಲಿಸಿರುವ ಎಫ್‍ಐಆರ್, ವಾಟ್ಸಪ್ ಮೆಸೇಜ್ ಗಳಿವೆ ಎಂದರು.
Advertisement
ಆ ಶಾಸಕರ ಪರವಾಗಿ ಕ್ಯಾಂಪೇನ್ ಮಾಡಿದ್ದು, ನನ್ನನ್ನು ತಂಗಿಯಂತೆ ಕಾಣುತ್ತಾರೆ. ಶಾಸಕರೊಂದಿಗೆ ಇನ್ನಿಬ್ಬರು ಹುಡುಗಿಯರು ಸಹ ಮಾತನಾಡಿದ್ದಾರೆ. ಫೋನಿನಲ್ಲಿ ಇಬ್ಬರು ಹುಡುಗಿಯರ ಹೆಸರು ಹೇಳಲಾರೆ. ಒಬ್ಬ ಹುಡುಗಿ ಮ್ಯಾಗಜೀನ್ ನಲ್ಲಿ ಕೆಲಸ ಮಾಡಿಕೊಂಡಿದ್ದಳು. ಇದೀಗ ಆಕೆ ಮದುವೆಯಾಗಿ ಮುಂಬೈನಲ್ಲಿ ಸೆಟಲ್ ಆಗಿದ್ದಾಳೆ.
Advertisement
ನನ್ನ ಹಣದಿಂದ ಬದುಕಿದ್ದ: ಆತ ಇಷ್ಟು ದಿನ ನನ್ನ ಹಣದಿಂದಲೇ ಬದುಕಿದ್ದ. ಬೇಕಾದ್ರೆ ಆತನ ಬ್ಯಾಂಕ್ ಅಕೌಂಟ್ ಚೆಕ್ ಮಾಡಿದ್ರೆ ನನ್ನಿಂದ ಎಷ್ಟು ಹಣ ಪಡೆದಿದ್ದಾನೆ ಎನ್ನುವುದು ಗೊತ್ತಾಗಲಿದೆ. ಹಣಕ್ಕಾಗಿ ನಾನು ಬ್ಲ್ಯಾಕ್ ಮೇಲ್ ಮಾಡುತ್ತೇನೆ ಎಂದು ಹೇಳುತ್ತಿರೋದು ಶುದ್ಧ ಸುಳ್ಳು. ನನ್ನ ಎಷ್ಟು ಶ್ರೀಮಂತಳು ಎಂಬುವುದು ಎಲ್ಲರಿಗೂ ಗೊತ್ತಿದೆ. ನನ್ನ ಕಂಪನಿಗಳು ಮುನ್ನೂರು ಮಿಲಿಯನ್ ಡಾಲರ್ ಮೌಲ್ಯವನ್ನು ಹೊಂದಿವೆ. ನಾನೇಕೆ ಹಣಕ್ಕಾಗಿ ಬೇರೆಯವರನ್ನ ಬ್ಲ್ಯಾಕ್ ಮೇಲ್ ಮಾಡಬೇಕು. ಕೋರಮಂಗಲ ಪೊಲೀಸ್ ಠಾಣೆಗೆ ತೆರಳಿದರೆ ನಿಮಗೆಲ್ಲ ಸಾಕ್ಷಿಗಳು ದೊರೆಯುತ್ತವೆ. ಈಗಾಗಲೇ ಕೆಲವು ಮಾಧ್ಯಮದವರಿಗೆ ಎಫ್‍ಐಆರ್ ಪ್ರತಿಯನ್ನು ತೆಗೆದುಕೊಂಡು ನನ್ನನ್ನು ಸಂಪರ್ಕಿಸಿದ್ದಾರೆ.
ಟ್ವೀಟ್ ಡಿಲೀಟ್ ಮಾಡಿದ್ಯಾಕೆ?
ಕಳೆದ ವರ್ಷ ಜೂನ್ ಅಥವಾ ಜುಲೈ ತಿಂಗಳಲ್ಲಿ ನಾನು ದೂರು ದಾಖಲಿಸಿದ್ದೇನೆ. ದೀಪಾವಳಿ ಹಬ್ಬದಂದು ನನ್ನ ಮನೆಗೆ ನುಗ್ಗಿ ಗಲಾಟೆ ಮಾಡಿದ್ದಾಗ ಪೊಲೀಸರು ಬಂದು ಆತನನ್ನು ಕರೆದುಕೊಂಡು ಹೋದರು. ಮಾರ್ಚ್ 12ನವರೆಗೂ ಆತನೊಂದಿಗೆ ಸಂಪರ್ಕದಲ್ಲಿದ್ದೆ. ನಾನು ಮಹಿಳಾ ಸಬಲೀಕರಣದ ಬಗ್ಗೆ ಮಾತನಾಡುತ್ತೇನೆ. ನನ್ನ ಮೇಲೆ ಈ ರೀತಿಯ ದೌರ್ಜನ್ಯ ನಡೆದಾಗ ನಾನು ಸಮ್ಮನೆ ಕುಳಿತರೆ ಹೇಗೆ ಎಂದು ಟ್ವೀಟ್ ಮಾಡಿದೆ. ಟ್ವೀಟ್ ಬಳಿಕ ನನ್ನ ಕುಟುಂಬದವರಿಗೆ ಅನಗತ್ಯವಾಗಿ ತೊಂದರೆ ಕೊಡುವುದು ಆರಂಭವಾಯಿತು. ನನ್ನ ಕುಟುಂಬದವರ ರಕ್ಷಣೆಗಾಗಿ ಟ್ವೀಟ್ ಡಿಲೀಟ್ ಮಾಡಿದೆ.
ಆತನ ವಿರುದ್ಧ ಟ್ವೀಟ್ ಮಾಡಿ ಪ್ರಸಿದ್ಧಿ ಪಡೆಯಬೇಕೆಂಬ ಹುಚ್ಚು ಆಸೆ ನನಗಿಲ್ಲ. ನಾನು ಈಗಾಗಲೇ ಉದ್ಯಮದಲ್ಲಿ ಹೆಸರು ಮಾಡಿದ್ದೇನೆ. ಎಂಪಿ ಟಿಕೆಟ್ ಸಿಕ್ಕ ಬಳಿಕ ಆತ ನಾಲ್ಕು ಜನರಿಗೆ ಗೊತ್ತಾಗಿದ್ದಾನೆ. ಇ-ಮೇಲ್ ಮೂಲಕ ಸಹ ಆತ ನನಗೆ ಬೆದರಿಕೆ ಹಾಕುತ್ತಿದ್ದ. ಮೇಲ್ ನಲ್ಲಿಯೂ ನನಗೆ ತೊಂದರೆ ನೀಡಿರುವುದನ್ನು ಎಲ್ಲವನ್ನು ಒಪ್ಪಿಕೊಂಡಿದ್ದಾನೆ. ನಾನು ಇದೆಲ್ಲದರಿಂದ ಹೊರಬರಬೇಕಿತ್ತು. ನಾನು ಅವನನ್ನು ಬಹು ಹಿಂದೆಯೇ ತಡೆಯಬೇಕಿತ್ತು. ಒಬ್ಬ ತಪ್ಪು ಮನುಷ್ಯನಿಂದಾಗಿ ಅವರ ಇಡೀ ಕುಟುಂಬ ತೊಂದರೆಯನ್ನು ಅನುಭವಿಸಬಾರದು. ನನ್ನ ಕುಟುಂಬವು ಸಹ ತುಂಬಾ ಗೌರವಸ್ಥ ಕುಟುಂಬ. ಇಂದಿಗೂ ನಾನು ಅವನ ಕುಟುಂಬಸ್ಥರ ಬಗ್ಗೆ ಅಪಾರ ಗೌರವವನ್ನು ಹೊಂದಿದ್ದೇನೆ.
ಪ್ರತಾಪ್ ಸಿಂಹಗೆ ಗೊತ್ತಿತ್ತು:
ಅವನೇ ನನ್ನ ಹಣದಿಂದ ಬದುಕುತ್ತಿದ್ದ, ನಾನು ಏಕೆ ಅವನಿಗೆ ಬ್ಲ್ಯಾಕ್ ಮೇಲ್ ಮಾಡಲಿ. ಬ್ಲ್ಯಾಕ್ ಮೇಲ್ ಮಾಡುವದರಿಂದ ಏನು ಉಪಯೋಗವಾಗಲಿದೆ. ನನಗೇನು ಅದರಿಂದ ಖ್ಯಾತಿ ಬರುತ್ತಾ? ಹೆಚ್ಚಿನ ಮಾಹಿತಿ ಬೇಕಾದ್ರೆ ಐಪಿಎಸ್ ಮಹಿಳಾ ಅಧಿಕಾರಿಯೊಬ್ಬರನ್ನು ಭೇಟಿ ಮಾಡಿ. ಅವರೊಂದಿಗೆ ಮಾತನಾಡಿ ಈ ವ್ಯಕ್ತಿಯ ಬಗ್ಗೆ ದೂರು ನೀಡಿದ್ದೇನೆ. ಈ ವಿಷಯ ಸಂಸದ ಪ್ರತಾಪ್ ಸಿಂಹರಿಗೂ ಗೊತ್ತಿದೆ. ಪ್ರತಾಪ್ ಸಿಂಹರಿಗೆ ನಮ್ಮಿಬ್ಬರ ಮಾತುಕತೆ ಸ್ಕ್ರೀನ್ ಶಾಟ್ ಕಳುಹಿಸಿದ್ದೇನೆ.
ನಾನು ಭಾವಿಪತ್ನಿಯಾಗಿದ್ದೆ:
ನಾನು ಅವನ ಗರ್ಲ್ ಫ್ರೆಂಡ್ ಅಲ್ಲ, ಭಾವಿಪತ್ನಿಯಾಗಿದ್ದವಳು. ನಮ್ಮಿಬ್ಬರ ನಿಶ್ಚಿತಾರ್ಥ ಸಹ ನಡೆದಿದೆ. ನಾವಿಬ್ಬರು ಮದುವೆ ಆಗಲಿದ್ದೇವೆ ಎಂದು ಇಡೀ ಜಗತ್ತಿಗೆ ಗೊತ್ತಿತ್ತು. ನಿಶ್ಚಿತಾರ್ಥದ ಬಳಿಕ ಪ್ರಪಂಚದಲ್ಲಿ ನಾವು ಒಟ್ಟಾಗಿ ಓಡಾಡುತ್ತಿದ್ದೇವು. ಈಗ ಎಲ್ಲವೂ ಸುಳ್ಳು ಎಂದು ಹೇಗೆ ತಪ್ಪಿಸಿಕೊಳ್ಳಲು ಸಾಧ್ಯ? ಎಲ್ಲರಿಗೂ ನಾವು ಜೊತೆಯಾಗಿ ಒಡಾಡುತ್ತಿದ್ದ ವಿಚಾರ ಗೊತ್ತಿತ್ತು. ಮಾತುಕತೆಯ ಸ್ಕ್ರೀನ್ ಶಾಟ್ ಗಳು, ಫೋಟೋಗಳು ಇದೆಲ್ಲವೂ ಎಲ್ಲರಿಗೂ ಗೊತ್ತಿದೆ. ಆದ್ರೆ ಈ ವಿಷಯ ಹೇಗೆ ಲೀಕ್ ಆಯ್ತು ಎಂಬುವುದು ನನಗೆ ಗೊತ್ತಿಲ್ಲ.
‘ಹಿ ಈಸ್ ಡೇಂಜರಸ್’:
ಈ ಎಲ್ಲ ಬೆಳವಣಿಗೆಯ ಬಳಿಕ ನಾವಿಬ್ಬರು ಒಳ್ಳೆಯ ಸ್ನೇಹಿತರಾಗಿದ್ದೇವೆ. ಆತ ಟಿಕೆಟ್ ಪಡೆಯಲು ಪ್ರಯತ್ನಿಸುತ್ತಿರೋದು ಗೊತ್ತಿತ್ತು. ತೊಂದರೆ ಕೊಡುವುದಿದ್ದರೆ ಅಂದೆ ಕೊಡುತ್ತಿದ್ದೆ. ಸಂತೋಷ್ ಜೀ ಮತ್ತು ಮುಕುಂದ್ ಜೀ ಸಹಾಯದಿಂದ ಆತ ಟಿಕೆಟ್ ಪಡೆದುಕೊಂಡಿದ್ದಾನೆ. ನಾನು ಪ್ರಧಾನಿ ನರೇಂದ್ರ ಮೋದಿ ಸಲಹೆಗಾರರ ಮಾನಸ ಪುತ್ರಿ. ನಾವಿಬ್ಬರು ಮದುವೆ ಆಗಬೇಕು ಎಂದಿದ್ದವರು, ನಾನು ಅದರಿಂದ ಹೊರ ನಡೆದೆ ಅಷ್ಟೇ. ಸುರಭಿ ಎಂಬವರನ್ನು ನೀವು ಸಂಪರ್ಕ ಮಾಡಿ ಮಾತನಾಡಿ. ನನಗೆ ಬಿಜೆಪಿ ಶಾಸಕರೊಬ್ಬರು ಫೋನ್ ಮಾಡಿ, ಸುರಭಿ ಎಂಬವರು ಬಿಜೆಪಿ, ಆರ್‍ಎಸ್‍ಎಸ್ ಮುಖಂಡರೊಂದಿಗೆ ಮಾತನಾಡಿ ವಿಷಯ ತಿಳಿಸಿದ್ದಾರೆ. ತೇಜಸ್ವಿನಿ ಅನಂತ್ ಕುಮಾರ್ ಅವರೊಂದಿಗೆ ಮಾತನಾಡಿದ್ದಾರೆ. ಆಕೆಯೇ ಅವನಿಂದ ಮೊದಲು ದೌರ್ಜನ್ಯಕ್ಕೆ ತುತ್ತಾದವಳು. ಮುಂಬೈನಲ್ಲಿ ಐಶ್ವರ್ಯ ಎಂಬವರ ಬಗ್ಗೆ ಕೇಳಿದ್ದೇನೆ. ಒಂದು ವೇಳೆ ಆತ ಎಂಪಿ ಆದ್ರೆ ‘ಹಿ ಈಸ್ ಡೇಂಜರಸ್’ (He Is Dangerous) ಎಂದು ಆಡಿಯೋದಲ್ಲಿ ಸೋಮ್ ದತ್ತಾ ಹೇಳಿಕೊಂಡಿದ್ದಾರೆ.
https://www.youtube.com/watch?v=b_yx7ATOliM